ಚುನಾವಣಾ ಫಲಿತಾಂಶ ಆತಂಕದ ನಡುವೆ ಕೊರೋನಾ ಅಬ್ಬರ: ಟ್ರಂಪ್ ಸಿಬ್ಬಂದಿ ವರಿಷ್ಠರಿಗೆ ಸೋಂಕು ದೃಢ!

ಚುನಾವಣಾ ಫಲಿತಾಂಶ ಆತಂಕದ ನಡುವಲ್ಲೇ ಅಮೆರಿಕಾದಲ್ಲಿ ಕೊರೋನಾ ತನ್ನ ರೌದ್ರನರ್ತನವನ್ನು ಮುಂದುವರೆಸಿದ್ದು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಿಬ್ಬಂದಿ ಮುಖ್ಯಸ್ಥ ಮಾರ್ಕ್ ಮೆಡೋಸ್ ಅವರಿಗೆ ಇದೀಗ ಕೊರೋನಾ ಸೋಂಕು ದೃಢಪಟ್ಟಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ. 
ಮಾರ್ಕ್ ಮೆಡೋಸ್
ಮಾರ್ಕ್ ಮೆಡೋಸ್

ವಾಷಿಂಗ್ಟನ್: ಚುನಾವಣಾ ಫಲಿತಾಂಶ ಆತಂಕದ ನಡುವಲ್ಲೇ ಅಮೆರಿಕಾದಲ್ಲಿ ಕೊರೋನಾ ತನ್ನ ರೌದ್ರನರ್ತನವನ್ನು ಮುಂದುವರೆಸಿದ್ದು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಿಬ್ಬಂದಿ ಮುಖ್ಯಸ್ಥ ಮಾರ್ಕ್ ಮೆಡೋಸ್ ಅವರಿಗೆ ಇದೀಗ ಕೊರೋನಾ ಸೋಂಕು ದೃಢಪಟ್ಟಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ. 

ಶುಕ್ರವಾರ ಒಂದೇ ದಿನ ಅಮೆರಿಕಾದಲ್ಲಿ ಬರೋಬ್ಬರಿ 1,27,000 ಸೋಂಕು ಪ್ರಕರಣಗಳು ದಾಖಲಾಗಿದ್ದು, 1,149 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. 

ಈ ನಡುವೆ ಟ್ರಂಪ್ ಅವರೊಂದಿಗೆ ಚುನಾವಣಾ ದಿನದಂದು ಪ್ರಯಾಣಿಸಿದ್ದ ಮಾರ್ಕ್ ಮೆಡೋಸ್ ಆಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಹೇಳಲಾಗುತ್ತಿದೆ. ಮೆಡೋಸ್ ಅವರು ಚುನಾವಣೆ ಪ್ರಚಾರದ ವೇಳೆ ಟ್ರಂಪ್ ಅವರೊಂದಿಗಿದ್ದರು, ಕಳೆದ ಬುಧವಾಕ ರೂಡ ಟ್ರಂಪ್ ಜೊತೆಗಿದ್ದರು ಎಂದು ವರದಿಗಳು ತಿಳಿಸಿವೆ. 

ತಿಂಗಳ ಹಿಂದೆ ಟ್ರಂಪ್ ಅವರಿಗೂ ಕೊರೋನಾ ಪಾಸಿಟಿವ್ ಬಂದಿತ್ತು. ಬಳಿಕ ಟ್ರಂಪ್ ಅವರು ಕೆಲವೇ ದಿನಗಳಲ್ಲಿ ಚೇತರಿಸಿಕೊಂಡಿದ್ದರು. ಇದೀಗ ಕೊರೋನಾ ಸೋಂಕಿಗೊಳಗಾಗಿರುವ ಮೆಡೋಸ್ ಅವರು ಟ್ರಂಪ್ ಅವರ ಆಪ್ತ ಸಹಾಯಕರಲ್ಲಿ ಒಬ್ಬರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com