ಏಪ್ರಿಲ್ ನಲ್ಲೇ ಕೊರೋನಾ ಸೋಂಕಿಗೆ ತುತ್ತಾಗಿ ವಿಷಯ ಮುಚ್ಚಿಟ್ಟಿದ್ದ ಬ್ರಿಟನ್ ಪ್ರಿನ್ಸ್ ವಿಲಿಯಂ: ವರದಿ

ಮಾರಕ ಕೊರೋನಾ ಸೋಂಕಿನಿಂದಾಗಿ 1 ತಿಂಗಳ ಸುದೀರ್ಘ ಲಾಕ್ ಡೌನ್ ಮೊರೆ ಹೋಗಿರುವ ಬ್ರಿಟನ್ ನಲ್ಲಿ ಇದೀಗ ಪ್ರಿನ್ಸ್ ವಿಲಿಯಂ ನಕಾರಾತ್ಮಕ ವಿಚಾರಕ್ಕೆ ಭಾರಿ ಸುದ್ದಿಗೆ ಗ್ರಾಸವಾಗಿದ್ದಾರೆ.
ಬ್ರಿಟನ್ ಪ್ರಿನ್ಸ್ ವಿಲಿಯಂ
ಬ್ರಿಟನ್ ಪ್ರಿನ್ಸ್ ವಿಲಿಯಂ

ಲಂಡನ್: ಮಾರಕ ಕೊರೋನಾ ಸೋಂಕಿನಿಂದಾಗಿ 1 ತಿಂಗಳ ಸುದೀರ್ಘ ಲಾಕ್ ಡೌನ್ ಮೊರೆ ಹೋಗಿರುವ ಬ್ರಿಟನ್ ನಲ್ಲಿ ಇದೀಗ ಪ್ರಿನ್ಸ್ ವಿಲಿಯಂ ನಕಾರಾತ್ಮಕ ವಿಚಾರಕ್ಕೆ ಭಾರಿ ಸುದ್ದಿಗೆ ಗ್ರಾಸವಾಗಿದ್ದಾರೆ.

ಹೌದು.. ಬ್ರಿಟನ್ ರಾಜಮನೆತನದ ಕುಡಿ ಪ್ರಿನ್ಸ್ ವಿಲಿಯಂ ಏಪ್ರಿಲ್ ನಲ್ಲೇ ಕೊರೋನಾ ಸೋಂಕಿಗೆ ತುತ್ತಾಗಿದ್ದರೂ ಕೂಡ ಈ ವಿಚಾರವನ್ನು ರಹಸ್ಯವಾಗಿಟ್ಟದ್ದರು ಎಂದು ಕೆನ್ಸಿಂಗ್ಟನ್ ಪ್ಯಾಲೆಸ್ ನ ಮೂಲಗಳು ತಿಳಿಸಿವೆ ಎಂದು ಬ್ರಿಟನ್ ಮಾಧ್ಯಮಗಳು ವರದಿ ಮಾಡಿವೆ. ಕೊರೋನಾ ಸೋಂಕಿನ ವಿಚಾರವಾಗಿ ದೇಶಕ್ಕೆ  ಮುಂಜಾಗ್ರತೆ ನೀಡಬೇಕಿದ್ದ ಪ್ರಿನ್ಸ್ ವಿಲಿಯಂ ಯಾವ ಕಾರಣಕ್ಕೆ ತಾವು ಸೋಂಕಿಗೆ ತುತ್ತಾಗಿರುವುದನ್ನು ಮುಚ್ಚಿಟ್ಟಿದ್ದರು ಎಂಬ ವಿಚಾರ ಇದೀಗ ಭಾರಿ ಸುದ್ದಿಗೆ ಗ್ರಾಸವಾಗಿದೆ. 

