ಅಮೆರಿಕಾದಾದ್ಯಂತ ಕೊರೋನಾ ಪ್ರಕರಣಗಳಲ್ಲಿ ಇಳಿಕೆ: ಡೊನಾಲ್ಡ್ ಟ್ರಂಪ್

ದೇಶವನ್ನೆ ಗಡಗಡ ನಡುಗಿಸಿದ್ದ ಅಮೆರಿಕದಲ್ಲಿ, ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಕರೋನ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್ : ದೇಶವನ್ನೆ ಗಡಗಡ ನಡುಗಿಸಿದ್ದ ಅಮೆರಿಕದಲ್ಲಿ, ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಕರೋನ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

"ಕೊರೊನಾ ಸೋಂಕು  ಪ್ರಕರಣಗಳ ಸಂಖ್ಯೆ ದೇಶಾದ್ಯಂತ ಕೆಳಮುಖವಾಗುತ್ತಿರುವುದು ನಿಜಕ್ಕೂ ಬಹಳ ಒಳ್ಳೆಯ, ಸಂತಸದ  ಸುದ್ದಿ, ಎಂದು ಟ್ರಂಪ್ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.

ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದಲ್ಲಿ  ಒಟ್ಟು 1,486,423 ಕೋವಿಡ್-19 ಪ್ರಕರಣಗಳು ದೃಡಪಟ್ಟಿದ್ದು,  89,550 ಹೆಚ್ಚು ಜನರು ಮೃತಪಟ್ಟಿದ್ದಾರೆ. ಮತ್ತು ಈವರಗೆ 268,000 ಕ್ಕೂ ಹೆಚ್ಚು ರೋಗಿಗಳು ಚೇತರಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com