ವಿಯೆನ್ನಾದ 6 ಕಡೆ ಉಗ್ರ ದಾಳಿ: ಕನಿಷ್ಠ 2 ಸಾವು, 15 ಮಂದಿಗೆ ಗಾಯ

ಆಸ್ಟ್ರಿಯಾ ರಾಜಧಾನಿ ವಿಯೆನ್ನಾದಲ್ಲಿ ಆರು ಕಡೆ ಉಗ್ರರು ದಾಳಿ ಮಾಡಿದ್ದು, ಈ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿ 15 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ವಿಯೆನ್ನಾ ಉಗ್ರ ದಾಳಿ
ವಿಯೆನ್ನಾ ಉಗ್ರ ದಾಳಿ

ವಿಯೆನ್ನಾ: ಆಸ್ಟ್ರಿಯಾ ರಾಜಧಾನಿ ವಿಯೆನ್ನಾದಲ್ಲಿ ಆರು ಕಡೆ ಉಗ್ರರು ದಾಳಿ ಮಾಡಿದ್ದು, ಈ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿ 15 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ವಿಯೆನ್ನಾದ ಹೃದಯಭಾಗ ಸಿನಗಾಗ್ ಎಂಬಲ್ಲಿ ಸೋಮವಾರ ರಾತ್ರಿ ಗುಂಡಿನ ದಾಳಿ ನಡೆದಿದೆ. ಉಗ್ರರು ಈ ದಾಳಿಯನ್ನು ನಡೆಸಿದ್ದು, ಈ ಗುಂಡಿನ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿ 15 ಮಂದಿ ಗಾಯಗೊಂಡಿದ್ದಾರೆ. 

ಇನ್ನು ಗುಂಡಿನ ದಾಳಿ ನಡೆಸಿದ ಉಗ್ರರ ಪೈಕಿ ಒಬ್ಬನನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆ ಮಾಡಿದ್ದು,. . ಆತನ ಜೊತೆ ಇನ್ನೂ ಕೆಲವು ಉಗ್ರರಿರುವ ಶಂಕೆ ಇದೆ. ಹೀಗಾಗಿ ಭದ್ರತಾ ಪಡೆಗಳು ಕಾರ್ಯಾಚರಣೆ ಮುಂದುವರೆಸಿವೆ. ಆಸ್ಟ್ರಿಯಾ ಸುದ್ದಿ ವಾಹಿನಿಗಳು ಪ್ರಸಾರ ಮಾಡಿರುವಂತೆ ರಸ್ತೆಯಲ್ಲಿ ಉಗ್ರರು 50  ಸುತ್ತು ಗುಂಡು ಹಾರಿಸಿದ್ದಾರೆ ಎಂದು ವರದಿ ಮಾಡಿವೆ.

ಉಗ್ರರು ಹಿಲ್ಟನ್ ಹೋಟೆಲ್‌ನಲ್ಲಿ ಪ್ರವಾಸಿಗರನ್ನು ಬಂಧಿಯಾಗಿಸಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಜೊತೆಗೆ ಇತರೆ ಕೆಲ ಪ್ರದೇಶಗಳಲ್ಲಿ ಸಹ ಗುಂಡಿನ‌ ದಾಳಿಯ ನಡೆಯುತ್ತಿದೆ. ಸದ್ಯ ಆಸ್ಟ್ರಿಯಾ ಸರಕಾರ ಸೇನೆಯನ್ನು ಕಣಕ್ಕಿಳಿಸಿದ್ದು, ವಿಯೆನ್ನಾ ನಗರದಾದ್ಯಂತ ಹೈ ಅಲರ್ಟ ಘೋಷಿಸಲಾಗಿದೆ. ಸಾರಿಗೆ‌ ವ್ಯವಸ್ಥೆ‌ ಸ್ಥಗಿತಗೊಳಿಸಿ ಭದ್ರತಾ ಪಡೆಗಳು ತಮ್ಮ ವಶಕ್ಕೆ ತೆಗೆದುಕೊಂಡಿವೆ.

ಉಗ್ರರ ದಾಳಿಯನ್ನು ವಿಶ್ವದ ಅನೇಕ ದೇಶಗಳು ಖಂಡಿಸಿವೆ. ಭಯೋತ್ಪಾದನೆ ವಿರುದ್ಧದ ಆಸ್ಟ್ರಿಯಾ ಹೋರಾಟದಲ್ಲಿ ಜೊತೆಗೆ ನಿಲ್ಲುವುದಾಗಿ ಭರವಸೆ ನೀಡಿವೆ. ಅಡಗಿಕೊಂಡಿರುವ ಉಗ್ರರಿಗಾಗಿ ಭದ್ರತಾ ಪಡೆಗಳು ಶೋಧ ಕಾರ್ಯವನ್ನು ಮುಂದುವರೆಸಿವೆ.

ನಿನ್ನೆಯಷ್ಟೇ ಆಫ್ಘಾನಿಸ್ತಾನ ಕಾಬೂಲ್ ನಲ್ಲಿ ಉಗ್ರರು ದಾಳಿ ನಡೆಸಿದ್ದರು. ಈ ಘಟನೆಯನ್ನು ವಿಶ್ವ ಸಮುದಾಯ ಖಂಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com