ಅಮೆರಿಕ ಅಧ್ಯಕ್ಷೀಯ ಚುನಾವಣೆ: ಮಿಚಿಗನ್, ವಿಸ್ಕಾನ್ಸಿನ್ ನಲ್ಲಿ ಬಿಡೆನ್ ಲೀಡ್ ದೇಶಕ್ಕೆ ಕೆಟ್ಟದು - ಡೊನಾಲ್ಡ್ ಟ್ರಂಪ್

ಮಿಚಿಗನ್, ವಿಸ್ಕಾನ್ಸಿನ್ ಮತ್ತು ಪೆನ್ಸಿಲ್ವೇನಿಯಾದಲ್ಲಿ ಜೋ ಬಿಡನ್  ಲೀಡ್ ನಲ್ಲಿರುವುದು ನಮ್ಮ ದೇಶಕ್ಕೆ ಕೆಟ್ಟದು ಎಂದು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

Published: 04th November 2020 11:51 PM  |   Last Updated: 04th November 2020 11:52 PM   |  A+A-


Donald_Trump

ಡೊನಾಲ್ಡ್ ಟ್ರಂಪ್

Posted By : Nagaraja AB
Source : The New Indian Express

ವಾಷಿಂಗ್ಟನ್:  ಅಮೆರಿಕದಲ್ಲಿ ಮತದಾನ ಮುಗಿದಿರಬಹುದು ಆದರೆ, ಅಧ್ಯಕ್ಷರಾಗಿ ಯಾರು ಆಯ್ಕೆಯಾಗಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಕ್ಷದ ಪ್ರತಿಸ್ಪರ್ಧಿ ಜೋ ಬಿಡೆನ್ ಅವರ ಭವಿಷ್ಯ ಪ್ರಮುಖ ರಾಜ್ಯಗಳ ಮತದಾನದ ಮೇಲೆ ಅವಲಂಬಿತವಾಗಿದೆ. ಇದರಲ್ಲಿ ವಿಸ್ಕಾನ್ಸಿನ್ ಮತ್ತು ಪೆನ್ಸಿಲ್ವೇನಿಯಾ ರಾಜ್ಯಗಳು ಸೇರಿವೆ.

ಅಮೆರಿಕ ಚುನಾವಣೆಯ ಫಲಿತಾಂಶವನ್ನು ಇಡೀ ವಿಶ್ವವೇ ಕುತೂಹಲದಿಂದ ಕಾಯುತ್ತಿದ್ದು, 238 ಎಲೆಕ್ಟೊರಲ್ ಮತಗಳೊಂದಿಗೆ ಬಿಡೆನ್ ಮುಂದಿದ್ದಾರೆ. ಟ್ರಂಪ್ ಗೆ 213 ಎಲೆಕ್ಟೊರಲ್ ಮತಗಳು ದೊರೆತಿವೆ. ಎಲೆಕ್ಟೊರಲ್ ಮತಗಳ ಮ್ಯಾಜಿಕ್ ಸಂಖ್ಯೆ 270 ಆಗಿದೆ. ಸ್ಪಷ್ಟ ಫಲಿತಾಂಶ ದೊರೆಯಲು ಇನ್ನಷ್ಟು ಸಮಯ ಅಗತ್ಯವಿದೆ.

ಈ ನಡುವೆ ಮಿಚಿಗನ್, ವಿಸ್ಕಾನ್ಸಿನ್ ಮತ್ತು ಪೆನ್ಸಿಲ್ವೇನಿಯಾದಲ್ಲಿ ಜೋ ಬಿಡನ್  ಲೀಡ್ ನಲ್ಲಿರುವುದು ನಮ್ಮ ದೇಶಕ್ಕೆ ಕೆಟ್ಟದು ಎಂದು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

 

ಪ್ರತಿಯೊಂದು ಮತಪತ್ರವನ್ನು ಎಣಿಸುವವರೆಗೆ ಈ ರೇಸ್ ಮುಗಿದಿಲ್ಲ ಎಂದು ಭಾರತೀಯ ಮೂಲದ ಕಮಲಾ ಹ್ಯಾರಿಸ್ ಟ್ವೀಟ್ ಮಾಡಿದ್ದಾರೆ.

 

Stay up to date on all the latest ಅಂತಾರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp