ಜೊ ಬೈಡನ್
ಜೊ ಬೈಡನ್

ಅಮೆರಿಕದ ಇತಿಹಾಸದಲ್ಲಿ ಅತಿ ಹೆಚ್ಚು ಮತ ಗಳಿಸಿದ ಅಧ್ಯಕ್ಷ ಪದವಿ ಅಭ್ಯರ್ಥಿ ಜೊ ಬೈಡನ್!

ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ದಾಖಲೆಯನ್ನು ಮುರಿದು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲಿ ಅತಿ ಹೆಚ್ಚು ಮತ ಗಳಿಸುವ ಮೂಲಕ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ದಾಖಲೆ ನಿರ್ಮಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

ನ್ಯೂಯಾರ್ಕ್: ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ದಾಖಲೆಯನ್ನು ಮುರಿದು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲಿ ಅತಿ ಹೆಚ್ಚು ಮತ ಗಳಿಸುವ ಮೂಲಕ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ದಾಖಲೆ ನಿರ್ಮಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

ನಿನ್ನೆಯ ಹೊತ್ತಿಗೆ ಮೊನ್ನೆ 3ರಂದು ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆಯಲ್ಲಿ ಜೊ ಬಿಡೆನ್ 70.7 ದಶಲಕ್ಷಕ್ಕೂ ಅಧಿಕ ಮತಗಳನ್ನು ಗಳಿಸಿದ್ದು ಇದುವರೆಗೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಲ್ಲಿಯೇ ಅತಿ ಹೆಚ್ಚಿನ ಮತ ಗಳಿಸಿದವರಾಗಿದ್ದಾರೆ ಎಂದು ನ್ಯಾಶನಲ್ ಪಬ್ಲಿಕ್ ರೇಡಿಯೊ(ಎನ್ ಪಿಆರ್) ವರದಿ ಮಾಡಿದೆ.

2008ರಲ್ಲಿ ಬರಾಕ್ ಒಬಾಮಾ 6 ಕೋಟಿಯ 94 ಲಕ್ಷದ 98 ಸಾವಿರದ 516 ಮತಗಳನ್ನು ಗಳಿಸಿ ದಾಖಲೆ ನಿರ್ಮಿಸಿದ್ದರು. ಈ ಬಾರಿ ಜೊ ಬಿಡೆನ್ ಈಗಾಗಲೇ ಅವರಿಗಿಂತ 3 ಲಕ್ಷ ಹೆಚ್ಚು ಮತಗಳನ್ನು ಗಳಿಸಿದ್ದಾರೆ. 

ಈ ಬಾರಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜೊ ಬೈಡನ್ ಮಧ್ಯೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದ್ದು ಎಲೆಕ್ಟೊರಲ್ ವೋಟಿಂಗ್ ನಲ್ಲಿ ಜೊ ಬೈಡನ್ ಮುಂದಿದ್ದಾರೆ. ಜನಪ್ರಿಯ ಮತಗಳಲ್ಲಿ ಟ್ರಂಪ್ ಅವರು 2 ಲಕ್ಷದ 7 ಸಾವಿರ ಮತಗಳಷ್ಟು ಬೈಡನ್ ಗಿಂತ ಮುಂದಿದ್ದಾರೆ. 

ಇನ್ನೂ ಕೆಲವು ಪ್ರಮುಖ ರಾಜ್ಯಗಳಲ್ಲಿ ಮತ ಎಣಿಕೆ ಪೂರ್ಣಗೊಂಡಿಲ್ಲ. ಕ್ಯಾಲಿಫೋರ್ನಿಯಾದಲ್ಲಿ ಇನ್ನೂ ಮತ ಎಣಿಕೆ ಪೂರ್ಣಗೊಂಡಿಲ್ಲ. ಡೊನಾಲ್ಡ್ ಟ್ರಂಪ್ ಅವರು ಸಹ ಬರಾಕ್ ಒಬಾಮಾ ದಾಖಲಿಸಿದ್ದ 67.32 ಮಿಲಿಯನ್ ಮತಗಳ ಹತ್ತಿರದಲ್ಲಿದ್ದಾರೆ. 

ಆರಂಭಿಕ ಮತಗಳು ಮತ್ತು ಮೇಲ್ ಇನ್ ಬ್ಯಾಲೆಟ್ ನಲ್ಲಿ 100 ಮಿಲಿಯನ್ ಗಿಂತಲೂ ಹೆಚ್ಚು ಮತಗಳು ಸಿಕ್ಕಿದ್ದು ಇನ್ನೂ 23 ಮಿಲಿಯನ್ ವೋಟ್ ಗಳು ಹೊಂದಾಣಿಕೆಯಾಗಬೇಕಿದೆ. ಇದು ಹೊಂದಾಣಿಕೆಯಾದರೆ ಜೊ ಬೈಡನ್ ಮತಗಳು ಹೆಚ್ಚಾಗುವ ಸಾಧ್ಯತೆಯಿದೆ.

Related Stories

No stories found.

Advertisement

X
Kannada Prabha
www.kannadaprabha.com