'ಸೋಲು ಒಪ್ಪಿಕೊಳ್ಳಿ, ಇಲ್ಲಿಗೇ ನಿಲ್ಲಿಸೋಣ, ಕೋರ್ಟ್ ಗೆ ಹೋಗೋದು ಬೇಡ': ಡೊನಾಲ್ಡ್ ಟ್ರಂಪ್ ಗೆ ಪತ್ನಿ ಮೆಲಾನಿಯಾ ಸಲಹೆ

ಎರಡನೇ ಬಾರಿ ಅಧ್ಯಕ್ಷೀಯ ಪದವಿ ಚುಕ್ಕಾಣಿ ಹಿಡಿಯಲು ಸಿದ್ದರಾಗಿದ್ದ ಡೊನಾಲ್ಡ್ ಟ್ರಂಪ್ ಈ ಬಾರಿ ಸೋಲಿನ ಆಘಾತದಿಂದ ಇನ್ನೂ ಹೊರಬಂದಿಲ್ಲ. ಸೋಲೊಪ್ಪಿಕೊಳ್ಳಲು ಸಿದ್ದರಿಲ್ಲದ ಅವರು ಮತ ಎಣಿಕೆಯಲ್ಲಿ ಅಕ್ರಮವಾಗಿದೆ ಎಂದು ಹೇಳುತ್ತಾ ಬಂದಿದ್ದು ಈ ಸಂಬಂಧ ಇಂದು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಕೂಡ ಸಿದ್ದರಾಗಿದ್ದಾರೆ.
ಡೊನಾಲ್ಡ್ ಟ್ರಂಪ್-ಮೆಲಾನಿಯಾ ಟ್ರಂಪ್
ಡೊನಾಲ್ಡ್ ಟ್ರಂಪ್-ಮೆಲಾನಿಯಾ ಟ್ರಂಪ್

ವಾಷಿಂಗ್ಟನ್: ಎರಡನೇ ಬಾರಿ ಅಧ್ಯಕ್ಷೀಯ ಪದವಿ ಚುಕ್ಕಾಣಿ ಹಿಡಿಯಲು ಸಿದ್ದರಾಗಿದ್ದ ಡೊನಾಲ್ಡ್ ಟ್ರಂಪ್ ಈ ಬಾರಿ ಸೋಲಿನ ಆಘಾತದಿಂದ ಇನ್ನೂ ಹೊರಬಂದಿಲ್ಲ. ಸೋಲೊಪ್ಪಿಕೊಳ್ಳಲು ಸಿದ್ದರಿಲ್ಲದ ಅವರು ಮತ ಎಣಿಕೆಯಲ್ಲಿ ಅಕ್ರಮವಾಗಿದೆ ಎಂದು ಹೇಳುತ್ತಾ ಬಂದಿದ್ದು ಈ ಸಂಬಂಧ ಇಂದು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಕೂಡ ಸಿದ್ದರಾಗಿದ್ದಾರೆ.

ಆದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತರು ಸೋಲು ಒಪ್ಪಿಕೊಳ್ಳುವುದೇ ಮೇಲು ಎನ್ನುತ್ತಿದ್ದಾರಂತೆ. ಅಮೆರಿಕದ ಫಸ್ಟ್ ಲೇಡಿ, ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಕೂಡ ಜೊ ಬೈಡನ್ ವಿರುದ್ಧ ಸೋಲು ಒಪ್ಪಿಕೊಳ್ಳಿ ಎಂದು ತಮ್ಮ ಪತಿಗೆ ಬುದ್ದಿಮಾತು ಹೇಳುತ್ತಿದ್ದಾರಂತೆ.

ಮೊನ್ನೆ ಚುನಾವಣೆ ನಡೆದ ಬಳಿಕ ನಡೆದ ಬೆಳವಣಿಗೆಗಳ ಬಗ್ಗೆ ಮೆಲಾನಿಯಾ ಟ್ರಂಪ್ ಸಾರ್ವಜನಿಕವಾಗಿ ಏನೂ ಹೇಳಿಕೆ ನೀಡಿಲ್ಲ ಮತ್ತು ಮಾತನಾಡಿಲ್ಲ. ಆದರೆ ಖಾಸಗಿಯಾಗಿ ತಮ್ಮ ಪತಿಗೆ ಸೋಲು ಒಪ್ಪಿಕೊಳ್ಳುವಂತೆ, ಮುಂದೆ ಯಾವುದೇ ಕಾನೂನು ಹೋರಾಟಕ್ಕೆ ಇಳಿಯುವುದು ಬೇಡ ಎಂದು ಸಲಹೆ ಅಭಿಪ್ರಾಯ ನೀಡಿದ್ದಾರೆಂದು ಸಿಎನ್ಎನ್ ಸುದ್ದಿವಾಹಿನಿ ವರದಿ ಮಾಡಿದೆ.
ಕಳೆದ ತಿಂಗಳು ತಮ್ಮ ಪತಿಯ ಪರವಾಗಿ ಮೆಲಾನಿಯಾ ಟ್ರಂಪ್ ಬಿರುಸಿನ ಪ್ರಚಾರ ನಡೆಸಿದ್ದರು. ಆ ಬಳಿಕ ಮೊನ್ನೆ ನವೆಂಬರ್ 3ರಂದು ಮತದಾನ ದಿನ ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ಬಂದಿದ್ದರು. ನಂತರ ಬಹಿರಂಗವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ ಮತ್ತು ಹೇಳಿಕೆಯನ್ನೂ ನೀಡಿಲ್ಲ. 

ಅಧ್ಯಕ್ಷ ಟ್ರಂಪ್ ಅವರ ಅಳಿಯ ಜೇರ್ಡ್ ಕುಶ್ನರ್, ಡೊನಾಲ್ಡ್ ಟ್ರಂಪ್ ಅವರ ಹಿರಿಯ ಸಲಹೆಗಾರನೂ ಆಗಿದ್ದು ಅವರನ್ನು ಭೇಟಿ ಮಾಡಿ ಸೋಲು ಒಪ್ಪಿಕೊಳ್ಳಿ ಎಂದು ಕೇಳಿಕೊಂಡಿದ್ದಾರೆ ಎಂದು ಸಹ ಸಿಎನ್ ಎನ್ ವರದಿ ಮಾಡಿದೆ. 

ಬೈಡನ್ ಅವರನ್ನು ಅಕ್ರಮವಾಗಿ ಈ ಬಾರಿಯ ಚುನಾವಣೆಯಲ್ಲಿ ವಿಜೇತ ಎಂದು ಘೋಷಿಸಲಾಗಿದ್ದು, ಈ ಮತದಾನ ಪ್ರಕ್ರಿಯೆ, ಚುನಾವಣೆ ಸ್ಪರ್ಧೆ ಇನ್ನೂ ಮುಗಿದಿಲ್ಲ. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ. ನಿಕಟ ಸಂಪರ್ಕಜಾಲಗಳು ಡೆಮಾಕ್ರಟ್ ಅಭ್ಯರ್ಥಿ ಜೊ ಬೈಡನ್ ಅವರಿಗೆ ಸಹಾಯ ಮಾಡಿ ಗೆಲ್ಲಿಸಿದ್ದಾರೆ, ಇದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇನೆ ಎಂದು ಟ್ರಂಪ್ ಹೇಳುತ್ತಿದ್ದಾರೆ ಎಂದು ಹಿಲ್ಲ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com