ನಾಲ್ಕೇ ದಿನಕ್ಕೆ ಕೊರೋನಾದಿಂದ ಚೇತರಿಕೆ, ಸೃಷ್ಠಿಯಾಯ್ತ ದಿವ್ಯೌಷಧ!

ಕೊರೋನಾ ಮಹಾಮಾರಿ ಜಗತ್ತನ್ನೇ ಕಂಗೆಡಿಸಿದೆ. ಇದರ ಮಧ್ಯೆ ಬಲಿಷ್ಠ ರಾಷ್ಟ್ರಗಳೇ ಕೊರೋನಾಗೆ ತತ್ತರಿಸಿದ್ದು ಇದೀಗ ನೂರಾರು ಕಂಪನಿಗಳು ತಾಮುಂದು ನಾಮುಂದು ಅಂತ ಕೊರೋನಾಗಾಗಿ ಹೊಸ ಲಸಿಕೆ ಕಂಡು ಹಿಡಿಯುವಲ್ಲಿ ನಿರತರವಾಗಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ಮಹಾಮಾರಿ ಜಗತ್ತನ್ನೇ ಕಂಗೆಡಿಸಿದೆ. ಇದರ ಮಧ್ಯೆ ಬಲಿಷ್ಠ ರಾಷ್ಟ್ರಗಳೇ ಕೊರೋನಾಗೆ ತತ್ತರಿಸಿದ್ದು ಇದೀಗ ನೂರಾರು ಕಂಪನಿಗಳು ತಾಮುಂದು ನಾಮುಂದು ಅಂತ ಕೊರೋನಾಗಾಗಿ ಹೊಸ ಲಸಿಕೆ ಕಂಡು ಹಿಡಿಯುವಲ್ಲಿ ನಿರತರವಾಗಿವೆ. 

ಇನ್ನು ಕೆಲ ಕಂಪನಿಗಳು ತಮ್ಮಲ್ಲಿರುವ ಹಳೆಯ ಲಸಿಕೆಗಳನ್ನೇ ಮಾರ್ಪಡಿಸಿ ಕೊರೋನಾ ವಿರುದ್ಧ ಹೋರಾಡುತ್ತಿವೆ. ಇನ್ನು ಔಷಧಿ ಲೋಕದಲ್ಲಿ ಹೊಸದೊಂದು ಪವಾಡವೆ ನಡೆದುಹೋಗಿದೆ. 

ಹೌದು, ಬಾಂಗ್ಲಾದೇಶದಲ್ಲಿ ಎರಡು ಔಷಧಗಳು ಕೊರೋನಾ ಸೋಂಕಿತರ ಮೇಲೆ ಪವಾಡವನ್ನೇ ಮಾಡಿದ್ದು ಅವರು ನಾಲ್ಕೇ ದಿನಕ್ಕೆ ಚೇತರಿಕೆ ಕಾಣುತ್ತಿದ್ದಾರೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. 

ಬಾಂಗ್ಲಾದೇಶ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ಅವರಿಗೆ ಹೆಚ್ಚು ಬಳಕೆಯಲ್ಲಿರುವ ಎರಡು ಔಷಧಗಳನ್ನು ನೀಡಿದ್ದು ಅವರು ನಾಲ್ಕೇ ದಿನಕ್ಕೆ ಚೇತರಿಸಿಕೊಂಡಿದ್ದಾರೆ ಎಂದು ಕಾಲೇಜಿನ ಔಷದ ವಿಭಾಗದ ಮುಖ್ಯಸ್ಥ ಡಾ. ಮೊಹಮ್ಮದ್ ತಾರೆಖ್ ಆಲಂ ಹೇಳಿದ್ದಾರೆ. 

ಒಟ್ಟಾರೆ 60 ಮಂದಿ ಕೊರೋನಾ ರೋಗಿಗಳ ಮೇಲೆ ಐವರ್ ಮೆಕ್ಟಿನ್ ಲಸಿಕೆಯ ಒಂದು ಡೋಸ್ ಹಾಗೂ ಡಾಕ್ಸಿಸೈಕ್ಲಿನ್ ಆ್ಯಂಟಿಬಯೋಟಿಕ್ ಲಸಿಕೆಯನ್ನು ಸೇರಿಸಿ ನೀಡಿದಾಗ ರೋಗಿಗಳು ಬಹುಬೇಗ ಚೇತರಿಕೆ ಕಂಡಿದ್ದಾರೆ. ಇದು ಅವರ ಮೇಲೆ ಯಾವುದೇ ಅಡ್ಡಪರಿಣಾಮವನ್ನು ಉಂಟು ಮಾಡಿಲ್ಲ ಎಂದು ಆಲಂ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com