ಇಸ್ಲಾಮಿಕ್‍ ಸ್ಟೇಟ್ ನಂಟಿನ ಉಗ್ರರಿಂದ 50 ಗ್ರಾಮಸ್ಥರ ಶಿರಚ್ಛೇದ

ಉಗ್ರರು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಭೀತಿಗೊಂಡ ಗ್ರಾಮಸ್ಥರು ಕಾಡಿಗೆ ಓಡಿಹೋದರೂ ಬಿಡದೆ ಉಗ್ರರು ಕ್ರೌರ್ಯ ಮೆರೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಾಪುಟೊ: ಕಳೆದ ಕೆಲವು ದಿನಗಳಲ್ಲಿ ಉತ್ತರ ಮೊಜಾಂಬಿಕ್‌ನ ಕ್ಯಾಬೊ ಡೆಲ್ಗಾಡೊ ಪ್ರಾಂತ್ಯದ ಹಲವಾರು ಹಳ್ಳಿಗಳ ನಿವಾಸಿಗಳ ಮೇಲೆ ದಾಳಿ ನಡೆಸಿರುವ ಇಸ್ಲಾಮಿಕ್‍ ಸ್ಟೇಟ್ ನಂಟಿನ ಉಗ್ರರು 50 ಕ್ಕೂ ಹೆಚ್ಚು ಗ್ರಾಮಸ್ಥರ ಶಿರಚ್ಛೇದ ಮಾಡಿದ್ದಾರೆ ಎಂದು ಅಲ್ಲಿನ ಅಧಿಕೃತ ಮಾಧ್ಯಮ ಮತ್ತು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

‘ಉಗ್ರರು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಭೀತಿಗೊಂಡ ಗ್ರಾಮಸ್ಥರು ಕಾಡಿಗೆ ಓಡಿಹೋದರೂ ಬಿಡದೆ ಉಗ್ರರು ಕ್ರೌರ್ಯ ಮೆರೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಉಗ್ರರು ಹಳ್ಳಿಯೊಂದರ ನಿವಾಸಿಗಳನ್ನು ಕೊಲೆ ಮಾಡುವ ಮುನ್ನ ಫುಟ್ಬಾಲ್ ಪಿಚ್‌ ನಲ್ಲಿ ಓಡಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com