ಟ್ರಂಪ್ ಅಮೆರಿಕದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆ ಇದೆ: ಜರ್ಮನಿ ರಕ್ಷಣಾ ಸಚಿವ ಎಚ್ಚರಿಕೆ

ಅಂಚೆ ಮತ ಪತ್ರಗಳ ಪರಿಗಣಿಸುವುದು ಬೇಡ, ಕೂಡಲೇ ಅವುಗಳ ಎಣಿಕೆ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ, ಈ ಸಂಬಂಧ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಯ....

Published: 04th November 2020 06:16 PM  |   Last Updated: 04th November 2020 06:16 PM   |  A+A-


us-election

ಡೊನಾಲ್ಡ್ ಟ್ರಂಪ್ - ಜೋ ಬೈಡನ್

Posted By : Lingaraj Badiger
Source : UNI

ವಾಷಿಂಗ್ಟನ್: ಅಂಚೆ ಮತ ಪತ್ರಗಳ ಪರಿಗಣಿಸುವುದು ಬೇಡ, ಕೂಡಲೇ ಅವುಗಳ ಎಣಿಕೆ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ, ಈ ಸಂಬಂಧ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಯ ಬಗ್ಗೆ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಕ್ಯಾಂಪ್ ನಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮತಗಳ ಎಣಿಕೆ ತಡೆಯಲು ಟ್ರಂಪ್ ಸುಪ್ರೀಂ ಕೋರ್ಟ್‌ಗೆ ಹೋದರೆ, ಆ ಪ್ರಯತ್ನವನ್ನು ವಿರೋಧಿಸಲು ನಮ್ಮ ಕಾನೂನು ತಂಡ ಸಿದ್ಧವಾಗಿದೆ" ಎಂದು ಬೈಡನ್ ಪ್ರಚಾರ ನಿರ್ವಾಹಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಏತನ್ಮಧ್ಯೆ, ಜರ್ಮನಿಯ ರಕ್ಷಣಾ ಸಚಿವ ಅನೆಗ್ರೆಟ್ ಕ್ರಾಂಪ್, ಟ್ರಂಪ್ ಮುಂಚಿತವಾಗಿಯೇ ಚುನಾವಣಾ ಗೆಲುವು ಘೋಷಿಸಿಕೊಂಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, "ಚುನಾವಣೆಯ ಮತಗಳ ಎಣಿಕೆ ಇನ್ನೂ ನಡೆಯುತ್ತಿದೆ. ಫಲಿತಾಂಶಗಳು ಸಂಪೂರ್ಣವಾಗಿ ಇನ್ನೂ ಬಹಿರಂಗಗೊಂಡಿಲ್ಲ, ಟ್ರಂಪ್ ಅಮೆರಿಕಾದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆ ಇದೆ 'ಎಂದು ಅವರು ಎಚ್ಚರಿಸಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp