ಕೋವಿಡ್-19 ಭೀತಿ: ಮಲೇರಿಯಾ ವಿರೋಧಿ ಔಷಧ ತೆಗೆದುಕೊಳ್ಳುತ್ತಿದ್ದೀನಿ ಎಂದ ಡೊನಾಲ್ಡ್ ಟ್ರಂಪ್

ಕೋವಿಡ್-19 ಭೀತಿಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ಮಲೇರಿಯಾ ವಿರೋಧಿ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ನ್ನು ತೆಗೆದುಕೊಳ್ಳುತ್ತಿರುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಕೋವಿಡ್-19 ಭೀತಿಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ಮಲೇರಿಯಾ ವಿರೋಧಿ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ನ್ನು ತೆಗೆದುಕೊಳ್ಳುತ್ತಿರುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸುಮಾರು ಒಂದೂವರೆ ವಾರದಿಂದ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ತೆಗೆದುಕೊಳ್ಳುತ್ತಿರುವುದಾಗಿ ಶ್ವೇತಭವನದಲ್ಲಿ ಸುದ್ದಿಗಾರರಿಗೆ ಡೊನಾಲ್ಡ್ ಟ್ರಂಪ್ ತಿಳಿಸಿದರು.

ಕಳೆದ ಮೂರು ತಿಂಗಳಿನಿಂದ ಅಮೆರಿಕಾದಲ್ಲಿ 90 ಸಾವಿರ ಜನರನ್ನು ಬಲಿಪಡೆದುಕೊಂಡಿರುವ ಕೋವಿಡ್-19 ಸೋಂಕಿನ ಸಣ್ಣ ಲಕ್ಷಣಗಳು ಕೂಡಾ ತಮ್ಮಗಿಲ್ಲ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. 

ಕೋವಿಡ್-19 ಹಿನ್ನೆಲೆಯಲ್ಲಿ ವೈದ್ಯರನ್ನು ಸಂಪರ್ಕಿಸಿದ್ದು, ಅವರು ಯಾವುದನ್ನೂ ಶಿಫಾರಸು ಮಾಡಿಲ್ಲ, ಆದರೆ, ಪ್ರತಿದಿನ  ಮಲೇರಿಯಾ ವಿರುದ್ಧದ ಔಷಧ ತೆಗೆದುಕೊಳ್ಳುತ್ತೇನೆ. ಕೆಲ ಸಮಯ ಆದ ನಂತರ ನಿಲ್ಲಿಸುತ್ತೇನೆ. ನಾನು ಚಿಕಿತ್ಸೆ ಅಥವಾ ಲಸಿಕೆ ಕಂಡುಹಿಡಿಯಲು ಬಯಸುತ್ತೇನೆ. ಅದು ಶೀಘ್ರದಲ್ಲಿಯೇ ಆಗಲಿದೆ ಎಂದು ಟ್ರಂಪ್ ಭರವಸೆ ವ್ಯಕ್ತಪಡಿಸಿದ್ದಾರೆ. 
    
ಔಷಧವನ್ನು ತೆಗೆದುಕೊಳ್ಳುತ್ತಿರುವುದಾಗಿ ಟ್ರಂಪ್ ಹೇಳಿಕೆ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷರ ಆರೋಗ್ಯ ಚೆನ್ನಾಗಿರುವುದಾಗಿ ಶ್ವೇತಭವನದ ವೈದ್ಯರು ಸ್ಪಷ್ಪಪಡಿಸಿದ್ದಾರೆ.    

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com