ಯುಎಸ್ ರಕ್ಷಣಾ ಕಾರ್ಯದರ್ಶಿ ಸಿಬ್ಬಂದಿ ಮುಖ್ಯಸ್ಥರಾಗಿ ಭಾರತೀಯ ಮೂಲಕ ಕಾಶ್ ಪಟೇಲ್ ನೇಮಕ

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಕ್ರಿಸ್ ಮಿಲ್ಲರ್ ಅವರ ಸಿಬ್ಬಂದಿವರ್ಗಗಳ ಮುಖ್ಯಸ್ಥರನ್ನಾಗಿ ಭಾರತೀಯ ಮೂಲದ ಕಾಶ್ ಪಟೇಲ್ ಅವರನ್ನು ನೇಮಿಸಲಾಗಿದೆ ಎಂದು ಪೆಂಟಗನ್ ಪ್ರಕಟಿಸಿದೆ.
ಕಾಶ್ ಪಟೇಲ್
ಕಾಶ್ ಪಟೇಲ್

ವಾಷಿಂಗ್ಟನ್: ಅಮೆರಿಕದ ರಕ್ಷಣಾ ಕಾರ್ಯದರ್ಶಿ ಕ್ರಿಸ್ ಮಿಲ್ಲರ್ ಅವರ ಸಿಬ್ಬಂದಿವರ್ಗಗಳ ಮುಖ್ಯಸ್ಥರನ್ನಾಗಿ ಭಾರತೀಯ ಮೂಲದ ಕಾಶ್ ಪಟೇಲ್ ಅವರನ್ನು ನೇಮಿಸಲಾಗಿದೆ ಎಂದು ಪೆಂಟಗನ್ ಪ್ರಕಟಿಸಿದೆ.

ಟ್ರಂಪ್ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಅವರನ್ನು ವಜಾ ಮಾಡಿ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕ ಕ್ರಿಸ್ ಮಿಲ್ಲರ್ ಅವರನ್ನು ರಕ್ಷಣಾ ಕಾರ್ಯದರ್ಶಿಯಾಗಿ ನೇಮಿಸಿದ ದಿನದ ನಂತರ ಪೆಂಟಗನ್‌ನಿಂದ ಈ ಹೊಸ ಪ್ರಕಟಣೆ ಬಂದಿದೆ.

ಮಿಲ್ಲರ್ ಸೋಮವಾರ ಹೊಸ ಹುದ್ದೆಯ ಕಾರ್ಯಗಳು ಮತ್ತು ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ ಎಂದು ಪೆಂಟಗನ್ ತಿಳಿಸಿದೆ. ಪ್ರಸ್ತುತ ರಾಷ್ಟ್ರೀಯ ಭದ್ರತಾ ಮಂಡಳಿಯ ಸಿಬ್ಬಂದಿಯಾಗಿರುವ ಕಾಶ್ ಪಟೇಲ್ ಅವರನ್ನು ಕಾರ್ಯಕಾರಿ ಕಾರ್ಯದರ್ಶಿ ಕ್ರಿಸ್ ಮಿಲ್ಲರ್ ಅವರು ತಮ್ಮ ಸಿಬ್ಬಂದಿ ವರ್ಗದ ಮುಖ್ಯಸ್ಥನನ್ನಾಗಿ ನೇಮಕ ಮಾಡಿದ್ದಾರೆ. ಪಟೇಲ್ ಜೆನ್ ಸ್ಟೀವರ್ಟ್ ಅವರಿಂದ ತೆರವಾದ ಸ್ಥಾನಕ್ಕೆ ನೇಮಕವಾಗಿದ್ದಾರೆ.

ಕಾಶ್ ಪಟೇಲ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕಶ್ಯಪ್ ಪ್ರಮೋದ್ ಪಟೇಲ್ ಅವರು ಈ ಹಿಂದೆ ಹೌಸ್ ಪರ್ಮನೆಂಟ್ ಸೆಲೆಕ್ಟ್ ಕಮಿಟಿಯಲ್ಲಿ ಭಯೋತ್ಪಾದನೆ ನಿಗ್ರಹದ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಜೂನ್ 2019 ರಲ್ಲಿ ಪಟೇಲ್ ಅವರನ್ನು ಶ್ವೇತಭವನದಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯ (ಎನ್‌ಎಸ್‌ಸಿ) ಭಯೋತ್ಪಾದನಾ ನಿಗ್ರಹ ನಿರ್ದೇಶನಾಲಯದ ಹಿರಿಯ ನಿರ್ದೇಶಕರಾಗಿ ನೇಮಿಸಲಾಯಿತು. ನ್ಯೂಯಾರ್ಕ್ ಮೂಲದ ಪಟೇಲ್ ಭಾರತದ ಗುಜರಾತ್ ಮೂಲದವರಾಗಿದ್ದಾರೆ. ಆದರೆ ಪಟೇಲ್ ಅವರ ತಾಯಿ ಪೂರ್ವ ಆಫ್ರಿಕಾದ ಟಾಂಜಾನಿಯಾದವರಾದರೆ ತಂದೆ  ಉಗಾಂಡಾದವರು ಅವರು 1970 ರಲ್ಲಿ ಕೆನಡಾದಿಂದ ಯುಎಸ್ ಗೆ ವಲಸೆ ಬಂದಿದ್ದರು. 70 ರ ದಶಕದ ಉತ್ತರಾರ್ಧದಲ್ಲಿ ಈ ಕುಟುಂಬವು ನ್ಯೂಯಾರ್ಕಿನ ಕ್ವೀನ್ಸ್ಗೆ ಸ್ಥಳಾಂತರಗೊಂಡಿತು - ಇದನ್ನು ಸಾಮಾನ್ಯವಾಗಿ ಲಿಟಲ್ ಇಂಡಿಯಾ ಎಂದು ಕರೆಯಲಾಗುತ್ತದೆ.

ನ್ಯೂಯಾರ್ಕ್ ಮತ್ತು ವರ್ಜೀನಿಯಾದ ರಿಚ್ಮಂಡ್ನಲ್ಲಿನ ಕಾಲೇಜು ಮತ್ತು ನ್ಯೂಯಾರ್ಕ್ನ ಕಾನೂನು ಶಾಲೆಯ ವ್ಯಾಸಂಗದ ನಂತರ, ಪಟೇಲ್ ಫ್ಲೋರಿಡಾಕ್ಕೆ ತೆರಳಿ ನಾಲ್ಕು ವರ್ಷಗಳ ಕಾಲ ರಾಜ್ಯ ಸಾರ್ವಜನಿಕ ರಕ್ಷಕರಾಗಿದ್ದರು ಮತ್ತು ನಂತರ ನಾಲ್ಕು ವರ್ಷಗಳ ಕಾಲ ಫೆಡರಲ್ ಸಾರ್ವಜನಿಕ ರಕ್ಷಕರಾಗಿದ್ದರು. ಫ್ಲೋರಿಡಾದಿಂದ ಅವರು ವಾಷಿಂಗ್ಟನ್ ಡಿಸಿಗೆ ಆಗಮಿಸಿದ ಪಟೇಲ್  ಅಲ್ಲಿ ನ್ಯಾಯಾಂಗ ಇಲಾಖೆಯಲ್ಲಿ ಭಯೋತ್ಪಾದನೆ ಪ್ರಾಸಿಕ್ಯೂಟರ್ ಆಗಿ ಸೇವೆ ಸಲ್ಲಿಸಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com