ಅಮೆರಿಕ ಅಧ್ಯಕ್ಷ ಚುನಾವಣೆ ಮತ ಎಣಿಕೆಯಲ್ಲಿ ವಂಚನೆ ಆರೋಪ: ನಿಕ್ಕಿ ಹ್ಯಾಲೆ ಮೌನಕ್ಕೆ ಜೂನಿಯರ್ ಟ್ರಂಪ್ ಆಕ್ರೋಶ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ವ್ಯತಿರಿಕ್ತವಾಗುತ್ತಿದ್ದಂತೆ, ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ಪರ ಹೆಚ್ಚಿನ ಮತಗಳು ವಾಲುತ್ತಿದ್ದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಜೂನಿಯರ್ ಟ್ರಂಪ್ ಭಾರತೀಯ ಮೂಲದ ಖ್ಯಾತ ರಾಜಕಾರಣಿ, ವಿಶ್ವಸಂಸ್ಥೆಗೆ ಅಮೆರಿಕದ ಅಂಬಾಸಿಡರ್ ಆಗಿದ್ದ ನಿಕ್ಕಿ ಹ್ಯಾಲೆ ವಿರುದ್ಧ ಹರಿಹಾಯ್ದಿದ್ದಾರೆ.
ನಿಕ್ಕಿ ಹ್ಯಾಲೆ
ನಿಕ್ಕಿ ಹ್ಯಾಲೆ

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ವ್ಯತಿರಿಕ್ತವಾಗುತ್ತಿದ್ದಂತೆ, ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ಪರ ಹೆಚ್ಚಿನ ಮತಗಳು ವಾಲುತ್ತಿದ್ದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಜೂನಿಯರ್ ಟ್ರಂಪ್ ಭಾರತೀಯ ಮೂಲದ ಖ್ಯಾತ ರಾಜಕಾರಣಿ, ವಿಶ್ವಸಂಸ್ಥೆಗೆ ಅಮೆರಿಕದ ಅಂಬಾಸಿಡರ್ ಆಗಿದ್ದ ನಿಕ್ಕಿ ಹ್ಯಾಲೆ ವಿರುದ್ಧ ಹರಿಹಾಯ್ದಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆಗಳು ಚುನಾವಣೆಗೆ ಸಂಬಂಧಪಟ್ಟಂತೆ ನಡೆಯುತ್ತಿದ್ದರೂ ಕೂಡ 2024ರ ಜಿಒಪಿಗಳು ಹೊರಗಿಂದ ಹೊರಗೆ ಸುಮ್ಮನೆ ಕುಳಿತು ನೋಡುತ್ತಿದ್ದಾರೆ, ಮತಗಳ ಎಣಿಕೆಯಲ್ಲಿ ಆಗಿರುವ ವಂಚನೆ,ಮೋಸದ ಬಗ್ಗೆ ಮಾತನಾಡುತ್ತಿಲ್ಲವಲ್ಲ ಎಂದು ಸರಣಿ ಟ್ವೀಟ್ ಗಳ ಮೂಲಕ ತಮ್ಮ ತಂದೆಯಂತೆಯೇ ಪ್ರಶ್ನೆಗಳನ್ನು ಹೊರಹಾಕಿದ್ದಾರೆ.

ಸದ್ಯ ಟ್ರಂಪ್ ಅವರು ತಮ್ಮ ಪ್ರತಿಸ್ಪರ್ಧಿ  ಜೊ ಬೈಡನ್ ಅವರಿಗಿಂತ ಹಿಂದಿದ್ದು, ಅಮೆರಿಕ ಅಧ್ಯಕ್ಷರಾಗಲು 270 ಎಲೆಕ್ಟೊರಲ್ ಮತಗಳನ್ನು ಹೊಂದಬೇಕು. ಜೊ ಬೈಡನ್ ಅವರಿಗೆ ಸದ್ಯ 253 ಮತ್ತು ಡೊನಾಲ್ಡ್ ಟ್ರಂಪ್ ಅವರಿಗೆ 214 ಮತಗಳು ಬಂದಿವೆ. 

ಮತಗಳ ಎಣಿಕೆಯಲ್ಲಿ ವಂಚನೆಯಾಗಿದೆ ಎಂದು ಹೇಳಿಕೊಂಡು ಬಂದಿರುವ ಡೊನಾಲ್ಡ್ ಟ್ರಂಪ್ ಅದಕ್ಕೆ ಪೂರಕವಾಗಿ ಸಾಕ್ಷಿಗಳನ್ನು ನೀಡಿಲ್ಲ. ಕಾನೂನಾತ್ಮಕ ಹೋರಾಟ ಕೂಡ ನಡೆಸುತ್ತಿದ್ದಾರೆ. 

