ವಿಶ್ವ ಆರೋಗ್ಯ ಸಂಸ್ಥೆ ಜೊತೆಗಿನ ಎಲ್ಲಾ ಸಂಬಂಧವನ್ನು ಅಮೆರಿಕಾ ಕಡಿದುಕೊಳ್ಳುತ್ತಿದೆ: ಡೊನಾಲ್ಡ್ ಟ್ರಂಪ್

ಕೊರೋನಾ ವೈರಸ್ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್ಒ) ಚೀನಾ ಪರ ಪಕ್ಷಪಾತ ಮಾಡುತ್ತಿದೆ ಎಂದು ನಿರಂತರವಾಗಿ ದೂರಿಕೊಂಡು ಬಂದಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಡಬ್ಲ್ಯೂಹೆಚ್ಒ ಜೊತೆಗಿನ ಎಲ್ಲಾ ರೀತಿಯ ಸಂಬಂಧವನ್ನು ಅಮೆರಿಕಾ ಕಡಿದುಕೊಂಡಿದೆ ಎಂದು ಘೋಷಣೆ ಮಾಡಿದ್ದಾರೆ. 
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಕೊರೋನಾ ವೈರಸ್ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್ಒ) ಚೀನಾ ಪರ ಪಕ್ಷಪಾತ ಮಾಡುತ್ತಿದೆ ಎಂದು ನಿರಂತರವಾಗಿ ದೂರಿಕೊಂಡು ಬಂದಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಡಬ್ಲ್ಯೂಹೆಚ್ಒ ಜೊತೆಗಿನ ಎಲ್ಲಾ ರೀತಿಯ ಸಂಬಂಧವನ್ನು ಅಮೆರಿಕಾ ಕಡಿದುಕೊಂಡಿದೆ ಎಂದು ಘೋಷಣೆ ಮಾಡಿದ್ದಾರೆ. 

ಪ್ರತೀ ವರ್ಷ ಡಬ್ಲ್ಯೂಹೆಚ್ಒ ರೂ.300 ಕೋಟಿನೀಡುತ್ತಿದೆ. ಆದರೆ, ನಾವು ರೂ.3000 ಕೋಟಿ ನೀಡುತ್ತಿದ್ದೇವೆ. ಆದಾಗ್ಯೂ ಡಬ್ಲ್ಯೂಹೆಚ್ಒ ಮೇಲೆ ಚೀನಾ ಸಂಪೂರ್ಣ ನಿಯಂತ್ರಣ ಹೊಂದಿದೆ ಎಂದು ಕಿಡಿಕಾರಿದ್ದಾರೆ. 

ಡಬ್ಲ್ಯೂಹೆಚ್ಒಗೆ ನೀಡುವ ಹಣವನ್ನು ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಇತರೆ ಸಂಸ್ಥೆಗಳಿಗೆ ನೀಡಲಾಗುತ್ತದೆ ಎಂದು ಇದೇ ವೇಳೆ ಟ್ರಂಪ್ ಅವರು ತಿಳಿಸಿದ್ದಾರೆ. 

ಬಳಿಕ ಚೀನಾ ವಿರುದ್ಧವೂ ತೀವ್ರವಾಗಿ ಕಿಡಿಕಾರಿರುವ ಅವರು, ಹಾಂಕಾಂಗ್'ಗೆ ಅಮೆರಿಕಾ ಈವರೆಗೆ ನೀಡಿಕೊಂಡು ಬಂದಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಿದೆ. ಚೀನಾ ರೀತಿಯೇ ಅದನ್ನೂ ಕಾಣಲಿದೆ. ಅಮೆರಿಕಾ ವಿವಿ ಹಾಗೂ ಕಾಲೇಜುಗಳಲ್ಲಿ ಕೆಲ ಚೀನಾ ವಿದ್ಯಾರ್ಥಿಗಳ ಪ್ರವೇಶಕ್ಕೆ ತಡೆಯೊಡ್ಡಲಾಗುತ್ತದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com