ಗ್ವಾಟೆಮಾಲಾದಲ್ಲಿ ಭೂಕುಸಿತ, ಕನಿಷ್ಟ 50 ಸಾವು, ಹಲವರು ಕಣ್ಮರೆ

ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಭಾರಿ ಮಳೆಯಿಂದ ವಿವಿಧೆಡೆ ಸಂಭವಿಸಿದ ಭೂ ಕುಸಿತದಿಂದಾಗಿ ಕನಿಷ್ಟ 50 ಮಂದಿ ಸಾವನ್ನಪ್ಪಿ, ಹಲವರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಗ್ವಾಟೆಮಾಲಾದಲ್ಲಿ ಭೂಕುಸಿತ (ಎಎಫ್ ಪಿ ಚಿತ್ರ)
ಗ್ವಾಟೆಮಾಲಾದಲ್ಲಿ ಭೂಕುಸಿತ (ಎಎಫ್ ಪಿ ಚಿತ್ರ)

ಹೊಂಡುರಾಸ್: ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಭಾರಿ ಮಳೆಯಿಂದ ವಿವಿಧೆಡೆ ಸಂಭವಿಸಿದ ಭೂ ಕುಸಿತದಿಂದಾಗಿ ಕನಿಷ್ಟ 50 ಮಂದಿ ಸಾವನ್ನಪ್ಪಿ, ಹಲವರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಮಧ್ಯ ಅಮೆರಿಕದಲ್ಲಿ ಎಟಾ ಚಂಡಮಾರುತದ ಪರಿಣಾಮ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭಾರಿ ಅವಾಂತರ ಸೃಷ್ಟಿಯಾಗಿದ್ದು, ನೀರಿನ ಪ್ರವಾಹ ಮತ್ತು ಭೂಕುಸಿತದಿಂದಾಗಿ ಕನಿಷ್ಟ 50 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ವಿವಿಧೆಡೆ ಗುಡ್ಡ ಕುಸಿತಗಳು ಸಂಭವಿಸಿದ್ದು, ಇಲ್ಲಿನ ಸ್ಯಾನ್‌ ಕ್ರಿಸ್ಟೊಬಾಲ್‌ ವೆರಪಾಜ್‌ ನಗರದಲ್ಲೂ ಭಾರಿ ಭೂಕುಸಿತವಾಗಿದೆ. ಮನೆಗಳು ಗುಡ್ಡದಡಿ ಸಿಲುಕಿದ್ದು, 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಅಂತೆಯೇ ಮಧ್ಯ ಅಮೆರಿಕದಲ್ಲಿ ಮಳೆಯಿಂದಾಗಿ 23 ಮಂದಿ  ಮೃತಪಟ್ಟಿದ್ದಾರೆ ಎಂದು ಸುದ್ದಿ ಮಾಧ್ಯಮಗಳು  ವರದಿ ಮಾಡಿವೆ.

ಮಧ್ಯ ಗ್ವಾಟೆಮಾಲಾದಲ್ಲಿ ಗುಡ್ಡ ಕುಸಿತದಿಂದ 25 ಮನೆಗಳು ನೆಲಸಮವಾಗಿದ್ದು, ಹಲವಾರು ಮಂದಿ ಅವಶೇಷದಡಿ ಸಿಲುಕಿದ್ದಾರೆ ಎಂದು ಅಧ್ಯಕ್ಷ ಅಲ್‌ಜಂಡ್ರೊ ಗಿಯಾಮಟೈ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಮಧ್ಯ ಅಮೆರಿಕದಲ್ಲಿ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ.  ಗ್ವಾಟೆಮಾಲದಿಂದ ಪನಾಮಾವರೆಗೂ ಅನೇಕ ಭೂಕುಸಿತಗಳು ಸಂಭವಿಸಿವೆ ಎಂದು ತಿಳಿದುಬಂದಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com