ಇದ್ದಕ್ಕಿದ್ದಂತೆ ಎಲ್ಲವೂ ನಿಂತುಹೋಯಿತು. ಇದು ಅಮೆರಿಕದ ಸಾರ್ವಜನಿಕರ ಮೇಲಿನ ವಂಚನೆ. ಇದು ನಮ್ಮ ದೇಶಕ್ಕೆ ಮುಜುಗರ. ನಾವು ಈ ಚುನಾವಣೆಯಲ್ಲಿ ಗೆಲ್ಲಲು ತಯಾರಾಗುತ್ತಿದ್ದೆವು. ನಾವು ಈ ಚುನಾವಣೆಯಲ್ಲಿ ಗೆದ್ದಿದ್ದೇವೆ. ಈ ರಾಷ್ಟ್ರದ ಒಳಿತಿಗಾಗಿ ಸಮಗ್ರತೆಯನ್ನು ಖಚಿತಪಡಿಸುವುದು ಈಗ ನಮ್ಮ ಗುರಿಯಾಗಿದೆ. ಇದು ನಮ್ಮ ರಾಷ್ಟ್ರದ ಮೇಲೆ ದೊಡ್ಡ ವಂಚನೆ. ಕಾನೂನನ್ನು ಸರಿಯಾದ ರೀತಿಯಲ್ಲಿ ಬಳಸಬೇಕೆಂದು ನಾವು ಬಯಸುತ್ತೇವೆ. ಆದ್ದರಿಂದ ನಾವು ಸುಪ್ರೀಂ ಕೋರ್ಟ್ ಗೆ ಹೋಗುತ್ತೇವೆ ಎಂದು ಟ್ರಂಪ್ ಹೇಳಿದ್ದರು. 

ಇದಕ್ಕೆ ಡೊನಾಲ್ಡ್ ಟ್ರಂಪ್ ಜೂನಿಯರ್ ಟ್ವೀಟ್ ಮಾಡಿ, ಇದು ಬಹಳ ಮುಖ್ಯವಾದ ಅಂಶ. ಈ ಅಸಂಬದ್ಧ ಅಸಂಬದ್ಧತೆಯ ವಿರುದ್ಧ ಯಾರು ನಿಜವಾಗಿಯೂ ಹೋರಾಡುತ್ತಿದ್ದಾರೆ ಮತ್ತು ಯಾರು ಪಕ್ಕದಲ್ಲಿ ಕುಳಿತು ನೋಡುತ್ತಿದ್ದಾರೆ ಎಂದು ಎಲ್ಲರೂ ನೋಡಬೇಕು. ದಶಕಗಳವರೆಗೆ ರಿಪಬ್ಲಿಕನ್ನರು ದುರ್ಬಲರಾಗಿದ್ದರು ಅದರಿಂದಾಗಿ ಎಡಪಕ್ಷದವರು ಇಷ್ಟೆಲ್ಲಾ ಮಾಡುತ್ತಿದ್ದಾರೆ. ಈ ಪ್ರವೃತ್ತಿಗೆ ಕೊನೆ ಕಾಣಿಸೋಣ ಎಂದಿದ್ದಾರೆ.

ಒಬ್ಬರು ಟ್ವಿಟ್ಟರ್ ನಲ್ಲಿ , ಮುಂದಿನ ಜಿಒಪಿಗಳು ಎಲ್ಲಿದ್ದಾರೆ, ನಿಕ್ಕಿ ಹ್ಯಾಲೆ ಏನು ಮಾಡುತ್ತಿದ್ದಾರೆ ಎಂದು ಕೇಳಿದರು. ಅದಕ್ಕೆ ಟ್ರಂಪ್ ಜೂನಿಯರ್, 2024ರ ಭರವಸೆಯ ಜಿಒಪಿಗಳು ಸುಮ್ಮನೆ ಕುಳಿತಿರುವುದು ನೋಡಿದರೆ ಅಚ್ಚರಿಯಾಗುತ್ತದೆ, ಆದರೆ ನಾವು ವಿಶ್ವಾಸ ಕಳೆದುಕೊಂಡಿಲ್ಲ. ನಾವು ಹೋರಾಡುತ್ತೇವೆ ಎಂದಿದ್ದಾರೆ.

ಇಲ್ಲಿ ಜಿಒಪಿ ಎಂದರೆ ಗ್ರಾಂಡ್ ಓಲ್ಡ್ ಪಾರ್ಟಿ ಎಂದು ರಿಪಬ್ಲಿಕನ್ ಪಕ್ಷವನ್ನು ಉಲ್ಲೇಖಿಸಿ ಹೇಳಲಾಗುತ್ತದೆ. 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಅಭ್ಯರ್ಥಿ 48 ವರ್ಷದ ಮಾಜಿ ಯುಎಸ್ ರಾಯಭಾರಿ ನಿಕ್ಕಿ ಹ್ಯಾಲೆ ಸಮರ್ಥ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿದೆ.

ನಂತರ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ನಿಕ್ಕಿ ಹ್ಯಾಲೆ, ಡೊನಾಲ್ಡ್ ಟ್ರಂಪ್ ಅವರ ನಿಜವಾದ ಗೆಲುವು ನಾವು ಬಯಸುತ್ತೇವೆ, ಕಾನೂನನ್ನು ಅನುಸರಿಸಬೇಕು. ಸತ್ಯ ಗೆಲ್ಲುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com