ನಾಲ್ಕು ವರ್ಷಗಳ ಗಾಯ ಈಗ ಮಾಯುತ್ತಿದೆ: ಬೈಡನ್ ತಿರುಗೇಟು

ಇದಕ್ಕೆ ಬಹಳ ನಯವಾಗಿಯೇ  ತಿರುಗೇಟು ನೀಡಿದ ಬೈಡನ್ ನಾಲ್ಕು ವರ್ಷಗಳ ರಣ ಗಾಯ ಈಗ ಮಾಯುತ್ತಿದೆ, ಸ್ಪಷ್ಟ ಜನಾದೇಶದ ಬಗ್ಗೆ, ಗೆಲುವಿನ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ ಜನತೆ ನನ್ನ ಪರವಾಗಿದ್ದಾರೆ ಎಂದು ಬೈಡನ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಮತ್ತು ಜೋ ಬೈಡನ್
ಡೊನಾಲ್ಡ್ ಟ್ರಂಪ್ ಮತ್ತು ಜೋ ಬೈಡನ್

ವಾಷಿಂಗ್ಟನ್ : ಮಳೆನಿಂತರೂ  ಮರದ ಹನಿ ನಿಲ್ಲುವುದಿಲ್ಲ ಎಂಬ ಗಾದೆ ಮಾತಿನಂತೆ ಅಮೆರಿಕ ಚುನಾವಣೆ ಮಗಿದರೂ ಆರೋಪ -ಪ್ರತ್ಯಾರೋಪ ನಿಂತಿಲ್ಲ,  ಸದ್ಯಕ್ಕೆ ನಿಲ್ಲುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ.  ಮೇಲಾಗಿ  ಫಲಿತಾಂಶ ಸಹ ಬೇಗ ಪ್ರಕಟವಾಗುವ ಲಕ್ಷಣಗಳು ಸಹ ಗೋಚರವಾಗುತ್ತಿಲ್ಲ, ಇನ್ನು ಕೆಲವು ದಿನ ಎಳೆದಾಡುವ ಸಾಧ್ಯತೆ ದಟ್ಟವಾಗುತ್ತಿದೆ.  

ಜಾರ್ಜಿಯಾ ಮತ್ತು ಪೆನ್ನಿಸಿಲ್ವೇನಿಯಾದಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಡೆಮಾಕ್ರೆಟಿಕ್ ಅಭ್ಯರ್ಥಿ ಜೋ ಬೈಡನ್ ಮುನ್ನಡೆ ಸಾಧಿಸಿ ಗೆಲುವಿನ, ಅಧಿಕಾರದ   ಸನಿಹಕ್ಕೆ ಬರುತ್ತಿರುವ ನಡುವೆಯೇ ಅಕ್ರಮವಾಗಿ ಅಧ್ಯಕ್ಷ ಹುದ್ದೆಯ ಮೇಲೆ ಹಕ್ಕು ಸ್ಥಾಪಿಸಬಾರದೆಂದು ಟ್ರಂಪ್  ಅವರು ಬೈಡನ್ ಗೆ ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ಬಹಳ ನಯವಾಗಿಯೇ  ತಿರುಗೇಟು ನೀಡಿದ ಬೈಡನ್ ನಾಲ್ಕು ವರ್ಷಗಳ ರಣ ಗಾಯ ಈಗ ಮಾಯುತ್ತಿದೆ, ಸ್ಪಷ್ಟ ಜನಾದೇಶದ ಬಗ್ಗೆ, ಗೆಲುವಿನ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ ಜನತೆ ನನ್ನ ಪರವಾಗಿದ್ದಾರೆ ಎಂದು ಬೈಡನ್ ಹೇಳಿದ್ದಾರೆ. "ಜೋ ಬೈಡನ್ ಅಕ್ರಮವಾಗಿ ಅಧ್ಯಕ್ಷ ಹುದ್ದೆಯ ಮೇಲೆ ಹಕ್ಕು ಸ್ಥಾಪಿಸಬಾರದು. ನಾನು ಕೂಡ ಆ ಹುದ್ದೆಯ ಮೇಲೆ ಹಕ್ಕು ಸ್ಥಾಪನೆ ಮಾಡಬಹುದು. ಕಾನೂನು ಪ್ರಕ್ರಿಯೆಗಳು ಈಗಷ್ಟೇ ಆರಂಭಗೊಳ್ಳುತ್ತಿವೆ  ಎಂದೂ ಟ್ರಂಪ್ ದೂರಿದ್ದಾರೆ. 

ಜಾರ್ಜಿಯಾ, ನೆವಾಡ, ಪೆನ್ನಿಸಿಲ್ವೇನಿಯಾ, ಅರಿಝೋನಾ ಮತ್ತು ಉತ್ತರ ಕ್ಯಾರೊಲಿನಾದಲ್ಲಿ ಮತ ಎಣಿಕೆ ಮುಂದುವರಿದಿದ್ದು ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಬೈಡನ್ ಮುನ್ನಡೆಯಲ್ಲಿದ್ದಾರೆ. ಚುನಾವಣೆಯಲ್ಲಿ ದೊಡ್ಡ ಮಟ್ಟದ ವಂಚನೆ ಹಾಗೂ ಅವ್ಯವಹಾರ, ಅಕ್ರಮ  ನಡೆದಿವೆ ಎಂದು ಟ್ರಂಪ್  ಪದೇಪದೇ  ಆರೋಪ ಮಾಡುತ್ತಿದ್ದಾರೆ.

ನಾವು ಅಧಿಕಾರಕ್ಕೆ ಬಂದ ಕೂಡಲೇ ಕೋವಿಡ್-19 ಸಾಂಕ್ರಾಮಿಕವನ್ನು ತಡೆಗಟ್ಟಲು ಯೋಜನೆಯನ್ನು ರೂಪಿಸಿ ಕಾರ್ಯಪ್ರವೃತ್ತವಾಗುವುದು ನಮ್ಮ ಉದ್ದೇಶವಾಗಿದೆ ಎಂದು ಸಹ ಜೊ ಬೈಡನ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com