ಅಮೆರಿಕ ಅಧ್ಯಕ್ಷ ಚುನಾವಣೆ: ಡೆಲವರೆ, ವರ್ಮೊಂಟ್ ಕ್ಷೇತ್ರಗಳಿಂದ ಮೊದಲ ಬಾರಿಗೆ ತೃತೀಯ ಲಿಂಗಿಗಳು ಸೆನೆಟರ್ ಗಳಾಗಿ ಆಯ್ಕೆ

ಅಮೆರಿಕದ ಡೆಲವರೆ ಮತ್ತು ವರ್ಮೊಂಟ್ ಕ್ಷೇತ್ರಗಳಲ್ಲಿ ಡೆಮಾಕ್ರಟಿಕ್ ಪಕ್ಷದ ತೃತೀಯ ಲಿಂಗ ಅಭ್ಯರ್ಥಿಗಳು ಸೆನೆಟರ್ ಗಳಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಸೆನೆಟರ್ ಸರಹ್ ಮೆಕ್ ಬ್ರೈಡ್
ಡೆಮಾಕ್ರಟಿಕ್ ಪಕ್ಷದ ಸೆನೆಟರ್ ಸರಹ್ ಮೆಕ್ ಬ್ರೈಡ್

ಡೊವರ್: ಅಮೆರಿಕದ ಡೆಲವರೆ ಮತ್ತು ವರ್ಮೊಂಟ್ ಕ್ಷೇತ್ರಗಳಲ್ಲಿ ಡೆಮಾಕ್ರಟಿಕ್ ಪಕ್ಷದ ತೃತೀಯ ಲಿಂಗ ಅಭ್ಯರ್ಥಿಗಳು ಸೆನೆಟರ್ ಗಳಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ಡೆಲವರೆ ರಾಜ್ಯದ ಮೊದಲ ತೃತೀಯ ಲಿಂಗಿ ಸೆನೆಟರ್ ಆಗಿ 30 ವರ್ಷದ ಸರಹ್ ಮೆಕ್ ಬ್ರೈಡ್ ಆಯ್ಕೆಯಾದರೆ ಉತ್ತರ ವರ್ಮೊಂಟ್ ನಲ್ಲಿ 26 ವರ್ಷದ ಟೈಲರ್ ಸ್ಮಾಲ್ ಮೊದಲ ತೃತೀಯ ಲಿಂಗಿ ಸೆನೆಟರ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ದೇಶದ 5 ನೇ ತೃತೀಯ ಲಿಂಗಿ ಸೆನೆಟರ್ ಆಗಿದ್ದಾರೆ.

2017ರಲ್ಲಿ ಅಮೆರಿಕಾದ ವರ್ಜೀನಿಯಾ ರಾಜ್ಯದಲ್ಲಿ ಡೆಮಾಕ್ರಟಿಕ್ ಪಕ್ಷದ ಡನಿಕಾ ರೊಯೆಮ್ ಅವರು ಮೊದಲ ಬಹಿರಂಗವಾಗಿ ಘೋಷಿಸಿಲ್ಪಟ್ಟ ತೃತೀಯಲಿಂಗಿ ಸೆನೆಟರ್ ಆಗಿದ್ದರು. ನಂತರ 2018ರಲ್ಲಿ ವರ್ಮೊಂಟ್ ಡೆಮಾಕ್ರಟ್ ಕ್ರಿಸ್ಟಿನ್ ಹಲ್ಲ್ ಕ್ವಿಸ್ಟ್ ಗವರ್ನರ್ ಆಗಿ ನಾಮಾಂಕಿತಗೊಂಡ ಮೊದಲ ತೃತೀಯಲಿಂಗಿ ಆಗಿದ್ದಾರೆ.

ತೃತೀಯ ಲಿಂಗಿಗಳು ಸರ್ಕಾರದ ಆಡಳಿತದಲ್ಲಿ ಹೆಚ್ಚಾಗುವ ನಿಟ್ಟಿನಲ್ಲಿ ಹೋರಾಡುತ್ತಿರುವ ವಿಕ್ಟರಿ ಫಂಡ್ ಇತಿಹಾಸ ನಿರ್ಮಾಣವಾಗಿದೆ ಎಂದು ಟ್ವಿಟ್ಟರ್ ನಲ್ಲಿ ಅಭಿನಂದನೆ ಸಲ್ಲಿಸಿದೆ.

ವಿಕ್ಟರಿ ಫಂಡ್ ಪ್ರಕಾರ, ಸರ್ಕಾರದಲ್ಲಿ ಪ್ರಸ್ತುತ ನಾಲ್ವರು ಬಹಿರಂಗವಾಗಿ ಘೋಷಿಸಿಕೊಂಡ ತೃತೀಯ ಲಿಂಗಿ ಆಡಳಿತಗಾರರು ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com