ಪಾಕಿಸ್ತಾನದ ಮಹಿಳಾ ರಾಜಕಾರಣಿ ಕೊರೋನಾ ವೈರಸ್‌ಗೆ ಬಲಿ

ಪಾಕಿಸ್ತಾನದ ಆಡಳಿತಾರೂಢ ತಹ್ರೀಕ್‌ ಇ-ಇನ್ಸಾಫ್ (ಪಿಟಿಐ) ಪಕ್ಷದ ಮಹಿಳಾ ರಾಜಕಾರಣಿಯೊಬ್ಬರು ಬುಧವಾರ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

Published: 20th May 2020 05:38 PM  |   Last Updated: 20th May 2020 05:38 PM   |  A+A-


pak-covid

ಶಹೀನ್ ರಝಾ

Posted By : Lingaraj Badiger
Source : UNI

ಇಸ್ಲಾಮಾಬಾದ್: ಪಾಕಿಸ್ತಾನದ ಆಡಳಿತಾರೂಢ ತಹ್ರೀಕ್‌ ಇ-ಇನ್ಸಾಫ್ (ಪಿಟಿಐ) ಪಕ್ಷದ ಮಹಿಳಾ ರಾಜಕಾರಣಿಯೊಬ್ಬರು ಬುಧವಾರ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಲಾಹೋರ್‌ನ ಮಯೊ ಆಸ್ಪತ್ರೆಯಲ್ಲಿ ಸೋಮವಾರದಿಂದ ವೆಂಟಿಲೇಟರ್‌ನಲ್ಲಿದ್ದ ಶಹೀನ್ ರಝಾ (60) ನಿಧನರಾಗಿದ್ದಾರೆ. 
ಗುಜ್ರಾನ್‌ ವಾಲಾ ಕ್ಷೇತ್ರದ ಶಾಸಕರಾಗಿರುವ ಅವರಿಗೆ ಶನಿವಾರ ಕೊವಿಡ್‌-19 ಲಕ್ಷ್ಮಣಗಳು ಕಂಡುಬಂದಿತ್ತು. ಬಳಿಕ ಅವರನ್ನು ಕ್ವಾರಂಟೈನ್‌ ನಲ್ಲಿ ಇಡಲಾಗಿತ್ತು. ನಂತರ ಅವರನ್ನು ಪರೀಕ್ಷಿಸಿದಾಗ ಅವರಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ನಂತರ ಅವರನ್ನು ಐಸೋಲೇಷನ್ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿತ್ತು ಎಂದು 'ಡಾನ್‌' ವರದಿ ಮಾಡಿದೆ.

ಪಂಜಾಬ್ ಅಸೆಂಬ್ಲಿ ಸದಸ್ಯರೂ ಆಗಿರುವ ರಝಾ ಕೆಲವು ಸಮಯದಿಂದ ಸಂಪರ್ಕತಡೆ ಕೇಂದ್ರಗಳನ್ನು ಪರಿಶೀಲಿಸುತ್ತಿದ್ದರು. ಅವರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ರೋಗಿಯೂ ಆಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp