ಅಮೆರಿಕ ಚುನಾವಣೆ: ಗೆಲುವಿನ ವಿಶ್ವಾಸದಲ್ಲಿ ಬೈಡನ್, ಕಮಲಾ ಹ್ಯಾರಿಸ್; ಆರೋಗ್ಯ, ಆರ್ಥಿಕತೆಗೆ ಆದ್ಯತೆ ನೀಡಲು ನಿರ್ಧಾರ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ವಿಶ್ವಾಸದಲ್ಲಿರುವ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬಿಡನ್ ಮತ್ತು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು...
ಜೋ ಬೈಡನ್ - ಕಮಲಾ ಹ್ಯಾರಿಸ್
ಜೋ ಬೈಡನ್ - ಕಮಲಾ ಹ್ಯಾರಿಸ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ವಿಶ್ವಾಸದಲ್ಲಿರುವ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬಿಡನ್ ಮತ್ತು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು, ಸಾರ್ವಜನಿಕ ಆರೋಗ್ಯ ಮತ್ತು ಆರ್ಥಿಕತೆ ಎರಡು ನಿರ್ಣಾಯಕ ಕ್ಷೇತ್ರಗಳತ್ತ ಗಮನ ಹರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಇತ್ತೀಚಿನ ಫಲಿತಾಂಶಗಳ ಪ್ರಕಾರ, ಬೈಡನ್ ಅವರು 538 ಎಲೆಕ್ಟ್ರೋಲ್ ಕಾಲೇಜ್ ಮತಗಳ ಪೈಕಿ 264 ಮತಗಳನ್ನು ಪಡೆದುಕೊಂಡಿದ್ದು, ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಲು ಮ್ಯಾಜಿಕ್ ನಂಬರ್ 270 ತಲುಪಲು ಅವರಿಗೆ ಇನ್ನೂ ಕೇವಲ ಆರು ಮತಗಳ ಕೊರತೆ ಇದೆ.

ನಾವು ಅಂತಿಮ ಫಲಿತಾಂಶಗಳಿಗಾಗಿ ಕಾಯುತ್ತಿದ್ದವೆ, ಆದರೆ ಅಮೆರಿಕ ಜನತೆಯ ಕೆಲಸ ಮಾಡಲು ಕಾಯುತ್ತಿಲ್ಲ ಎಂದು ಬೈಡೆನ್ ಅವರು ಹೇಳಿದ್ದಾರೆ.

ನಾವು ಅಧಿಕಾರಕ್ಕೆ ಬಂದ ತಕ್ಷಣವೇ ಕೋವಿಡ್-19 ಸಾಂಕ್ರಾಮಿಕವನ್ನು ತಡೆಗಟ್ಟಲು ಯೋಜನೆಯನ್ನು ರೂಪಿಸಿ ಕಾರ್ಯಪ್ರವೃತ್ತವಾಗುವುದು ಮತ್ತು ಆರ್ಥಿಕತೆಗೆ ಹೆಚ್ಚಿನ ಆದ್ಯತೆ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಜೋ ಬೈಡನ್ ತಿಳಿಸಿದ್ದಾರೆ.

"ನಮ್ಮಲ್ಲಿ ಇನ್ನೂ ವಿಜಯದ ಅಂತಿಮ ಘೋಷಣೆ ಇಲ್ಲ. ಆದರೆ ಸಂಖ್ಯೆಗಳು ಸ್ಪಷ್ಟವಾಗಿ ಹೇಳುತ್ತಿದೆ. ನಾವು ಈ ಸ್ಪರ್ಧೆಯನ್ನು ಗೆಲ್ಲುತ್ತೇವೆ" ಎಂದು ಬೈಡೆನ್ ರಾಷ್ಟ್ರವನ್ನುದ್ದೇಶಿಸಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಅರಿಜೋನ, ಜಾರ್ಜಿಯಾ, ಪೆನ್ಸಿಲ್ವೇನಿಯಾ ಮತ್ತು ನೆವಾಡಾ ಸ್ಪರ್ಧೆಯಲ್ಲಿ ಗೆಲುವಿನ ಓಟದಲ್ಲಿರುವೆ ಎಂದು ಡೆಮಾಕ್ರಟಿಕ್ ಅಭ್ಯರ್ಥಿ ಹೇಳಿದ್ದಾರೆ. "ನಾವು 300 ಕ್ಕೂ ಹೆಚ್ಚು ಎಲೆಕ್ಟ್ರೋಲ್ ಕಾಲೇಜು ಮತಗಳನ್ನು ಪಡೆಯುವ ಹಾದಿಯಲ್ಲಿದ್ದೇವೆ" ಎಂದು ಬೈಡನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com