ಸಂಕಷ್ಟದಲ್ಲಿದ್ದ ನ್ಯೂಜಿಲೆಂಡ್ ಪ್ರಸಿದ್ದ ಮಾಧ್ಯಮ ಕಂಪನಿಯನ್ನು 1 ಡಾಲರ್ ಗೆ ಖರೀದಿಸಿದ ಸಿಇಒ!

ನ್ಯೂಜಿಲೆಂಡ್‌ನ ಅತಿದೊಡ್ಡ ಮಾಧ್ಯಮ ಸಂಸ್ಥೆಯೊಂದನ್ನು ಅದರ ಮುಖ್ಯ ಕಾರ್ಯನಿರ್ವಾಹನಿಗೆ ಕೇವಲ ಒಂದು ಡಾಲರ್ ಗೆ  ಮಾರಾಟ ಮಾಡಲಾಗುತ್ತಿದೆ ಎಂದು ಮಾಲೀಕರು ಸೋಮವಾರ ಪ್ರಕಟಿಸಿದ್ದಾರೆ.
ಸ್ಟಫ್
ಸ್ಟಫ್

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ಅತಿದೊಡ್ಡ ಮಾಧ್ಯಮ ಸಂಸ್ಥೆಯೊಂದನ್ನು ಅದರ ಮುಖ್ಯ ಕಾರ್ಯನಿರ್ವಾಹನಿಗೆ ಕೇವಲ ಒಂದು ಡಾಲರ್ ಗೆ  ಮಾರಾಟ ಮಾಡಲಾಗುತ್ತಿದೆ ಎಂದು ಮಾಲೀಕರು ಸೋಮವಾರ ಪ್ರಕಟಿಸಿದ್ದಾರೆ.

ಸ್ಟಫ್ ಎಂಬ ಮಾಧ್ಯಮ ಸಂಸ್ಥೆರಾಷ್ಟ್ರದ ಅನೇಕ ದಿನಪತ್ರಿಕೆಗಳನ್ನು ಮುದ್ರಿಸುತ್ತದೆ ಮತ್ತು ಅದೇ ಹೆಸರಿನ ಜನಪ್ರಿಯ ಸುದ್ದಿ ವೆಬ್‌ಸೈಟ್ ಅನ್ನು ನಡೆಸುತ್ತದೆ. ಈ ಸಂಸ್ಥೆಯಲ್ಲಿ  400 ಪತ್ರಕರ್ತರು ಸೇರಿದಂತೆ ಸುಮಾರು 900 ಸಿಬ್ಬಂದಿ ಇದ್ದಾರೆ.

ಕೊರೋನಾವೈರಸ್ ಹಾವಳಿ ಪ್ರಾರಂಭಕ್ಕೆ ಮುನ್ನ ಆಸ್ಟ್ರೇಲಿಯಾದ ನೈನ್ ಎಂಟರ್‌ಟೈನ್‌ಮೆಂಟ್ ಮಾಲಿಕತ್ವದ ಈ ಸಂಸ್ಥೆ ಹಣಕಾಸಿನ  ವಿವಾದವನ್ನು ಎದುರಿಸುತ್ತಿತ್ತು. ಅಂದಿನಿಂಡ ಸಂಸ್ಥೆಯ  ಜಾಹೀರಾತು ಆದಾಯವು ಕುಸಿತ ಕಂಡಿದೆ.

ಆಸ್ಟ್ರೇಲಿಯಾದ ಷೇರು ಮಾರುಕಟ್ಟೆಗೆ ನೀಡಿದ ಹೇಳಿಕೆಯಲ್ಲಿ, ನೈನ್ ಸ್ಟಫ್ ಅನ್ನುಸಿಇಒ ಸೈನಾಡ್ ಬೌಚರ್ ಅವರಿಗೆ ನಿರ್ವಹಣಾ ಖರೀದಿ ಒಪ್ಪಂದದಡಿಯಲ್ಲಿ ಮಾರಾಟ ಮಾಡಲಿದ್ದು ಈ ವ್ಯವಹಾರವು ಮುಂದಿನ ಆರು ತಿಂಗಳಲ್ಲಿ ಪೂರ್ಣವಾಗಲಿದೆ.

"ಸ್ಟಫ್‌ಗೆ ಸ್ಥಳೀಯ ಮಾಲೀಕತ್ವ ಮುಖ್ಯವಾಗುತ್ತದೆ ಎಂದು ನಾವು ಯಾವಾಗಲೂ ನಂಬುತ್ತೇವೆ ಮತ್ತು ಇದು ನ್ಯೂಜಿಲೆಂಡ್‌ನ ಸ್ಪರ್ಧಾತ್ಮಕತೆ ಹಾಗೂ ಗ್ರಾಹಕರಿಗೆ ಒಳಿತು ತರಲಿದೆ ಎಂದು ನಾವು ದೃಢವಾಗಿ ನಂಬಿದ್ದೇವೆ. " ಎಂದು ನೈನ್ ಸಿಇಒ ಹಗ್ ಮಾರ್ಕ್ಸ್ ಹೇಳಿದರು.

49 ವರ್ಷದ ಬೌಚರ್ದಿ ಪ್ರೆಸ್ ಪತ್ರಿಕೆಯ ವರದಿಗಾರನಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ನಂತರ ಕಂಪನಿಯ ಕೆಲವು ಡಿಜಿಟಲ್ ಆವಿಷ್ಕಾರಗ ಹೊಂದಲು ಸಹಾಯ ಮಾಡಿದ್ದರು. ಯಾವುದೇ ಸಿಬ್ಬಂದಿ ಕಡಿತ ಅಥವಾ ವೃತ್ತಪತ್ರಿಕೆ ಮುಚ್ಚುವಿಕೆಯೋಜನೆಗಳಿಲ್ಲ ಎಂದಿರುವ ಬೌಚರ್ ಸ್ಟಫ್ ಮತ್ತು ಇತರ ಮಾಧ್ಯಮ ಕಂಪನಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಲೀಕತ್ವದ ಬದಲಾವಣೆಸಿಲ್ವರ್ ಬುಲೆಟ್ ಅಲ್ಲವೆಂದು ಅವರು ಪ್ರತಿಕ್ರಯಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com