ಅಮೆರಿಕಾದಲ್ಲಿ ಕೊರೋನಾ ಆರ್ಭಟ: ಒಂದೇ ದಿನ 1,531 ಮಂದಿ ಸಾವು

ಅಮೆರಿಕಾದಲ್ಲಿ ಕೊರೋನಾ ಆರ್ಭಟ ಏರುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 1,531 ಮಂದಿ ಬಲಿಯಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ಅಮೆರಿಕಾದಲ್ಲಿ ಕೊರೋನಾ ಆರ್ಭಟ ಏರುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 1,531 ಮಂದಿ ಬಲಿಯಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ಬುಧವಾರ ಸಾವನ್ನಪ್ಪಿದ 1,531 ಮಂದಿಯೊಂದಿಗೆ ಅಮೆರಿಕಾದಲ್ಲಿ ಈ ವರೆಗೂ ಮಹಾಮಾರಿ ವೈರಸ್'ಗೆ 94,994 ಮಂದಿ ಸಾವನ್ನಪ್ಪಿದ್ದಾರೆ. 

ಇನ್ನು ಸೋಂಕಿತರ ಸಂಖ್ಯೆ ಕೂಡ ಏರುತ್ತಲೇ ಇದ್ದು, ಈ ವರೆಗೂ 1,591,991 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಗುಣಮುಖರಾಗುತ್ತಿರುವವರ ಸಂಖ್ಯೆ ಏರಿಕೆ ಕಾಣುತ್ತಿದ್ದು, ಈ ವರೆಗೂ 370,076 ಸೋಂಕಿನಿಂದ ಗುಣಮುಖರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com