ಪಾಕ್ ವಿಮಾನ ದುರಂತ: ಸಾವಿನ ಸಂಖ್ಯೆ 97ಕ್ಕೆ ಏರಿಕೆ, ಇಬ್ಬರು ಪ್ರಾಣಾಪಾಯದಿಂದ ಪಾರು

ಪಾಕಿಸ್ತಾನದ ಕರಾಚಿ ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 97ಕ್ಕೆ ಏರಿಕೆಯಾಗಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಎಂದು ಪಾಕಿಸ್ತಾನದ ಸಿಂಧ್ ಆರೋಗ್ಯ ಇಲಾಖೆಯ ವಕ್ತಾರ ಮೀರನ್ ಯೂಸುಫ್ ಶನಿವಾರ ಖಚಿತಪಡಿಸಿದ್ದಾರೆ.

Published: 23rd May 2020 08:48 AM  |   Last Updated: 23rd May 2020 08:51 AM   |  A+A-


Plane crash

ವಿಮಾನ ದುರಂತ ಸಂಭವಿಸಿದ ಸ್ಥಳ

Posted By : Manjula VN
Source : The New Indian Express

ಇಸ್ಲಾಮಾಬಾದ್: ಪಾಕಿಸ್ತಾನದ ಕರಾಚಿ ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 97ಕ್ಕೆ ಏರಿಕೆಯಾಗಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಎಂದು ಪಾಕಿಸ್ತಾನದ ಸಿಂಧ್ ಆರೋಗ್ಯ ಇಲಾಖೆಯ ವಕ್ತಾರ ಮೀರನ್ ಯೂಸುಫ್ ಶನಿವಾರ ಖಚಿತಪಡಿಸಿದ್ದಾರೆ.

ಪಾಕಿಸ್ತಾನದ ಇಂಟರ್ ನ್ಯಾಷನಲ್ ಏರ್'ಲೈನ್ಸ್'ಗೆ ಸೇರಿದ ವಿಮಾನ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹ್ನ ವಿಮಾನ ಇಳಿಯುವಾಗ ಅದು ವಸತಿ ಸಮುಚ್ಚಯದಲ್ಲಿ ಅಪ್ಪಳಿಸಿ ಅಪಫಾತಕ್ಕೀಡಾಗಿತ್ತು. ಆಗ ವಿಮಾನದಲ್ಲಿ 107 ಜನರಿದ್ದರು ಎಂದು ಹೇಳಲಾಗಿದೆ ಆದರೆ ಇಬ್ಬರು ಪವಾಡ ಸದೃಶ ರೀತಿಯಲ್ಲಿ ಬದುಕಿದ್ದಾರೆ ಎಂದು ಯೂಸುಫ್ ತನ್ನ ಟ್ವಿಟ್ಟರ್ ಪುಟದಲ್ಲಿ ಬರೆದುಕೊಂಡಿದ್ದಾರೆ.

ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಮೃತದೇಹಗಳನ್ನು ಹೊರ ತೆಗೆಯಲಾಗುತ್ತಿದೆ. ಈ ವರೆಗೂ 19 ಮಂದಿಯ ಗುರುತುಗಳನ್ನು ಪತ್ತೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 

ನಿನ್ನೆ ಮಧ್ಯಾಹ್ನದಿಂದ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿದ್ದು, ಈ ವರೆಗೂ ಮುಂದುವರೆದಿದೆ ಎಂದು ಪಾಕಿಸ್ತಾನದ ದಿ ಡಾನ್ ಪತ್ರಿಕೆ ತನ್ನ ವೆಬೈ'ಸೈಟ್ ನಲ್ಲಿ ವರದಿ ಮಾಡಿದೆ. 

ವಿಮಾನ ಇಳಿಸುವ ವೇಳೆ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ ಎಂದು ಪೈಲಟ್ ಮಾಹಿತಿ ನೀಡಿದ್ದರು, ಕರಾಚಿ ವಿಮಾನ ನಿಲ್ದಾಣದ ಜೊತೆ ವಿಮಾನವು ಮಧ್ಯಾಹ್ನ 2.37ರ ಸುಮಾರಿಗೆ ಸಂಪರ್ಕ ಕಳೆದುಕೊಂಡಿತ್ತು ಎಂದು ಪಿಐಎ ವಕ್ತಾರ ಅಬ್ದುಲ್ಲಾ ಹಫೀಜ್ ತಿಳಿಸಿದ್ದರು. 

ಕರಾಚಿಯ ಮಾಡೆಲ್ ಕಾಲೋನಿಯ ಮನೆಗಳ ಮೇಲೆಯೇ ವಿಮಾನ ಪತನಗೊಂಡಿದ್ದು, ಕೆಲ ನಿಮಿಷಗಳಲ್ಲೇ ಬೆಂಕಿಯ ಜ್ವಾಲೆ ಸ್ಥಳದ ಸುತ್ತಲೂ ಆವರಿಸಿಕೊಂಡಿತ್ತು. ಘಟನೆಯಲ್ಲಿ ಹಲವು ಮನೆಗಲು ಹಾಗೂ ವಾಹನಗಳು ಜಖಂಗೊಂಡಿದ್ದವು. ಸ್ಥಳದಲ್ಲಿ ಸುಮಾರು 30ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. 

Stay up to date on all the latest ಅಂತಾರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp