ರಾಹುಲ್ ಗಾಂಧಿ 'ಶಿಕ್ಷಕನನ್ನು ಮೆಚ್ಚಿಸಲು ನೋಡುವ ವಿದ್ಯಾರ್ಥಿಯಂತೆ, ಆದರೆ ಸಾಮರ್ಥ್ಯವಿಲ್ಲ': ಬರಾಕ್ ಒಬಾಮಾ

ಟ್ವಿಟ್ಟರ್ ನಲ್ಲಿ ಶುಕ್ರವಾರ ಒಂದು ವಿಷಯ ಬಹಳ ಟ್ರೆಂಡ್ ಆಗಿದೆ. ಅದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿರುವ ವಿಷಯ.
ಬರಾಕ್ ಒಬಾಮಾ-ರಾಹುಲ್ ಗಾಂಧಿ
ಬರಾಕ್ ಒಬಾಮಾ-ರಾಹುಲ್ ಗಾಂಧಿ

ನವದೆಹಲಿ: ಟ್ವಿಟ್ಟರ್ ನಲ್ಲಿ ಶುಕ್ರವಾರ ಒಂದು ವಿಷಯ ಬಹಳ ಟ್ರೆಂಡ್ ಆಗಿದೆ. ಅದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿರುವ ವಿಷಯ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಗುಣ ಶಿಕ್ಷಕನನ್ನು ಮೆಚ್ಚಿಸಲು ಉತ್ಸುಕನಾಗಿರುವ ವಿದ್ಯಾರ್ಥಿಯಂತೆ, ಆದರೆ ವಿಷಯವನ್ನು ಕರಗತ ಮಾಡಿಕೊಳ್ಳುವ ಮನೋಭಾವ, ಯೋಗ್ಯತೆ ಮತ್ತು ಉತ್ಸಾಹ ಇಲ್ಲದಿರುವುದು ಅವರ ಕೊರತೆಯಾಗಿದೆ ಎಂದು ಹೇಳಿದ್ದಾರೆ.

ಬರಾಕ್ ಒಬಾಮಾ ಈ ವಿಷಯವನ್ನು ತಮ್ಮ 'ಎ ಪ್ರಾಮಿಸ್ಡ್ ಲ್ಯಾಂಡ್' ಎಂಬ ಪುಸ್ತಕದಲ್ಲಿ ನಮೂದಿಸಿದ್ದಾರೆ. ಇದರಲ್ಲಿ ವಿಶ್ವದ ಹಲವು ರಾಜಕೀಯ ನಾಯಕರ ಬಗ್ಗೆ  ಮತ್ತು ಹಲವು ವಿಷಯಗಳನ್ನು ದಾಖಲಿಸಿದ್ದಾರೆ. 

ರಾಹುಲ್ ಗಾಂಧಿಯವರಲ್ಲಿ ಬೆಳೆಯದಿರುವ ಅಜ್ಞಾತ ಗುಣವಿದೆ, ಅಧ್ಯಾಪಕರು ಕೊಟ್ಟ ಕೆಲಸವನ್ನು ಮಾಡಿ ಮುಗಿಸಿ ಅವರನ್ನು ಮೆಚ್ಚಿಸಲು ನೋಡುವ ವಿದ್ಯಾರ್ಥಿಯಂತಹ ಗುಣ, ಆದರೆ ವಿಷಯದಲ್ಲಿ ಪರಿಣತಿ ಹೊಂದಲು ಅವರಲ್ಲಿ ಮನೋಭಾವ ಮತ್ತು ಉತ್ಸಾಹ, ಆಸಕ್ತಿಯ ಕೊರತೆಯಿದೆ ಎಂದಿದ್ದಾರೆ ಎಂದು ಹೇಳಿದ್ದಾರೆ ಎಂದು ಅಮೆರಿಕದ ಪ್ರಸಿದ್ಧ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ತಮ್ಮ ಪುಸ್ತಕದಲ್ಲಿ ರಾಹುಲ್ ಗಾಂಧಿಯವರ ತಾಯಿ ಸೋನಿಯಾ ಗಾಂಧಿ ಬಗ್ಗೆ ಕೂಡ ಉಲ್ಲೇಖಿಸಿದ್ದಾರೆ. ಚಾರ್ಲಿ ಕ್ರಿಸ್ಟ್ ಮತ್ತು ರಹಮ್ ಇಮ್ಯಾನ್ಯುಯೆಲ್ ಅವರಂತಹ ಪುರುಷರ ಸುಂದರತೆಯ ಬಗ್ಗೆ ನಮಗೆ ತಿಳಿಸಲಾಗಿದೆ, ಆದರೆ ಮಹಿಳೆಯರ ಸೌಂದರ್ಯದ ಬಗ್ಗೆ ಅಲ್ಲ, ಸೋನಿಯಾ ಗಾಂಧಿಯವರಂತೆ ಒಂದು ಅಥವಾ ಎರಡು ನಿದರ್ಶನಗಳನ್ನು ಹೊರತುಪಡಿಸಿ ಮಹಿಳೆಯರ ಸೌಂದರ್ಯದ ಬಗ್ಗೆ ಉಲ್ಲೇಖವಿಲ್ಲ ಎಂದಿದ್ದಾರೆ.

ನಿರ್ಭಯ ಸಮಗ್ರತೆಗೆ ಭಾರತದ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್, ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಬಾಬ್ ಗೇಟ್ಸ್ ನಂತಹ ಒಂದಿಬ್ಬರು ನಾಯಕರಷ್ಟೆ ಶ್ರಮಿಸಿದ್ದರು ಎಂದು ಬರಾಕ್ ಒಬಾಮಾ ಹೇಳಿದ್ದಾರೆ.

768 ಪುಟಗಳ ಪುಸ್ತಕ ನವೆಂಬರ್ 17ರಂದು ಮಾರುಕಟ್ಟೆಗೆ ಬರಲಿದ್ದು ಬರಾಕ್ ಒಬಾಮಾ ಅವರ ಬಾಲ್ಯಜೀವನ, ರಾಜಕೀಯ ಬದುಕು, 2008ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಗೆಲುವು ಹೀಗೆ ಅನೇಕ ಸಂಗತಿಗಳನ್ನು ನಮೂದಿಸಿದ್ದಾರೆ. 

ಬರಾಕ್ ಒಬಾಮಾ ಅವರು ಅಮೆರಿಕದ ಮೊದಲ ಆಫ್ರಿಕನ್ ಅಮೆರಿಕನ್ ಅಧ್ಯಕ್ಷ. 2008ರಿಂದ 2016ರವರೆಗೆ ಅಮೆರಿಕ ಅಧ್ಯಕ್ಷರಾಗಿದ್ದ ಅವರು 2010 ಮತ್ತು 2015ರಲ್ಲಿ ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com