ನೂತನ ಜೋ ಬೈಡನ್ ಸರ್ಕಾರದಿಂದ 5 ಲಕ್ಷ ಭಾರತೀಯರಿಗೆ ಅಮೆರಿಕ ನಾಗರಿಕತ್ವ!

ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆಯಾದ ಬೆನ್ನಲ್ಲೇ ಬೈಡನ್ ಸರ್ಕಾರ ಅನಿವಾಸಿ ಭಾರತೀಯರಿಗೆ ಗುಡ್ ನ್ಯೂಸ್ ನೀಡಿದ್ದು, 5 ಲಕ್ಷ ಭಾರತೀಯರಿಗೆ ಅಮೆರಿಕ ನಾಗರಿಕತ್ವ ನೀಡಲು ಮುಂದಾಗಿದೆ.
ಜೋ ಬೈಡನ್ - ಕಮಲಾ ಹ್ಯಾರಿಸ್
ಜೋ ಬೈಡನ್ - ಕಮಲಾ ಹ್ಯಾರಿಸ್

ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆಯಾದ ಬೆನ್ನಲ್ಲೇ ಬೈಡನ್ ಸರ್ಕಾರ ಅನಿವಾಸಿ ಭಾರತೀಯರಿಗೆ ಗುಡ್ ನ್ಯೂಸ್ ನೀಡಿದ್ದು, 5 ಲಕ್ಷ ಭಾರತೀಯರಿಗೆ ಅಮೆರಿಕ ನಾಗರಿಕತ್ವ ನೀಡಲು ಮುಂದಾಗಿದೆ.

ಹೌದು.. ಜೋ ಬೈಡನ್ ಮತ್ತು ಭಾರತ ಮೂಲದ ಕಮಲಾ ಹ್ಯಾರಿಸ್ ಸರ್ಕಾರ ಅನಿವಾಸಿ 5 ಲಕ್ಷ ಭಾರತೀಯರೂ ಸೇರಿದಂತೆ 11ಸ ಲಕ್ಷ ವಿದೇಶಿ ವಲಸಿಗರಿಗೆ ಅಮೆರಿಕ ನಾಗರಿಕತ್ವ ನೀಡುವ ಕುರಿತು ನಿರ್ಧರಿಸಿದೆ. ಅಂತೆಯೇ ನಾಗರಿಕತ್ವ ವಿತರಣೆಗೆ ವಾರ್ಷಿಕ 95,000 ಮಿತಿ ಹೇರಲಾಗಿದ್ದು, ಈ ಕುರಿತಂತೆ ಬೈಡನ್  ಕ್ಯಾಂಪೇನ್ ಪಾಸಲಿಸಿ ಡಾಕ್ಯುಮೆಂಟ್ ನಲ್ಲಿ ತಿಳಿಸಲಾಗಿದೆ.

ಅಮೆರಿಕದಲ್ಲಿ ಕೆಲಸಕ್ಕಾಗಿ ಬಂದ ವಿವಿಧ ದೇಶಗಳ ಸುಮಾರು 11 ಲಕ್ಷ ವಲಸಿಗರಿದ್ದು, ಈ ಪೈಕಿ ಭಾರತದ ಮೂಲದ 5ಲಕ್ಷ ವಲಸಿಗರಿದ್ದಾರೆ. ಈ ವಲಸಿಗರಿಗೆ ನಾಗರಿಕತ್ವ ನೀಡಲು ಬೈಡನ್ ಸರ್ಕಾರ ನೀತಿ ಜಾರಿಗೆ ತರಲು ಮುಂದಾಗಿದೆ. ಬೈಡನ್ ಸರ್ಕಾರ ಈ ನೀತಿಯ ಪ್ರಕಾರ, ವಲಸೆ ಸುಧಾರಣಾ ಕಾನೂನು  ಜಾರಿಗೊಳಿಸುವುದಕ್ಕೆ, ಅದಕ್ಕೆ ಸಂಬಂಧಿಸಿದ ಮಸೂದೆ ಸಿದ್ಧಪಡಿಸಿ ಅಂಗೀಕರಿಸುವುದಕ್ಕಾಗಿ ಬೈಡನ್ ಅವರು, ಕಾಂಗ್ರೆಸ್ ಜೊತೆಗೂಡಿ ಶೀಘ್ರವೇ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಅಮೆರಿಕಕ್ಕೆ ವಲಸೆ ಬರುವ ಉದ್ಯೋಗಸ್ಥರ ಕುಟುಂಬಗಳೂ ಕೂಡ ಒಟ್ಟಿಗೆ ಇರಿಸುವ ಪ್ರಯತ್ನ ಇದಾಗಿದೆ. 

ಈ ಹಿಂದೆ ಬರಾಕ್ ಒಬಾಮ ಅಧ್ಯಕ್ಷರಾಗಿದ್ದಾಗ ಜಾರಿಯಲ್ಲಿದ್ದ ಅನೇಕ ನೀತಿಗಳನ್ನು ಒಬಾಮಾ ಸರ್ಕಾರ ರದ್ದುಗೊಳಿಸಿತ್ತು. ಈ ಪೈಕಿ ಉತ್ತಮವಾದ ಕೆಲ ನೀತಿಗಳನ್ನು ಮತ್ತೆ ಜಾರಿಗೊಳಿಸಲಾಗುವುದು ಎಂದು ಬೈಡನ್ ತಂಡ ಘೋಷಣೆ ಮಾಡಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com