ಮುಂದಿನ ಸಾಂಕ್ರಾಮಿಕಕ್ಕೆ ಸಿದ್ಧರಾಗಿ: ವಿಶ್ವ ಸಮುದಾಯಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಮಾರಕ ಕೊರೋನಾ ಹಾವಳಿಯೇ ಇನ್ನೂ ಮುಗಿದಿಲ್ಲ... ಅದಾಗಲೇ ಮತ್ತೊಂದು ಸಾಂಕ್ರಾಮಿಕಕ್ಕೆ ಸಿದ್ಧರಾಗಿರುವಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆ
ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ: ಮಾರಕ ಕೊರೋನಾ ಹಾವಳಿಯೇ ಇನ್ನೂ ಮುಗಿದಿಲ್ಲ... ಅದಾಗಲೇ ಮತ್ತೊಂದು ಸಾಂಕ್ರಾಮಿಕಕ್ಕೆ ಸಿದ್ಧರಾಗಿರುವಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಹೌದು.. ಮಾರಕ ಕೊರೋನಾ ಸಾಂಕ್ರಾಮಿದ ಜಾಗತಿಕವಾಗಿ ಸಾಕಷ್ಟು ಹಾನಿ ಮಾಡಿದ್ದು, ವಿಶ್ವದ ಸ್ವರೂಪವನ್ನೇ ಬದಲಾಯಿಸಿದೆ. ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಲಕ್ಷಾಂತರ ಸಾವುಗಳು ಸಂಭವಿಸಿದೆ. ವಿಶ್ವಾದ್ಯಂತ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದರ ನಡುವೆಯೇ ವಿಶ್ವ ಆರೋಗ್ಯ  ಸಂಸ್ಥೆ ಮತ್ತೊಂದು ಮಹಾಮಾರಿಯ ಸುಳಿವು ನೀಡಿದೆ.

ಹೌದುಯಯ ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ತನ್ನ 73 ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ (WHA) ಮಾತನಾಡಿದ್ದು, ಮುಂದಿನ ಸಾಂಕ್ರಾಮಿಕ ರೋಗಕ್ಕೆ ತಯಾರಿ ನಡೆಸುವಂತೆ ವಿಶ್ವದ ನಾಯಕರುಗಳನ್ನು ಕೋರಿದೆ. ಮುಂದಿನ ಸಾಂಕ್ರಾಮಿಕ ರೋಗಕ್ಕೆ ನಾವು ಈಗಿನಿಂದಲೇ ತಯಾರಿ ನಡೆಸಬೇಕು  ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕೊರೋನಾ ವೈರಸ್ ಸೋಂಕನ್ನು ಹರಡುವುದನ್ನು ತಡೆಗಟ್ಟುವಲ್ಲಿ ಮತ್ತು ನಿವಾರಿಸುವಲ್ಲಿ ಬಲವಾದ ತುರ್ತು ಆರೋಗ್ಯ ಮೂಲಸೌಕರ್ಯ ಹೊಂದಿರುವ ದೇಶಗಳು ವೇಗವಾಗಿ ಕಾರ್ಯನಿರ್ವಹಿಸಲು ಸಮರ್ಥವಾಗಿವೆ ಎಂದು ನಾವು ಈ ವರ್ಷ  ನೋಡಿದ್ದೇವೆ. ಆರೋಗ್ಯ ಸೇವೆಗಳ ಬಗ್ಗೆ ಒಂದು ದೇಶವು ಸಾಕಷ್ಟು ಗಮನ ಹರಿಸಿದಾಗ ಮಾತ್ರ ಸ್ಥಿರ ಪ್ರಪಂಚದ ಅಡಿಪಾಯ ಸಾಧ್ಯ ಎಂದು ಹೇಳಿದೆ.

ಕೊರೋನಾ ಸಾಂಕ್ರಾಮಿಕವು ಒಂದು ರೀತಿಯಲ್ಲಿ ಜ್ಞಾಪಕವಾಗಿದ್ದು, ಆರೋಗ್ಯವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿರತೆಯ ಅಡಿಪಾಯವಾಗಿದೆ ಎಂಬುದನ್ನು ಇದು ನಮಗೆ ನೆನಪಿಸಿದೆ ಅಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಹೇಳಿಕೆಯಲ್ಲಿ ಹೇಳಿದೆ.

ಸೋಂಕು ನಿಭಾಯಿಸಿದ ದೇಶಗಳಿಗೆ ಶ್ಲಾಘನೆ
ಇದೇ ವೇಳೆ ಕೊರೋನಾ ವೈರಸ್ ಹರಡುವಿಕೆಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ದೇಶಗಳನ್ನು ಶ್ಲಾಘಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಇದು ಜಾಗತಿಕ ಬಿಕ್ಕಟ್ಟಾಗಿದ್ದರೂ, ಅನೇಕ ದೇಶಗಳು ಮತ್ತು ನಗರಗಳು ವೈರಸ್ ಅನ್ನು ವಿಶಾಲ ಸಾಕ್ಷ್ಯ ಆಧಾರಿತ ವಿಧಾನದಿಂದ (ಎವಿಡೆ ಬೇಸ್ಡ್ ಅಪ್ರೋಚ್) ಯಶಸ್ವಿಯಾಗಿ  ವೈರಸ್ ಹರಡುವಿಕೆಯನ್ನು ಯಶಸ್ವಿಯಾಗಿ ತಡೆಗಟ್ಟಿವೆ. ಲಸಿಕೆ ಖರೀದಿ ತಂತ್ರಗಳನ್ನು ಅಭಿವೃದ್ಧಿಪಡಿಸಲು ಮತ್ತು ಆರೋಗ್ಯ ರಕ್ಷಣೆಯೊಂದಿಗೆ ಇಡೀ ಜಗತ್ತು ಒಟ್ಟಾಗಿ ಕೆಲಸ ಮಾಡುತ್ತಿದೆ. ಒಟ್ಟಾರೆ ಗುಣಮಟ್ಟ ಸುಧಾರಿಸುತ್ತಿದೆ. ಕೊರೋನಾ ಲಸಿಕೆ ಮತ್ತು ಅದರ ಪ್ರಯೋಗದ ವೇಗವನ್ನು ಹೆಚ್ಚಿಸುವ ಯೋಜನೆಯಲ್ಲಿ  ಇಡೀ ಜಗತ್ತು ಒಟ್ಟಾಗಿ ಕೆಲಸ ಮಾಡಿದೆ ಎಂದು ತನ್ನ ಹೇಳಿಕೆಯಲ್ಲಿ ಜಾಗತಿಕ ಸಂಘಟನೆ ತಿಳಿಸಿದೆ. ಆದರೆ ಈಗ ನಾವು ಲಸಿಕೆ ಜಗತ್ತಿಗೆ ಬಿಡುಗಡೆಯಾದಾಗ ಸಮಾನತೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಇದು ಎಲ್ಲಾ ದೇಶಗಳಿಗೂ ಸಮನಾಗಿ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ  ಸಂಸ್ಥೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com