ಅಮೆರಿಕದಲ್ಲಿ ನಿಯಂತ್ರಣ ತಪ್ಪಿರುವ ಕೊರೋನಾ ಸೋಂಕಿಗೆ ಬ್ರೇಕ್ ಹಾಕಲು ಕೋವಿಡ್ ಸಲಹೆಗಾರರ ನೇಮಕ: ಜೋ ಬೈಡನ್

ಅಮೆರಿಕದಲ್ಲಿ ನಿಯಂತ್ರಣ ತಪ್ಪಿರುವ ಮಾರಕ ಕೊರೋನಾ ಸೋಂಕಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸೋಮವಾರ ಕೋವಿಡ್ ಸಲಹೆಗಾರರನ್ನು ನೇಮಕ ಮಾಡಲಾಗುತ್ತದೆ ಎಂದು ನೂತನ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಜೋ ಬೈಡನ್-ಕಮಲಾ ಹ್ಯಾರಿಸ್
ಜೋ ಬೈಡನ್-ಕಮಲಾ ಹ್ಯಾರಿಸ್

ವಾಷಿಂಗ್ಟನ್: ಅಮೆರಿಕದಲ್ಲಿ ನಿಯಂತ್ರಣ ತಪ್ಪಿರುವ ಮಾರಕ ಕೊರೋನಾ ಸೋಂಕಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸೋಮವಾರ ಕೋವಿಡ್ ಸಲಹೆಗಾರರನ್ನು ನೇಮಕ ಮಾಡಲಾಗುತ್ತದೆ ಎಂದು ನೂತನ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಮಾತನಾಡಿದ ಜೋ ಬೈಡನ್, ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನನ್ನ ಮೊದಲ ಗುರಿ.. ಅದು ದೇಶದಲ್ಲಿ ನಿಯಂತ್ರಣ ತಪ್ಪಿರುವ ಕೊರೋನಾ ಸೋಂಕಿನ ನಿಯಂತ್ರಣ ಎಂದು ಹೇಳಿದರು. ಈಗಾಗಲೇ ತಾವು ಈ ಸಂಬಂಧ ಕ್ರಿಯಾ ಯೋಜನೆ  ರೂಪಿಸಿದ್ದು, ವೈಜ್ಞಾನಿಕ ತಳಪಾಯದ ಮೂಲಕ ಈ ಯೋಜನೆಯನ್ನು ಜಾರಿ ತರುತ್ತೇವೆ ಎಂದು ಹೇಳಿದರು. ಈ ಸಲಹೆಗಾರರ ತಂಡದಲ್ಲಿ ದೇಶದ ನುರಿತು ವಿಜ್ಞಾನಿಗಳು ಮತ್ತು ಖ್ಯಾತನಾಮ ವೈದ್ಯರು ಮತ್ತು ಆರೋಗ್ಯ ಇಲಾಖೆಯ ನುರಿತ ಅಧಿಕಾರಿಗಳು ಇರಲಿದ್ದಾರೆ ಎಂದು ಹೇಳಿದರು.

ಜನವರಿ 20, 2021ರ ಹೊತ್ತಿಗೆ ಈ ಬೈಡೆನ್-ಹ್ಯಾರಿಸ್ ಕೋವಿಡ್ ಯೋಜನೆಯ ನೀಲಿನಕ್ಷೆ ಸಿದ್ಧಪಡಿಸಿ, ಶೀಘ್ರವೇ ಜಾರಿಗೆ ತರುತ್ತೇವೆ ಎಂದು ಬೈಡನ್ ಹೇಳಿದರು.

ಇನ್ನು ಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿರುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, ಈಗಾಗಲೇ ಅಮೆರಿಕದಲ್ಲಿ 98,49,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿವೆ. ಅಂತೆಯೇ 2,37,000 ಕ್ಕೂ ಅಧಿಕ ಸೋಂಕಿತರು ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com