ಪ್ರಸ್ತುತ ಬ್ರಿಟನ್ ನಲ್ಲಿ ಮಾರಕ ಕೊರೋನಾ ವೈರಸ್ ರುದ್ರ ನರ್ತನ ಮುಂದುವರೆಸಿದ್ದು, ಸೋಂಕಿನ ರೌದ್ರಾವತಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ಹರಸಾಹಸ ಪಡುತ್ತಿದೆ. ಆದರೆ ಈ ಬಗ್ಗೆ ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜಮನೆತನದ ಕುಡಿ, ಪ್ರಿನ್ಸ್ ವಿಲಿಯಂ ತಮ್ಮ ಸೋಂಕಿನ  ವಿಚಾರವನವ್ನು ಮರೆಮಾಚುವ ಮೂಲಕ ಬೇಜವಾಬ್ದಾರಿ ಮೆರೆದಿದ್ದಾರೆ ಎಂದು ಟೀಕಿಸಲಾಗುತ್ತಿದೆ. ಇನ್ನು ಇದೇ ವಿಚಾರವಾಗಿ ಕೆಲ ಪತ್ರಿಕೆಗಳಿಗೆ ಪ್ರತಿಕ್ರಿಯೆ ನೀಡಿದ ಪ್ರಿನ್ಸ್ ವಿಲಿಯಂ, ನಾನು ಸೋಂಕಿಗೆ ತುತ್ತಾದ ಸಂದರ್ಭದಲ್ಲಿ ದೇಶದಲ್ಲಿ ಕೆಲ ಪ್ರಮುಖ ಚಟುವಟಿಕೆಗಳು ನಡೆಯುತ್ತಿದ್ದವು. ಅವುಗಳಿಗೆ  ಧ್ಕಕ್ಕೆಯಾಗಬಾರದು ಎಂಬ ಒಂದೇ ಕಾರಣಕ್ಕಾಗಿ ನಾನು ಸೋಂಕಿಗೆ ತುತ್ತಾದ ವಿಚಾರವನ್ನು ರಹಸ್ಯವಾಗಿಟ್ಟಿದ್ದೆ ಎಂದು ಸನ್ ನ್ಯೂಸ್ ಪೇಪರ್ ಗೆ ಹೇಳಿದ್ದಾರೆ. 

ಅಂತೆಯೇ ಸೋಂಕಿಗೆ ತುತ್ತಾದ ಸಂದರ್ಭದಲ್ಲಿ ಪ್ಯಾಲೆಸ್ ನಲ್ಲಿಯೇ ವಿಲಿಯಂ ಅರಮನೆ ವೈದ್ಯರಿಂದ ಪ್ರತ್ಯೇಕವಾಗಿದ್ದುಕೊಂಡು ಚಿಕಿತ್ಸೆ ಪಡೆದಿದ್ದರು. ಅಲ್ಲದೆ ಈ ವೇಳೆ ಪ್ರಿನ್ಸ್ ವಿಲಿಯಂ 14 ಕರೆಗಳು ಮತ್ತು ವಿಡಿಯೋ ಕಾಲಿಂಗ್ ಮಾಡಿದ್ದರು.

ಮೂಲಗಳ ಪ್ರಕಾರ ಸೋಂಕಿಗೆ ತುತ್ತಾದ ಸಂದರ್ಭದಲ್ಲಿ ವಿಲಿಯಂ ಆರೋಗ್ಯ ಕೊಂಚ ಗಂಭೀರ ಸ್ಥಿತಿಗೆ ತಲುಪಿತ್ತು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ನೋಡಿದ ಅವರ ಸುತ್ತಮುತ್ತಲಿನ ಜನ ಕೂಡ ಕೊಂಡ ಗೊಂದಲ ಮತ್ತು ಆತಂಕಕ್ಕೊಳಗಾಗಿದ್ದರು ಎಂದು ಪತ್ರಿಕೆ ವರದಿ ಮಾಡಿದೆ.

ಇನ್ನು ಪ್ರಿನ್ಸ್ ವಿಲಿಯಂ ಅವರ ತಂದೆ ಪ್ರಿನ್ಸ್ ಚಾರ್ಲ್ಸ್ ಅವರು ಮಾರ್ಚ್ 25ರಂದು ಸೋಂಕಿಗೆ ತುತ್ತಾಗಿದ್ದರು. ಬಳಿಕ ಸ್ಕಾಟ್ಲೆಂಡ್ ಅರಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿದ್ದು 7 ದಿನಗಳ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com