ವಿದಿಶಾ ಮೈತ್ರಾ
ವಿದಿಶಾ ಮೈತ್ರಾ

ವಿಶ್ವಸಂಸ್ಥೆಯ ಸಲಹಾ ಸಮಿತಿಗೆ ಭಾರತೀಯ ರಾಜತಾಂತ್ರಿಕ ಅಧಿಕಾರಿ ವಿದಿಶಾ ಮೈತ್ರಾ ಆಯ್ಕೆ

ವಿಶ್ವಸಂಸ್ಥೆಯ ಮಹಾಧಿವೇಶನದ ಉಪ ಸಂಸ್ಥೆಯಾಗಿರುವ ‘ಆಡಳಿತಾತ್ಮಕ ಮತ್ತು ಬಜೆಟರಿ ವಿಷಯಗಳ ಸಲಹಾ ಸಮಿತಿ’ (ಎಸಿಎಬಿಕ್ಯೂ)ಗೆ ವಿದಿಶಾ ಮೈತ್ರಾ ಆಯ್ಕೆಯಾಗಿದ್ದಾರೆ.

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಮಹಾಧಿವೇಶನದ ಉಪ ಸಂಸ್ಥೆಯಾಗಿರುವ ‘ಆಡಳಿತಾತ್ಮಕ ಮತ್ತು ಬಜೆಟರಿ ವಿಷಯಗಳ ಸಲಹಾ ಸಮಿತಿ’ (ಎಸಿಎಬಿಕ್ಯೂ)ಗೆ ವಿದಿಶಾ ಮೈತ್ರಾ ಆಯ್ಕೆಯಾಗಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಭಾರತದ ರಾಜತಾಂತ್ರಿಕೆಯಾಗಿರುವ ವಿದಿಶಾ ಮೈತ್ರಾ ಅವರು, ಭಾರತೀಯ ನಿಯೋಗದ ಪ್ರಥಮ ಕಾರ್ಯದರ್ಶಿಯಾಗಿದ್ದಾರೆ. ಈ ಸ್ಥಾನಕೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ವಿದಿಶಾ ಏಷ್ಯಾ-ಪೆಸಿಫಿಕ್ ದೇಶಗಳ ಗುಂಪಿನಲ್ಲಿ 126 ಮತಗಳನ್ನು ಪಡೆದಿದ್ದಾರೆ. ಏಷ್ಯಾ-ಪೆಸಿಫಿಕ್ ದೇಶಗಳ  ಗುಂಪಿನಿಂದ ಮೈತ್ರಾ ಸೇರಿದಂತೆ ಇಬ್ಬರು ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಲಾಗಿತ್ತು. ಈ ಗುಂಪಿನ ಇನ್ನೋರ್ವ ಅಭ್ಯರ್ಥಿ ಇರಾಕ್‌ನ ಅಲಿ ಮುಹಮ್ಮದ್ ಫಯೀಕ್ ಅಲ್-ದಬಾಗ್ 64 ಮತಗಳನ್ನು ಪಡೆದರು.

ಮಹಾಧಿವೇಶನದ ಐದನೇ ಸಮಿತಿಯು ಮೈತ್ರಾರ ಹೆಸರನ್ನು ಸಲಹಾ ಸಮಿತಿಗೆ ಶಿಫಾರಸು ಮಾಡಿತ್ತು. ಅವರ ಅಧಿಕಾರಾವಧಿಯು 2021 ಜನವರಿ 1ರಂದು ಆರಂಭಗೊಂಡು ಮೂರು ವರ್ಷಗಳವರೆಗೆ ಇರುತ್ತದೆ. 193 ಸದಸ್ಯ ಬಲದ ವಿಶ್ವಸಂಸ್ಥೆ ಮಹಾಧಿವೇಶನವು, ಸಲಹಾ ಸಮಿತಿಗೆ ಸದಸ್ಯರನ್ನು ಆಯ್ಕೆ  ಮಾಡುತ್ತದೆ. ವಿಸ್ತೃತ ಭೌಗೋಳಿಕ ಪ್ರಾತಿನಿಧ್ಯ, ವೈಯಕ್ತಿಕ ಅರ್ಹತೆ ಮತ್ತು ಅನುಭವದ ಆಧಾರದಲ್ಲಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.

Related Stories

No stories found.

Advertisement

X
Kannada Prabha
www.kannadaprabha.com