ಭಾರತಕ್ಕೆ ಸೆಡ್ಡು: 12 ವರ್ಷಗಳ ಬಳಿಕ ಚೀನಾ ಸಂಪರ್ಕಿಸುವ ರಸ್ತೆ ಕಾಮಗಾರಿ ಆರಂಭಿಸಿದ ನೇಪಾಳ!

ಚೀನಾಕ್ಕೆ ಸಂಪರ್ಕ ಕಲ್ಪಿಸುವ ಡಾರ್ಚುಲಾ ಜಿಲ್ಲೆಯಲ್ಲಿ 130 ಕಿ.ಮೀ ಉದ್ದದ ಡಾರ್ಚುಲಾ-ಟಿಂಕರ್ ರಸ್ತೆ ಯೋಜನೆಯ ಕೆಲಸವನ್ನು ನೇಪಾಳ ಸರ್ಕಾರ 12 ವರ್ಷಗಳ ನಂತರ ಪುನರಾರಂಭಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಠ್ಮಂಡು: ಚೀನಾಕ್ಕೆ ಸಂಪರ್ಕ ಕಲ್ಪಿಸುವ ಡಾರ್ಚುಲಾ ಜಿಲ್ಲೆಯಲ್ಲಿ 130 ಕಿ.ಮೀ ಉದ್ದದ ಡಾರ್ಚುಲಾ-ಟಿಂಕರ್ ರಸ್ತೆ ಯೋಜನೆಯ ಕೆಲಸವನ್ನು ನೇಪಾಳ ಸರ್ಕಾರ 12 ವರ್ಷಗಳ ನಂತರ ಪುನರಾರಂಭಿಸಿದೆ. 

ಉತ್ತರಖಂಡದ ಚೀನಾ ಗಡಿಯಲ್ಲಿ ಲಿಪುಲೇಶ್ ಪಾಸ್ ಸಂಪರ್ಕಿಸುವಂತೆ ಹೊಸ ರಸ್ತೆಯನ್ನು ಭಾರತ ನಿರ್ಮಿಸಿತ್ತು. ಇದಕ್ಕೆ ನೇಪಾಳ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇದೀಗ ಟಿಂಕರ್ ಪಾಸ್ ಮೂಲಕ ನೇಪಾಳ-ಚೀನಾ ಗಡಿ ವ್ಯಾಪಾರಕ್ಕೆ ಅನುಕೂಲವಾಗುವಂತೆ ರಸ್ತೆ ಕಾಮಗಾರಿ ನಿರ್ಮಾಣಕ್ಕೆ ಮುಂದಾಗಿದೆ. 2008 ರಲ್ಲಿ ಮಂಜೂರಾದ ರಸ್ತೆ ಯೋಜನೆ ಕಠಿಣ ಭೂಪ್ರದೇಶ ಮತ್ತು ಕಠಿಣ ಹವಾಮಾನ ಪರಿಸ್ಥಿತಿಯಿಂದ ಕಾಮಗಾರಿ ನಿಂತುಹೋಗಿತ್ತು.

ಈ ಯೋಜನೆಗಾಗಿ ಸುಮಾರು 50 ಕಿ.ಮೀ ರಸ್ತೆಯು ಉತ್ತರಾಖಂಡದ ಜೊತೆಗೆ ಭಾರತದ ಗಡಿಯೊಂದಿಗೆ ಸಮಾನಾಂತರವಾಗಿ ಚಲಿಸುತ್ತದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ರಸ್ತೆಯ ಉಳಿದ ಭಾಗವನ್ನು ಪೂರ್ಣಗೊಳಿಸಲು ನೇಪಾಳ ಸರ್ಕಾರ ತನ್ನ ಸೈನ್ಯವನ್ನು ನಿಯೋಜಿಸಲು ನಿರ್ಧರಿಸಿದೆ ಎಂದು ಮೂಲಗಳು ಖಚಿತಪಡಿಸಿವೆ. ಈ ರಸ್ತೆ ಮೂಲಕ ವ್ಯಾಪಾರ ಮಾತ್ರವಲ್ಲದೆ ಪ್ರವಾಸೋದ್ಯಮವನ್ನೂ ಉತ್ತೇಜಿಲಿಸಿದೆ. 

ಮೇ 8ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉತ್ತರಾಖಂಡದ ಧಾರ್ಚುಲಕ್ಕೆ ಲಿಪುಲೆಖ್ ಪಾಸ್ ಅನ್ನು ಸಂಪರ್ಕಿಸುವ 80 ಕಿ.ಮೀ ರಸ್ತೆಯನ್ನು ಉದ್ಘಾಟಿಸಿದ ನಂತರ ನೇಪಾಳ ತೀವ್ರವಾಗಿ ಪ್ರತಿಭಟಿಸಿತ್ತು. ಇದೀಗ ರಸ್ತೆ ಯೋಜನೆ ಪುನರಾರಂಭವು ಮಹತ್ವ ಪಡೆದುಕೊಂಡಿದೆ. 

ರಸ್ತೆ ಯೋಜನೆಯನ್ನು ಪುನರಾರಂಭಿಸುವುದರ ಹಿಂದಿನ ಅಧಿಕೃತ ಕಾರಣ ವಲಸೆ ಹಳ್ಳಿಗಳಾದ ಟಿಂಕರ್ ಮತ್ತು ಚಾಂಗ್ರೂ ಜನರ ಸಂಚಾರಕ್ಕೆ ಅನುವು ಮಾಡಿಕೊಡುವುದು ಎಂದು ಮೂಲವೊಂದು ತಿಳಿಸಿದೆ. ಇನ್ನು ಉಳಿದಿರುವ 87 ಕಿ.ಮೀ ರಸ್ತೆಯನ್ನು ಪೂರ್ಣಗೊಳಿಸುವ ಸಲುವಾಗಿ ನೇಪಾಳ ಸೇನೆಯು ಘಾಟಿಯಾಬಘರ್‌ನಲ್ಲಿ ಬೇಸ್ ಕ್ಯಾಂಪ್ ಸ್ಥಾಪಿಸುತ್ತಿದೆ.

2015ರಲ್ಲಿ ಕೆಪಿ ಶರ್ಮಾ ಒಲಿ ನೇಪಾಳದ ಪ್ರಧಾನಿಯಾದ ನಂತರ, ಕಾಠ್ಮಂಡು ಬೀಜಿಂಗ್‌ನೊಂದಿಗಿನ ಸಂಬಂಧ ಬಲಗೊಂಡಿತ್ತು. ಇನ್ನು ನೇಪಾಳದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಚೀನಾ ಭಾರಿ ಹೂಡಿಕೆ ಮಾಡಿದ ನಂತರ ಈ ಸಂಬಂಧ ಮತ್ತಷ್ಟು ಬಲಗೊಂಡಿದೆ. ನೇಪಾಳವು ಚೀನಾದ ಮಹತ್ವಾಕಾಂಕ್ಷೆಯ ಬೆಲ್ಟ್ ಅಂಡ್ ರೋಡ್ ಯೋಜನೆಯಲ್ಲೂ ಸೇರಿಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com