ಕೋವಿಡ್-19 ಗೆದ್ದು, ಐಸ್ ಕೋಲ್ಡ್ ಬೀರ್ ಕುಡಿದು ಸಂಭ್ರಮಿಸಿದ 103 ವರ್ಷದ ಅಜ್ಜಿ! 

ಕೋವಿಡ್-19 ಮಹಾಮಾರಿಯನ್ನು ಗೆದ್ದು ಬಂದಿರುವ ಅನೇಕ ಸಾಹಸಗಾಥೆಗಳು ನಮ್ಮ ಮುಂದೆ ಕಥನವಾಗಿ ಬಂದಿವೆ. ಈ ಪೈಕಿ 100ರ ವಯಸ್ಸನ್ನು ದಾಟಿ ದೇಹ ಕೃಷವಾಗಿದ್ದರೂ ಕೋವಿಡ್-19 ವಿರುದ್ಧ ಸೆಣೆಸಿ ಗೆದ್ದವರ ಕಥೆಗಳೂ ನಮ್ಮ ಕಣ್ಣ ಮುಂದಿವೆ. 
ಕೋವಿಡ್-19 ಗೆದ್ದು, ಐಸ್ ಕೋಲ್ಡ್ ಬೀರ್ ಕುಡಿದು ಸಂಭ್ರಮಿಸಿದ 103 ವರ್ಷದ ಅಜ್ಜಿ!
ಕೋವಿಡ್-19 ಗೆದ್ದು, ಐಸ್ ಕೋಲ್ಡ್ ಬೀರ್ ಕುಡಿದು ಸಂಭ್ರಮಿಸಿದ 103 ವರ್ಷದ ಅಜ್ಜಿ!

ವಿಲ್ಬ್ರಹಾಂ: ಕೋವಿಡ್-19 ಮಹಾಮಾರಿಯನ್ನು ಗೆದ್ದು ಬಂದಿರುವ ಅನೇಕ ಸಾಹಸಗಾಥೆಗಳು ನಮ್ಮ ಮುಂದೆ ಕಥನವಾಗಿ ಬಂದಿವೆ. ಈ ಪೈಕಿ 100ರ ವಯಸ್ಸನ್ನು ದಾಟಿ ದೇಹ ಕೃಷವಾಗಿದ್ದರೂ ಕೋವಿಡ್-19 ವಿರುದ್ಧ ಸೆಣೆಸಿ ಗೆದ್ದವರ ಕಥೆಗಳೂ ನಮ್ಮ ಕಣ್ಣ ಮುಂದಿವೆ. 

ಇದೇ ಮಾದರಿಯಲ್ಲಿ ಮಸಾಚ್ಯುಸೆಟ್ಸ್ ನ 103 ವೃದ್ಧೆ ಕೋವಿಡ್-19 ವಿರುದ್ಧ ಸೆಣೆಸಿ ಗೆದ್ದು ಆರೋಗ್ಯವಾಗಿ ಹಿಂತಿರುಗಿದ್ದಾರೆ. ಯಾವ ಅಮೆರಿಕಾದಲ್ಲಿ ವಯೋವೃದ್ಧರಿಗೆ ದುಸ್ವಪ್ನವಾಗಿ ಕಾಡುತ್ತಿದೆಯೋ ಅದೇ ಅಮೆರಿಕಾದ ವಾಷಿಂಗ್ ಟನ್ ಮೂಲದವರು ಈ 103 ರ ವಯೋವೃದ್ಧೆ ಜೆನ್ನಿ ಸ್ಟೆಜ್ನಾ ಎನ್ನುವುದು ಮತ್ತೊಂದು ವಿಶೇಷ.   

ಜೆನ್ನಿ ಸ್ಟೆಜ್ನಾ ಮೂರು ವಾರಗಳ ಹಿಂದೆ ವಿಲ್ಬ್ರಹಾಂ ನ ನರ್ಸಿಂಗ್ ಹೋಂ ನಲ್ಲಿ ಪತ್ತೆಯಾದ ಮೊದಲ ಕೊರೋನಾ ಸೋಂಕಿತರಾಗಿದ್ದರು. ಹೊರನೋಟಕ್ಕೆ ತುಂಬಾ ಕಠೋರ ಸ್ಥಿತಿಯಲ್ಲಿತ್ತು ಜೆನ್ನಿ ಸ್ಟೆಜ್ನಾ ಅವರ ಪರಿಸ್ಥಿತಿ. ಪತಿ, ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರು ಜೆನ್ನಿ ಸ್ಟೆಜ್ನಾ ಬದುಕುವ ಆಸೆಯನ್ನೇ ಬಿಟ್ಟುಬಿಟ್ಟಿದ್ದರು. ಆದರೆ ನೋಡ ನೋಡುತ್ತಿದ್ದಂತೆಯೇ ಮೇ.13 ರಂದು ಜೆನ್ನಿ ಸ್ಟೆಜ್ನಾ ಆರೋಗ್ಯ ಸುಧಾರಿಸತೊಡಗಿತ್ತು. ಆರೋಗ್ಯ ಸುಧಾರಿಸಿದ ಸಂತಸದ ಸಂದರ್ಭದಕ್ಕಾಗಿ ಸ್ಟೆಜ್ನಾ ಐಸ್ ಕೋಲ್ಡ್ ಬೀರ್ ನ್ನೂ ಸೇವಿಸಿ ಸಂಭ್ರಮಿಸಿದರು. ಕೊರೋನಾದಿಂದ ಚೇತರಿಸಿಕೊಂಡ 103 ರ ವೃದ್ಧೆ ಇಬ್ಬರು ಮಕ್ಕಳು, ಮೂವರು ಮೊಮ್ಮಕ್ಕಳು, ನಾಲ್ವರು ಮರಿಮೊಮ್ಮಕ್ಕಳನ್ನು ಹೊಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com