ಗಡಿ ಉದ್ವಿಗ್ನತೆ: ಭಾರತ-ಚೀನಾ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ - ಡೊನಾಲ್ಡ್ ಟ್ರಂಪ್

ಗಡಿಯಲ್ಲಿ ಶುರುವಾಗಿರುವ ಉದ್ವಿಗ್ನತೆ ಶಮನಕ್ಕೆ ಭಾರತ ಮತ್ತು ಚೀನಾ ಚರ್ಚಿಸಲು ಸಿದ್ಧರಿದ್ದರೆ ಅಮೆರಿಕ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಮೋದಿ-ಟ್ರಂಪ್-ಜಿನ್ ಪಿಂಗ್
ಮೋದಿ-ಟ್ರಂಪ್-ಜಿನ್ ಪಿಂಗ್

ವಾಷಿಂಗ್ಟನ್: ಗಡಿಯಲ್ಲಿ ಶುರುವಾಗಿರುವ ಉದ್ವಿಗ್ನತೆ ಶಮನಕ್ಕೆ ಭಾರತ ಮತ್ತು ಚೀನಾ ಚರ್ಚಿಸಲು ಸಿದ್ಧರಿದ್ದರೆ ಅಮೆರಿಕ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 

ಲಡಾಖ್ ಮತ್ತು ಸಿಕ್ಕಿಂನಲ್ಲಿನ ವಾಸ್ತವಿಕ ನಿಯಂತ್ರಣ ರೇಖೆ(ಎಲ್‌ಎಸಿ) ಉದ್ದಕ್ಕೂ ಚೀನಾದ ತನ್ನ ಮಿಲಿಟರ್ ಸೇನೆಯನ್ನು ನಿಯೋಜಿಸಿದ್ದು ಗುಸ್ತು ತಿರುಗುತ್ತಿರುವುದರಿಂದ ಆತಂಕ ಸೃಷ್ಟಿಯಾಗಿದೆ ಎಂದು ಭಾರತ ಆರೋಪಿದ ಬೆನ್ನಲ್ಲೆ ಟ್ರಂಪ್ ಅವರು ಈ ಟ್ವೀಟ್ ಮಾಡಿದ್ದಾರೆ. ಮತ್ತೊಂದೆಡೆ ಬೀಜಿಂಗ್ ಸಹ ಭಾರತೀಯ ಸೈನಿಕರು ಚೀನಾದ ಕಡೆಯಿಂದ ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿದೆ. 

ಭಾರತ-ಚೀನಾ ನಡುವೆ ಉಲ್ಬಣಗೊಳ್ಳುತ್ತಿರುವ ಗಡಿ ವಿವಾದ ಇತ್ಯರ್ಥಕ್ಕೆ ಅಮೆರಿಕ ಸಿದ್ಧವಿದ್ದು ಮಧ್ಯಸ್ಥಿಕೆ ವಹಿಸಲು ಸಮರ್ಥವಾಗಿದೆ. ಈ ಬಗ್ಗೆ ನಾವು ಭಾರತ ಮತ್ತು ಚೀನಾ ಎರಡು ರಾಷ್ಟ್ರಗಳಿಗೂ ತಿಳಿಸಿದ್ದೇವೆ. ಧನ್ಯವಾದಗಳು!" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಶೀಥಲ ಸಮರ ಮುಂದುವರೆಯುತ್ತಲೆ ಅತ್ತ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ನಿನ್ನೆ ತಮ್ಮ ಸೇನೆಗೆ ಯಾವುದೇ ರೀತಿಯ ಕಠಿಣ ಪರಿಸ್ಥಿತಿ ಸನ್ನದ್ಧರಾಗಿರುವಂತೆ ಕರೆ ನೀಡಿದ್ದರು. 

ಇಂದು ಭಾರತ-ಚೀನಾ ಗಡಿಯಲ್ಲಿ ಉದ್ಭವವಾಗಿರುವ ಸಮಸ್ಯೆಗೆ ಭಾರತದತ್ತ ಬೊಟ್ಟು ಮಾಡಿರುವ ಚೀನಾ, ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಬಯಸಿರುವುದಾಗಿ ಚೀನಾ ವಿದೇಶಾಂಗ ಸಚಿವ ಜಾವೋ ಲಿಜಿಯಾನ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com