ಯಾವುದೇ ರೀತಿಯ ಕಠಿಣ ಪರಿಸ್ಥಿತಿಗೆ ಸಿದ್ದರಾಗಿ: ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ರಿಂದ ಸೇನೆಗೆ ಕರೆ

ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಶೀಥಲ ಸಮರ ಮುಂದುವರೆದಿರುವಂತೆಯೇ ಅತ್ತ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ತಮ್ಮ ಸೇನೆಗೆ ಯಾವುದೇ ರೀತಿಯ ಕಠಿಣ ಪರಿಸ್ಥಿತಿ ಸನ್ನದ್ಧರಾಗಿರುವಂತೆ ಕರೆ ನೀಡಿದ್ದಾರೆ.
ಕ್ಸಿ ಜಿನ್‌ಪಿಂಗ್
ಕ್ಸಿ ಜಿನ್‌ಪಿಂಗ್

ಬೀಜಿಂಗ್: ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಶೀಥಲ ಸಮರ ಮುಂದುವರೆದಿರುವಂತೆಯೇ ಅತ್ತ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ತಮ್ಮ ಸೇನೆಗೆ ಯಾವುದೇ ರೀತಿಯ ಕಠಿಣ ಪರಿಸ್ಥಿತಿ ಸನ್ನದ್ಧರಾಗಿರುವಂತೆ ಕರೆ ನೀಡಿದ್ದಾರೆ.

ನಿನ್ನೆ ಚೀನಾ ಸೇನಾ ನಿಯೋಗ ಉದ್ದೇಶಿಸಿ ಭಾಷಣ ಮಾಡಿದ ಅವರು, 'ಯಾವುದೇ ಪರಿಸ್ಥಿತಿ ನಿಭಾಯಿಸಲು ಸಿದ್ಧರಾಗಿರಿ. ನಾವು ಎಂಥಹ ಪರಿಸ್ಥಿತಿಗೂ ಅಣಿಗೊಂಡಿರಬೇಕು; ಸಮರಕ್ಕೆ ತಯಾರಿ ಹಾಗೂ ತರಬೇತಿಯ ತೀವ್ರತೆ ಹೆಚ್ಚಿಸಬೇಕು; ಎಲ್ಲಾ ರೀತಿಯ ಸಂಕೀರ್ಣ ಸಂದರ್ಭಗಳು  ಎದುರಾದರೂ ಸಮರ್ಪಕವಾಗಿ ನಿಭಾಯಿಸಿ ದೇಶದ ಸಾರ್ವಭೌಮತ್ವವನ್ನು ರಕ್ಷಿಸಬೇಕು ಎಂದು ಸೇನಾ ಪಡೆಗಳಿಗೆ ಕ್ಸಿ ಜಿನ್​ಪಿಂಗ್ ಆದೇಶಿಸಿದ್ದಾರೆ

ಈ ಬಗ್ಗೆ ಚೀನಾದ ಸುದ್ದಿಸಂಸ್ಥೆ ಕ್ಸಿನ್ ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಲಡಾಕ್​ನಲ್ಲಿ ಭಾರತ ಮತ್ತು ಚೀನಾ ಮಧ್ಯೆ ಉದ್ಭವಿಸಿರುವ ಗಡಿಬಿಕ್ಕಟ್ಟಿನ ಬೆನ್ನಲ್ಲೇ ಚೀನಾ ಅಧ್ಯಕ್ಷರ ಈ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ. ಭಾರತದ ಗಡಿಯಲ್ಲಿ ಚೀನಾ ಡ್ರೋಣ್ ಹಾರಾಟ ನಡೆಸುತ್ತಿದ್ದರಿಂದ  ಭಾರತದ ವಿರುದ್ಧವೇ ಚೀನಾ ಯುದ್ಧ ಘೋಷಿಸಿತ್ತಾ ಎಂಬ ಅನುಮಾನ ವ್ಯಕ್ತವಾಗಿದೆ. ಚೀನಾದ ಈ ಆಕ್ರಮಣಕಾರಿ ವರ್ತನೆಯಿಂದಾಗಿ ಎಲ್ಲರ ಕಣ್ಣು ಈಗ ಭಾರತದ ಗಡಿಭಾಗಗಳತ್ತ ನೆಟ್ಟಿದೆ. ಸಿಕ್ಕಿಮ್ ಮತ್ತು ಲಡಾಕ್​ನಲ್ಲಿ ಗಡಿ ತಕರಾರು ಮಾಡುತ್ತಿರುವ ಚೀನಾ ಮುಂದೆ ಯಾವ ಹೆಜ್ಜೆ  ಇಡುತ್ತದೆ ಯಾರಿಗೂ ಅಂದಾಜು ಮಾಡಲು ಸಾಧ್ಯವಿಲ್ಲ. 

ಭಾರತವಷ್ಟೇ ಅಲ್ಲ, ಅಮೆರಿಕದೊಂದಿಗೂ ಚೀನಾ ಸಂಘರ್ಷ
ಭಾರತವಷ್ಟೇ ಅಲ್ಲ, ಅಮೆರಿಕದೊಂದಿಗೂ ಚೀನಾ ಸಂಘರ್ಷಕ್ಕಿಳಿಯುವ ಸಾಧ್ಯತೆ ಇಲ್ಲದಿಲ್ಲ. ದಕ್ಷಿಣ ಚೀನಾ ಸಾಗರದಲ್ಲಿ ಅಮೆರಿಕದ ನೌಕಾಪಡೆ ಪಹರೆ ನಡೆಸುತ್ತಿರುವುದು ಚೀನಾದ ಕೆಂಗಣ್ಣಿಗೆ ಕಾರಣವಾಗಿದೆ. ಕೊರೋನಾ ವೈರಸ್ ಸಂಬಂಧ ತಿಕ್ಕಾಟದಲ್ಲಿರುವ ಈ ಎರಡು ದೇಶಗಳು ದಕ್ಷಿಣ  ಚೀನಾ ವಿಚಾರಕ್ಕೆ ಎದುರುಬದುರಾದರೆ ಅಚ್ಚರಿ ಇಲ್ಲ. ಭಾರತ ಅಮೆರಿಕ ಮಾತ್ರವಲ್ಲದೇ ಹಾಗೆಯೇ, ತೈವಾನ್ ವಿಚಾರಕ್ಕೂ ಚೀನಾ ತಲೆಕೆಡಿಸಿಕೊಂಡಿದೆ. ತೈವಾನ್ ತನ್ನ ಪ್ರಾಂತ್ಯ ಎಂದು ಹೇಳುತ್ತಲೇ ಬಂದಿರುವ ಚೀನಾ, ಅಲ್ಲಿಯೂ ಏನಾದರೂ ಮಿಲಿಟರಿ ಕ್ರಮ ಕೈಗೊಳ್ಳುವ ಸಾಧ್ಯತೆ  ಇದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com