ಜೋ ಬೈಡನ್ ಕೋವಿಡ್ ಟಾಸ್ಕ್ ಪೋರ್ಸ್ ನಲ್ಲಿ ಕನ್ನಡಿಗ ವಿವೇಕ್ ಮೂರ್ತಿಗೆ ಸ್ಥಾನ

ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೆಮೊಕ್ರಟಿಕ್ ಪಕ್ಷದ  ಅಭ್ಯರ್ಥಿ ಜೊ ಬೈಡನ್ ದೇಶದಲ್ಲಿ ಕೊರೋನಾ ನಿಯಂತ್ರಿಸಲು  ಹಾಗೂ  ಹಳಿತಪ್ಪಿದ  ಆರ್ಥಿಕ ಪರಿಸ್ಥಿತಿ  ಮೆಲೇತ್ತಲು ಹೆಚ್ಚಿನ ಗಮನ ಕೊಡುವುದಾಗಿ ಹೇಳಿದ್ದಾರೆ. 
ಜೋ ಬಿಡೆನ್ , ವಿವೇಕ್ ಮೂರ್ತಿ
ಜೋ ಬಿಡೆನ್ , ವಿವೇಕ್ ಮೂರ್ತಿ

ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೆಮೊಕ್ರಟಿಕ್ ಪಕ್ಷದ  ಅಭ್ಯರ್ಥಿ ಜೊ ಬೈಡನ್ ದೇಶದಲ್ಲಿ ಕೊರೋನಾ ನಿಯಂತ್ರಿಸಲು  ಹಾಗೂ  ಹಳಿತಪ್ಪಿದ  ಆರ್ಥಿಕ ಪರಿಸ್ಥಿತಿ  ಮೆಲೇತ್ತಲು ಹೆಚ್ಚಿನ ಗಮನ ಕೊಡುವುದಾಗಿ ಹೇಳಿದ್ದಾರೆ. 

 ರಾಷ್ಟ್ರವನ್ನುದ್ದೇಶಿಸಿ  ಭಾಷಣ ಮಾಡಿದ ಬೈಡನ್ ನಮ್ಮ ಕೆಲಸವು ಕೋವಿಡ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರೊಂದಿಗೆ ಪ್ರಾರಂಭವಾಗಲಿದೆ. ಆರ್ಥಿಕ  ಸ್ಥಿತಿಯನ್ನು  ಪುನಃಸ್ಥಾಪಿಸುವವವರೆಗೆ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಆನಂದಿಸಲು ಸಾಧ್ಯವಾಗದು  ಎಂದು ಹೇಳಿದ್ದಾರೆ.

ಕೊರೋನ  ನಿಯಂತ್ರಿಸಲು ವಿಜ್ಞಾನಿಗಳು ಮತ್ತು ತಜ್ಞರ ಗುಂಪನ್ನು ಪರಿವರ್ತನಾ ಸಲಹೆಗಾರರರನ್ನು  ನೇಮಕ  ಮಾಡುವುದಾಗಿ ಹೇಳಿದ್ದಾರೆ. ಈ ಉದ್ದೇಶಕ್ಕಾಗಿ ಬಿಡೆನ್ ವಿಶೇಷ ಕಾರ್ಯಪಡೆ ರಚಿಸಲಿದ್ದಾರೆ. ಮತ್ತೊಂದು ವಿಶೇಷವೆಂದರೆ ಈ  ಕಾರ್ಯಪಡೆಗೆ   ಭಾರತ ಮೂಲದ  ಪಿಜಿಷಿಯನ್  ಡಾ. ವಿವೇಕ್ ಮೂರ್ತಿ ಸಹ ಅಧ್ಯಕ್ಷರಾಗಲಿದ್ದಾರೆ  ಎಂದು ವರದಿಯಾಗಿದೆ. ಈ  ಕುರಿತು ಸೋಮವಾರ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ.

43 ವರ್ಷದ ಡಾ. ವಿವೇಕ್ ಮೂರ್ತಿ  ಕರ್ನಾಟಕ ಮೂಲದವರಾಗಿದ್ದು, 2014 ರಲ್ಲಿ, ಆಗಿನ ಅಧ್ಯಕ್ಷ  ಬರಾಕ್ ಒಬಾಮಾ, ಅಮೆರಿಕದ 19 ನೇ ಸರ್ಜನ್ ಜನರಲ್ ಆಗಿ ನೇಮಕಗೊಳಿಸಿದ್ದರು. ಆಗ ಆ ಹುದ್ದೆಗೆ ಆಯ್ಕೆಯಾದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದ ವಿವೇಕ್ ಮೂರ್ತಿ (37 ವರ್ಷ) ಅವರನ್ನು  ಡೋನಾಲ್ಡ್ ಟ್ರಂಪ್  ಸರ್ಕಾರ ಅಧಿಕಾರಕ್ಕೆ ಬಂದ ನಂತರ  ಸ್ಥಾನ  ತೊರೆಯುವಂತೆ ಸೂಚನೆ ನೀಡಿತ್ತು. ಅದರಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com