ಮೂರನೇ ವ್ಯಕ್ತಿಯ 'ಹಸ್ತಕ್ಷೇಪ' ಅಗತ್ಯವಿಲ್ಲ: ಗಡಿ ವಿವಾದ ಸಂಬಂಧ ಟ್ರಂಪ್ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಚೀನಾ

ಭಾರತದೊಡನೆ ಪ್ರಸ್ತುತ ಚಾಲ್ತಿಯಲ್ಲಿರುವ ಗಡಿ ಉದ್ವಿಗ್ನತೆಯನ್ನು ಕೊನೆಗೊಳಿಸಲು "ಮಧ್ಯಸ್ಥಿಕೆ ವಹಿಸುವುದಾಗಿ" ಹೇಳಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾಪವನ್ನು ಚೀನಾ ತಿರಸ್ಕರಿಸಿದೆ.
ಮೂರನೇ ವ್ಯಕ್ತಿಯ 'ಹಸ್ತಕ್ಷೇಪ' ಅಗತ್ಯವಿಲ್ಲ: ಗಡಿ ವಿವಾದ ಸಂಬಂಧ ಟ್ರಂಪ್ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಚೀನಾ

ಬೀಜಿಂಗ್: ಭಾರತದೊಡನೆ ಪ್ರಸ್ತುತ ಚಾಲ್ತಿಯಲ್ಲಿರುವ ಗಡಿ ಉದ್ವಿಗ್ನತೆಯನ್ನು ಕೊನೆಗೊಳಿಸಲು "ಮಧ್ಯಸ್ಥಿಕೆ ವಹಿಸುವುದಾಗಿ" ಹೇಳಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾಪವನ್ನು ಚೀನಾ ತಿರಸ್ಕರಿಸಿದೆ.

ಅಚ್ಚರಿಯ ಕ್ರಮವೊಂದರಲ್ಲಿ, ಟ್ರಂಪ್ ಬುಧವಾರ ಭಾರತ ಮತ್ತು ಚೀನಾ ನಡುವಿನ ಉಲ್ಬಣಗೊಂಡ ಗಡಿ ವಿವಾದ ಕುರಿತಂತೆ  "ಮಧ್ಯಸ್ಥಿಕೆ ವಹಿಸಲ"  ತಾವು ಸಿದ್ದವೆಂದಿದ್ದರು. ಪರಿಸ್ಥಿತಿಯನ್ನು  ಸರಾಗಗೊಳಿಸುವಲ್ಲಿ ನಾನು  "ಸಿದ್ಧ, ಸಿದ್ಧ ಮತ್ತು ಸಮರ್ಥ" ಎಂದು  ಟ್ರಂಪ್ ಹೇಳಿದ್ದರು. 

ಅಮೆರಿಕಾ ಅಧ್ಯಕ್ಷರ ಪ್ರಸ್ತಾಪಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್, ಪ್ರಸ್ತುತ ಮಿಲಿಟರಿ ಬಿಕ್ಕಟ್ಟನ್ನು ಬಗೆಹರಿಸಲು ಮೂರನೇ ವ್ಯಕ್ತಿ"ಹಸ್ತಕ್ಷೇಪ"ವನ್ನು ಉಭಯ ರಾಷ್ಟ್ರಗಳು ಬಯಸುವುದಿಲ್ಲ ಎಂದು ಹೇಳಿದ್ದಾರೆ.

"ಚೀನಾ ಮತ್ತು ಭಾರತದ ನಡುವೆಅಸ್ತಿತ್ವದಲ್ಲಿರುವ ಗಡಿ ಸಂಮಸ್ಯೆಗಳಿಗೆ ಸಂಬಂಧಿತ ಕಾರ್ಯವಿಧಾನಗಳು ಮತ್ತು ಸಂವಹನ ಮಾರ್ಗಗಳಿವೆ" ಎಂದು ಅವರು ನುಡಿದರು. "ಮಾತುಕತೆ ಮತ್ತು ಸಮಾಲೋಚನೆಯ ಮೂಲಕ ನಮ್ಮ ನಡುವಿನ ಸಮಸ್ಯೆಗಳನ್ನು ಸರಿಯಾಗಿ ಪರಿಹರಿಸಲು ನಾವು ಸಮರ್ಥರಾಗಿದ್ದೇವೆ. ನಮಗೆ ಮೂರನೇ ವ್ಯಕ್ತಿಯ ಹಸ್ತಕ್ಷೇಪದ ಅಗತ್ಯವಿಲ್ಲ" ಎಂದು ಅವರು ಹೇಳಿದರು.

ಸುಮಾರು 3,500 ಕಿ.ಮೀ ಉದ್ದದಲೈನ್ ಆಫ್ ಆಕ್ಚುಯಲ್ ಕಂಟ್ರೋಲ್ (ಎಲ್ಎಸಿ) ಭಾರತ ಹಾಗೂ ಚೀನಾ ನಡುವಿನ  ವಾಸ್ತವಿಕ ಗಡಿಯಾಗಿದೆ. ಲಡಾಖ್ ಮತ್ತು ಉತ್ತರ ಸಿಕ್ಕಿಂನ ಎಲ್‌ಎಸಿಯ ಉದ್ದಕ್ಕೂ ಹಲವಾರು ಪ್ರದೇಶಗಳು ಇತ್ತೀಚೆಗೆ ಭಾರತೀಯ ಮತ್ತು ಚೀನೀ ಸೇನೆಗಳ ಪ್ರಮುಖ ಮಿಲಿಟರಿ ಕಾರ್ಯಾಚರಣೆಗೆ ಸಾಕ್ಷಿಯಾಗಿವೆ. ಎರಡು ವಾರಗಳಿಂದ ಗಡಿಯಲ್ಲಿ ಉದ್ವಿಗ್ನ ವಾತಾವರಣವಿದ್ದು ಎರಡೂ ಬಾಗಗಳಲ್ಲಿ ಗಡಿಯಲ್ಲಿನ ಭದ್ರತೆ ಬಲಪಡಿಸುವಿಕೆ ಕೆಲಸ ನಡೆಯುತ್ತಿದೆ. ಲಡಾಖ್ ಮತ್ತು ಸಿಕ್ಕಿಂನಲ್ಲಿನ ಎಲ್‌ಎಸಿ ಉದ್ದಕ್ಕೂ ಚೀನಾದ ಮಿಲಿಟರಿ ಸೈನ್ಯದವರು ಸಾಮಾನ್ಯ ಗಸ್ತು ತಿರುಗಲು ಪ್ರಾರಂಭಿಸಿದ್ದು ಇದಕ್ಕೆ ಭಾರತ ಆಕ್ಷೇಪಿಸಿದೆ.  ಚೀನಾದ ಕಡೆಯಿಂದ ಭಾರತೀಯ ಪಡೆಗಳನ್ನು ಅತಿಕ್ರಮಣ ಮಾಡುವುದರ ಮೂಲಕ ಎರಡು ಸೇನೆಗಳ ನಡುವೆ ಸಂಘರ್ಷ ಉಲ್ಬಣಗೊಳ್ಳಲು ಇದು ಕಾರಣವಾಗಲಿದೆಎಂಬ ಬೀಜಿಂಗ್ ವಾದವನ್ನು ಭಾರತ ಬಲವಾಗಿ ಅಲ್ಲಗಳೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com