ಜಿನ್ ಪಿಂಗ್-ಮೋದಿ
ಜಿನ್ ಪಿಂಗ್-ಮೋದಿ

ಗಡಿಯಲ್ಲಿ ಭಾರತದಿಂದಲೇ ಉಪಟಳ, ಸಮಸ್ಯೆ ಇತ್ಯಾರ್ಥಕ್ಕೆ ಮಾತುಕತೆಗೆ ನಾವು ರೆಡಿ ಎಂದು ಚೀನಾ!

ಚೀನಾದ ಆಕ್ರಮಣಕಾರಿ ನಡೆ ಕುರಿತು ಇಡೀ ವಿಶ್ವಕ್ಕೆ ತಿಳಿದಿದೆ. ಆದರೂ ಗಡಿಯಲ್ಲಿ ಭಾರತವೇ ಉಪಟಳ ನೀಡುತ್ತಿದೆ. ಸದ್ಯಕ್ಕೆ ಪರಿಸ್ಥಿತಿ ಸ್ಥಿರ ಮತ್ತು ನಿಯಂತ್ರಣದಲ್ಲಿದ್ದು ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ನಾವು ರೆಡಿ ಎಂದು ಚೀನಾ ಹೇಳಿಕೊಂಡಿದೆ. 

ನವದೆಹಲಿ: ಚೀನಾದ ಆಕ್ರಮಣಕಾರಿ ನಡೆ ಕುರಿತು ಇಡೀ ವಿಶ್ವಕ್ಕೆ ತಿಳಿದಿದೆ. ಆದರೂ ಗಡಿಯಲ್ಲಿ ಭಾರತವೇ ಉಪಟಳ ನೀಡುತ್ತಿದೆ. ಸದ್ಯಕ್ಕೆ ಪರಿಸ್ಥಿತಿ ಸ್ಥಿರ ಮತ್ತು ನಿಯಂತ್ರಣದಲ್ಲಿದ್ದು ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ನಾವು ರೆಡಿ ಎಂದು ಚೀನಾ ಹೇಳಿಕೊಂಡಿದೆ. 

ಭಾರತ-ಚೀನಾ ಗಡಿಯಲ್ಲಿ ಉದ್ಭವವಾಗಿರುವ ಸಮಸ್ಯೆಗೆ ಭಾರತದತ್ತ ಬೊಟ್ಟು ಮಾಡಿರುವ ಚೀನಾ, ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಬಯಸಿರುವುದಾಗಿ ಸ್ಪಷ್ಟಪಡಿಸಿದೆ. 

ಈ ಸಂಬಂಧ ಮಾತನಾಡಿರುವ ಚೀನಾ ವಿದೇಶಾಂಗ ಸಚಿವ ಜಾವೋ ಲಿಜಿಯಾನ್, ಗಡಿ ಸಂಬಂಧಿತ ವಿಷಯದಲ್ಲಿ ಚೀನಾದ ನಿಲುವುಗಳ ಸ್ಪಷ್ಟವಾಗಿವೆ ಎಂದು ಹೇಳಿದ್ದಾರೆ. ಭಾರತದ ಗಡಿಯಲ್ಲಿ ಚೀನಿ ಯೋಧರೆ ಉಪಟಳ ನೀಡುತ್ತಿದ್ದಾರೆ ಎಂಬುದು ಜಗತ್ತಿಗೇ ಗೊತ್ತಿದ್ದರೂ, ಚೀನಾ ಮಾತ್ರ ಭಾರತದತ್ತ ಬೊಟ್ಟು ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. 

ನಮ್ಮ ಪ್ರಾದೇಶಿಕ ಸಾರ್ವಭೌಮತ್ವ ಮತ್ತು ಸುರಕ್ಷತೆಯನ್ನು ಕಾಪಾಡಲು ಮತ್ತು ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ನಾವು ಬದ್ಧರಾಗಿದ್ದೇವೆ. ಈಗ ಚೀನಾ-ಭಾರತ ಗಡಿ ಪ್ರದೇಶದ ಪರಿಸ್ಥಿತಿ ಒಟ್ಟಾರೆ ಸ್ಥಿರವಾಗಿದೆ ಮತ್ತು ನಿಯಂತ್ರಿಸಬಹುದು ಎಂದು ಹೇಳಿದ್ದಾರೆ. 

ಉಭಯ ದೇಶಗಳ ನಡುವೆ, ನಮ್ಮಲ್ಲಿ ಉತ್ತಮ ಗಡಿ-ಸಂಬಂಧಿತ ಯಾಂತ್ರಿಕತೆ ಮತ್ತು ಸಂವಹನ ಮಾರ್ಗಗಳಿವೆ. ಚರ್ಚೆ ಮತ್ತು ಮಾತುಕತೆ ಮೂಲಕ ಸಮಸ್ಯೆಗಳನ್ನು ಸರಿಯಾಗಿ ಪರಿಹರಿಸಲು ನಾವು ಸಮರ್ಥರಾಗಿದ್ದೇವೆ ಎಂದು ಅವರು ಹೇಳಿದರು. ಗಡಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿವೆ ಎಂದರು. 

ಸುಮಾರು 3,500 ಕಿ.ಮೀ ಉದ್ದದ (ವಾಸ್ತವ ನಿಯಂತ್ರಣ ರೇಖೆ)ಎಲ್‌ಎಸಿ ಉಭಯ ದೇಶಗಳ ನಡುವಿನ ವಾಸ್ತವಿಕ ಗಡಿಯಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com