ಮಾಲಿಯಲ್ಲಿ ಫ್ರೆಂಚ್ ಸೇನೆ ನಡೆಸಿದ ವಾಯುದಾಳಿಯಲ್ಲಿ 50 ಉಗ್ರರು ಹತ್ಯೆ

ಮಾಲಿಯಲ್ಲಿ ಬಾರ್ಖೇನ್ ವಿಶೇಷ ಪಡೆ ನಡೆಸಿದ ವಾಯುದಾಳಿಯಲ್ಲಿ 50 ಉಗ್ರರು ಹತ್ಯೆಯಾಗಿರುವುದಾಗಿ ಫ್ರೆಂಚ್ ರಕ್ಷಣಾ ಸಚಿವರಾದ ಫ್ಲಾರೆನ್ಸ್ ಪಾರ್ಲಿ ಹೇಳಿದ್ದಾರೆ ಎಂದು ಸ್ಪೂಟ್ನಿಕ್ ವರದಿ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಮಾಕೊ: ಮಾಲಿಯಲ್ಲಿ ಬಾರ್ಖೇನ್ ವಿಶೇಷ ಪಡೆ ನಡೆಸಿದ ವಾಯುದಾಳಿಯಲ್ಲಿ 50 ಉಗ್ರರು ಹತ್ಯೆಯಾಗಿರುವುದಾಗಿ ಫ್ರೆಂಚ್ ರಕ್ಷಣಾ ಸಚಿವರಾದ ಫ್ಲಾರೆನ್ಸ್ ಪಾರ್ಲಿ ಹೇಳಿದ್ದಾರೆ ಎಂದು ಸ್ಪೂಟ್ನಿಕ್ ವರದಿ ಮಾಡಿದೆ.

ಅಕ್ಟೋಬರ್ 30 ರಂದು ಬಾರ್ಖೇನ್ ಪಡೆ ಈ ಕಾರ್ಯಾಚರಣೆ ನಡೆಸಿದ್ದು, 50ಕ್ಕೂ ಹೆಚ್ಚು ಜಿಹಾದಿಗಳನ್ನು ಹತ್ಯೆ ಮಾಡಿ, ಅವರ ಶಸಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಾರ್ಲಿ ಟ್ವೀಟ್ ಮಾಡಿದ್ದು, ವಿದೇಶಿ ನಿಯೋಜಿತ ಫ್ರೆಂಚ್ ಪಡೆಗಳ ಸೇವೆಗಾಗಿ ಧನ್ಯವಾದ ಸಲ್ಲಿಸಿದ್ದಾರೆ.

ಇದು ರಷ್ಯಾದಲ್ಲಿ ನಿಷೇಧಿಸಲ್ಪಟ್ಟಿರುವ ಅಲ್ ಖೈದಾದೊಂದಿಗೆ  ಸಂಯೋಜಿತವಾದ ಗುಂಪೊಂದಕ್ಕೆ ಮಹತ್ವದ ಹೊಡೆತದ ಕಾರ್ಯಾಚರಣೆಯಾಗಿದೆ. ಕಾರ್ಯಾಚರಣೆಯ ಯಶಸ್ಸಿನ ಬಗ್ಗೆ ಮಾಲಿಯನ್ ಗಣ್ಯರಿಗೆ ತಿಳಿಸಿರುವುದಾಗಿ ಅವರು ತಿಳಿಸಿದ್ದಾರೆ.

ಪಶ್ಚಿಮ ಆಫ್ರಿಕಾದ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಚುನಾವಣೆಗಳನ್ನು ಆಯೋಜಿಸಲು ಮಾಲಿಯನ್ ಮಧ್ಯಂತರ ಸರ್ಕಾರ ಬದ್ಧವಾಗಿದೆ ಎಂದು ಫ್ರೆಂಚ್ ರಕ್ಷಣಾ ಸಚಿವರು ಪ್ರತ್ಯೇಕ ಟ್ವೀಟ್ ನಲ್ಲಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com