ಯುಎಇ ಪ್ರಧಾನಿಗೆ ಕೊರೋನಾ ಲಸಿಕೆ

ಯುಎಇಯ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೋಮ್ ನ.03 ರಂದು ಕೊರೋನಾ ಲಸಿಕೆಯನ್ನು ಸ್ವೀಕರಿಸಿದ್ದಾರೆ. 

Published: 03rd November 2020 08:22 PM  |   Last Updated: 03rd November 2020 08:22 PM   |  A+A-


UAE PM receives Covid vaccine shot

ಯುಎಇ ಪ್ರಧಾನಿಗೆ ಕೊರೋನಾ ಲಸಿಕೆ

Posted By : Srinivas Rao BV
Source : Online Desk

ನವದೆಹಲಿ: ಯುಎಇಯ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೋಮ್ ನ.03 ರಂದು ಕೊರೋನಾ ಲಸಿಕೆಯನ್ನು ಸ್ವೀಕರಿಸಿದ್ದಾರೆ. 
    
ಟ್ವೀಟರ್ ನಲ್ಲಿ ತಾವು ಲಸಿಕೆ ಪಡೆಯುತ್ತಿರುವ ಫೋಟೊವನ್ನು ಮೊಹಮ್ಮದ್ ಬಿನ್ ರಶೀದ್ ಹಂಚಿಕೊಂಡಿದ್ದಾರೆ. "ಇಂದು ಕೋವಿಡ್-19 ಲಸಿಕೆ ಪಡೆಯುತ್ತಿರುವ ಸಂದರ್ಭದಲ್ಲಿ.... ನಾವು ಪ್ರತಿಯೊಬ್ಬರಿಗೂ ಒಳ್ಳೆಯ ಆರೋಗ್ಯ ಭದ್ರತೆಗಾಗಿ ಆಶಿಸುತ್ತೇವೆ, ಯುಎಇಯಲ್ಲಿ ಲಸಿಕೆ ಲಭ್ಯವಾಗುವಂತಾಗಲು ಹಗಲಿರುಳು ಶ್ರಮಿಸಿದ ನಮ್ಮ ತಂಡದ ಬಗ್ಗೆ ಹೆಮ್ಮೆಯಾಗುತ್ತಿದೆ" ಎಂದು ಯುಎಇ ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ ಯುಎಇಯ ಹಲವು ಸಚಿವರೂ ಸಹ ಲಸಿಕೆ ಪಡೆದಿದ್ದಾರೆ. ಕೋವಿಡ್-19 ನಿಯಂತ್ರಣದಲ್ಲಿ ಮುಂಚೂಣಿಯಲ್ಲಿರುವ ಸಿಬ್ಬಂದಿಗಳ ರಕ್ಷಣೆಗಾಗಿ ಲಸಿಕೆಯ ತುರ್ತು ಬಳಕೆಗೆ ಯುಎಇಯಲ್ಲಿ ಅನುಮತಿ ನೀಡಲಾಗಿದೆ.


Stay up to date on all the latest ಅಂತಾರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp