ಅಮೆರಿಕದ ಜನತೆಗೆ ಉಚಿತ ಕೊರೋನಾ ಲಸಿಕೆ: ಡೊನಾಲ್ಡ್ ಟ್ರಂಪ್

ಮುಂದಿನ ಏಪ್ರಿಲ್ ವೇಳೆಗೆ ಅಮೆರಿಕದ ಜನತೆಗೆ ಕೊರೋನಾ ವಾಸಿ ಮಾಡುವ ಲಸಿಕೆ ದೊರಕಲಿದ್ದು, ಎಲ್ಲರಿಗೂ ಲಸಿಕೆಯನ್ನು ಉಚಿತವಾಗಿ ನೀಡುವ ಇಂಗಿತವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಮುಂದಿನ ಏಪ್ರಿಲ್ ವೇಳೆಗೆ ಅಮೆರಿಕದ ಜನತೆಗೆ ಕೊರೋನಾ ವಾಸಿ ಮಾಡುವ ಲಸಿಕೆ ದೊರಕಲಿದ್ದು, ಎಲ್ಲರಿಗೂ ಲಸಿಕೆಯನ್ನು ಉಚಿತವಾಗಿ ನೀಡುವ ಇಂಗಿತವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಗಿದ ಬಳಿಕ ಇದೇ ಮೊದಲ ಬಾರಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಏಪ್ರಿಲ್ ಒಳಗೆ ಲಸಿಕೆ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದರು.

ಮೊದಲು ಲಸಿಕೆಯನ್ನು ಆರೋಗ್ಯ ಕಾರ್ಯಕರ್ತರು ಹಾಗೂ ಗಂಭೀರ ತೊಂದರೆಗೆ ಒಳಗಾಗಿದ್ದವರಿಗೆ ನೀಡಲಾಗುತ್ತದೆ. ನಂತರ ದೇಶದ ಜನರಿಗೆ ನಾವು ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಅವರು ಪ್ರಕಟಿಸಿದರು.

ಜೋ ಬೈಡನ್ ಅಮೆರಿಕದ ಅಧ್ಯಕ್ಷ ಎನ್ನುವುದನ್ನು ಟ್ರಂಪ್ ಒಪ್ಪಿಕೊಳ್ಳಲು ಇನ್ನೂ ಸಿದ್ಧರಿಲ್ಲ. ನವೆಂಬರ್ 5 ರಂದು ಕೊನೆಯ ಭಾಷಣವನ್ನು ಮಾಡಿದ್ದ ಟ್ರಂಪ್, ಬೈಡನ್ ನಕಲಿ ಮತದಾರರನ್ನು ಸೃಷ್ಟಿಸಿ ಚುನಾವಣೆ ಗೆದ್ದಿದ್ದಾರೆ ಎಂದು ಅರೋಪಿಸಿದ್ದರು. 
ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿ ಜನವರಿಗೆ ಮುಗಿಯಲಿದ್ದು, ಜೋ ಬೈಡನ್ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿಲಿದ್ದಾರೆ. ಆದರೆ ಬೈಡೆನ್ ಗೆಲುವು ಒಪ್ಪಲು ಡೊನಾಲ್ಡ್ ಟ್ರಂಪ್ ಇನ್ನೂ ಮಾನಸಿಕವಾಗಿ ಸಿದ್ಧವಾಗಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com