ಮಿಲಿಟರಿ ವೆಚ್ಚ 179 ಶತಕೋಟಿ ಡಾಲರ್ ಗೆ ಹೆಚ್ಚಿಸಿದ ಚೀನಾ: ಭಾರತಕ್ಕಿಂತ ಮೂರು ಪಟ್ಟು ಅಧಿಕ!

ಕೊರೋನಾ ವೈರಸ್ ನಡುವೆಯೂ ಚೀನಾ ದೇಶ ರಕ್ಷಣಾ ಬಜೆಟ್ ಮೊತ್ತವನ್ನು ಪ್ರಸಕ್ತ ಸಾಲಿನಲ್ಲಿ ಹೆಚ್ಚಿಸಿದ್ದು ಇದೀಗ ಭಾರೀ ಸುದ್ದಿಯಾಗಿದೆ. ವಿಶ್ವದಲ್ಲಿ ಅಮೆರಿಕ ನಂತರ ಮಿಲಿಟರಿಗೆ ಅತ್ಯಂತ ಹೆಚ್ಚು ಹಣವನ್ನು ಖರ್ಚು ಮಾಡುವ ದೇಶ ಚೀನಾ.

Published: 22nd May 2020 12:59 PM  |   Last Updated: 22nd May 2020 12:59 PM   |  A+A-


Chinese President Xi Jingping

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್

Posted By : Sumana Upadhyaya
Source : AFP

ಬೀಜಿಂಗ್: ಕೊರೋನಾ ವೈರಸ್ ನಡುವೆಯೂ ಚೀನಾ ದೇಶ ರಕ್ಷಣಾ ಬಜೆಟ್ ಮೊತ್ತವನ್ನು ಪ್ರಸಕ್ತ ಸಾಲಿನಲ್ಲಿ ಹೆಚ್ಚಿಸಿದ್ದು ಇದೀಗ ಭಾರೀ ಸುದ್ದಿಯಾಗಿದೆ. ವಿಶ್ವದಲ್ಲಿ ಅಮೆರಿಕ ನಂತರ ಮಿಲಿಟರಿಗೆ ಅತ್ಯಂತ ಹೆಚ್ಚು ಹಣವನ್ನು ಖರ್ಚು ಮಾಡುವ ದೇಶ ಚೀನಾ.

ಕಳೆದ ವರ್ಷ ರಕ್ಷಣಾ ಬಜೆಟ್ ಗೆ ಇಟ್ಟಿದ್ದ ಮೊತ್ತ 177.6 ಶತಕೋಟಿ ಡಾಲರ್ ನಿಂದ ಈ ವರ್ಷ 179 ಶತಕೋಟಿ ಡಾಲರ್ ಗೆ ಹೆಚ್ಚಿಸಿದ್ದು ಇದು ಭಾರತದ ರಕ್ಷಣಾ ಬಜೆಟ್ ಮೊತ್ತಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. ಆದರೆ ಚೀನಾದ ರಕ್ಷಣಾ ಬಜೆಟ್ ನ ಇತ್ತೀಚಿನ ವರ್ಷಗಳ ಮೊತ್ತಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಕಡಿಮೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಚೀನಾ 20 ಲಕ್ಷ ಮಿಲಿಟರಿ ಪಡೆಯನ್ನು ಹೊಂದಿರುವ ದೇಶ, ಆದರೆ ಈ ವರ್ಷ ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದ ಆರ್ಥಿಕ ದುಸ್ಥಿತಿಯಿಂದ ಅದರ ರಕ್ಷಣಾ ಬಜೆಟ್ ಅಭಿವೃದ್ಧಿ ದರ ಶೇಕಡಾ 6.6ರಷ್ಟಾಗಿದೆ. ಸತತ 5ನೇ ವರ್ಷ ಚೀನಾದ ರಕ್ಷಣಾ ಬಜೆಟ್ ಒಂದಂಕೆಯ ಏರಿಕೆ ಕಂಡಿದೆ. ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಕಡಿಮೆ ಅಂಕದ ಬೆಳವಣಿಗೆ, ಇಂದು ಬಜೆಟ್ ನ ಕರಡು ಪ್ರತಿಯನ್ನು ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (ಎನ್ ಪಿಸಿ) ಮಂಡಿಸಿತು ಎಂದು ದೇಶೀಯ ಮಾಧ್ಯಮ ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ವಿಶ್ವದಲ್ಲಿ ರಕ್ಷಣಾ ಕ್ಷೇತ್ರಕ್ಕೆ ಅತಿ ಹೆಚ್ಚು ಖರ್ಚು ಮಾಡುವ ದೇಶ ಅಮೆರಿಕ. ಕಳೆದ ವರ್ಷ ಚೀನಾ ಮಾಡಿದ ಖರ್ಚು ಅಮೆರಿಕಾದ ಮಿಲಿಟರಿ ವೆಚ್ಚದ ಕಾಲು ಭಾಗ ಮಾತ್ರ.ಇನ್ನು ದೇಶದ ಪ್ರತಿಯೊಬ್ಬರಿಗೂ ಮಾಡುವ ಖರ್ಚು ಅಮೆರಿಕಾದ 17ನೇ ಒಂದು ಭಾಗದಷ್ಟು ಮಾತ್ರ ಎಂದು ಕೂಡ ಸುದ್ದಿಸಂಸ್ಥೆ ವರದಿ ಮಾಡಿದೆ.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp