ಆದ್ಯತೆ ಕೆಲಸಗಳನ್ನು ಪಟ್ಟಿಮಾಡಿ ಶ್ವೇತಭವನಕ್ಕೆ ಕಾಲಿಡಲು ಬೈಡನ್ ಸಜ್ಜು: ಸೋಲೊಪ್ಪಿಕೊಳ್ಳದ ಟ್ರಂಪ್!

ದ ಶಕ್ತಿಕೇಂದ್ರ ಶ್ವೇತಭವನಕ್ಕೆ ಕಾಲಿಡಲು ಜೊ ಬೈಡನ್ ಅಣಿಯಾಗುತ್ತಿದ್ದಂತೆ ಇತ್ತ ಸೋಲನ್ನು ಒಪ್ಪಿಕೊಳ್ಳಲು ಡೊನಾಲ್ಡ್ ಟ್ರಂಪ್ ತಯಾರಿಲ್ಲ. ಚುನಾವಣಾ ಫಲಿತಾಂಶದ ಮೇಲೆ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.
ಜೊ ಬೈಡನ್-ಕಮಲಾ ಹ್ಯಾರಿಸ್
ಜೊ ಬೈಡನ್-ಕಮಲಾ ಹ್ಯಾರಿಸ್

ವಾಷಿಂಗ್ಟನ್: ಅಮೆರಿಕದ ಶಕ್ತಿಕೇಂದ್ರ ಶ್ವೇತಭವನಕ್ಕೆ ಕಾಲಿಡಲು ಜೊ ಬೈಡನ್ ಅಣಿಯಾಗುತ್ತಿದ್ದಂತೆ ಇತ್ತ ಸೋಲನ್ನು ಒಪ್ಪಿಕೊಳ್ಳಲು ಡೊನಾಲ್ಡ್ ಟ್ರಂಪ್ ತಯಾರಿಲ್ಲ. ಚುನಾವಣಾ ಫಲಿತಾಂಶದ ಮೇಲೆ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.

ವಿಶ್ವದ ಹಲವು ನಾಯಕರು, ಬೆಂಬಲಿಗರಿಂದ ಜೊ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದ್ದು, ಜೊ ಬೈಡನ್ ಮತ್ತು ಕಮಲಾ ಹ್ಯಾರಿಸ್ ಒಟ್ಟಾಗಿ ವೆಬ್ ಸೈಟ್ BuildBackBetter.com ಮತ್ತು ಟ್ವಿಟ್ಟರ್ ಪೇಜ್ @Transition46ಯನ್ನು ಆರಂಭಿಸಿದ್ದಾರೆ.

ಮೊನ್ನೆ ಶನಿವಾರ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಶ್ವೇತಭವನದಿಂದ ಹೊರಬಂದ ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್ ಹತ್ತಿರವಿರುವ ತಮ್ಮ ಗಾಲ್ಫ್ ಕೋರ್ಸ್ ಗೆ ತೆರಳಿ ಗಾಲ್ಫ್ ಆಡಿದರು. ನಿನ್ನೆಯೂ ಕೂಡ ಗಾಲ್ಫ್ ಆಡಿ ತಮ್ಮ ಮನಸ್ಸು ಹಗುರ ಮಾಡಿಕೊಂಡರು ಎನ್ನಲಾಗುತ್ತಿದೆ.

ಈ ವಾರ ಡೊನಾಲ್ಡ್ ಟ್ರಂಪ್ ಸುಪ್ರೀಂ ಕೋರ್ಟ್ ನಲ್ಲಿ ಬಲವಾದ ಮೊಕದ್ದಮೆಯನ್ನು ಹೂಡುವ ನಿರೀಕ್ಷೆಯಿದೆ. ಈ ಬಗ್ಗೆ ಅವರ ವಕೀಲ ರೂಡಿ ಗಿಯುಲಿಯಾನಿ ಹೇಳಿದ್ದು ಚುನಾವಣೆಯಲ್ಲಿ ವಂಚನೆ ನಡೆದಿರುವ ಬಗ್ಗೆ ಸಾಕಷ್ಟು ಸಾಕ್ಷಿಗಳಿವೆ ಎಂದು ಹೇಳಲಾಗುತ್ತಿದೆ. 

ಫಾಕ್ಸ್ ನ್ಯೂಸ್ ಜೊತೆ ಮಾತನಾಡಿದ ರೂಡಿ ಗಿಯುಲಿಯಾನಿ, ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ತಂಡ ಇಂದು ಅಧಿಕಾರಿಗಳ ವಿರುದ್ಧ ಕಾನೂನು ಮೊಕದ್ದಮೆ ಹೂಡಲಿದ್ದಾರೆ. ರಾಜ್ಯದ ಕಾನೂನನ್ನು ಉಲ್ಲಂಘಿಸಿ ನಾಗರಿಕ ಹಕ್ಕುಗಳನ್ನು ಉಲ್ಲಂಘಿಸಿ ಅಸಮರ್ಪಕವಾಗಿ ಚುನಾವಣೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. 

ಫಲಿತಾಂಶ ಸ್ಪಷ್ಟವಾಗಿದ್ದು ಜೊ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರಿಗೆ ಅಭಿನಂದನೆಗಳು ಎಂದು ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ, 

ಜೊ ಬೈಡನ್ ಅವರು ವೆಬ್ ಸೈಟ್ ಆರಂಭಿಸಿದ್ದು ಅದರಲ್ಲಿ ನಾಲ್ಕು ಪ್ರಮುಖ ಆದ್ಯತೆಗಳನ್ನು ಪಟ್ಟಿ ಮಾಡಿದ್ದಾರೆ, ಕೋವಿಡ್-19, ಆರ್ಥಿಕ ಪುನಶ್ಚೇತನ, ಜನಾಂಗೀಯ ಸಮಾನತೆ ಮತ್ತು ಹವಾಮಾನ ಬದಲಾವಣೆ ವಿಷಯಗಳು ಅವರು ಅಧ್ಯಕ್ಷರಾದ ತಕ್ಷಣ ಮಾಡುವ ಕೆಲಸಗಳಾಗಿವೆ ಎಂದು ಹೇಳಿಕೊಂಡಿದ್ದಾರೆ. 

ಜೊ ಬೈಡನ್ ಅವರು ಅಮೆರಿಕದ 46ನೇ ಅಧ್ಯಕ್ಷರಾಗಿ ಮುಂದಿನ ವರ್ಷ ಜನವರಿ 20ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. 
ಸೋಲೊಪ್ಪಿಕೊಳ್ಳುವುದು ಅನಿವಾರ್ಯ: ಜಾನ್ ಎಫ್ ಕೆನಡಿಯವರ ನಂತರ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿರುವ ಎರಡನೇ ಕ್ಯಾಥೊಲಿಕ್ ಬೈಡನ್ ಆಗಿದ್ದಾರೆ. ನಿನ್ನೆ ಬೆಳಗ್ಗೆ ತಮ್ಮ ತವರು ಡೆಲವರೆಯ ವಿಲ್ಮಿಂಗ್ಟನ್ ನಲ್ಲಿ ಚರ್ಚ್ ಗೆ ಭೇಟಿ ನೀಡಿದ ಅವರು ಚುನಾವಣೆ ನ್ಯಾಯಯುತವಾಗಿ ನಡೆದಿದ್ದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಲು ಒಪ್ಪಿಕೊಳ್ಳುವುದು ಅನಿವಾರ್ಯ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com