ಸೂಕಿ
ಸೂಕಿ

ಮ್ಯಾನ್ಮಾರ್ ಚುನಾವಣೆಯಲ್ಲಿ ಸಾಧಿಸಿದ ಸೂಕಿ ಪಕ್ಷಕ್ಕೆ ಭರ್ಜರಿ ಗೆಲುವು!

ಮ್ಯಾನ್ಮಾರ್ ಚುನಾವಣೆಯಲ್ಲಿ ಆಂಗ್ ಸಾನ್ ಸೂಕಿ ಆಡಳಿತ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ ಎಂದು ಅಧಿಕೃತ ಫಲಿತಾಂಶಗಳಿಂದ ಹೊರಬಿದ್ದಿವೆ. 

ಯಾಂಗೊನ್: ಮ್ಯಾನ್ಮಾರ್ ಚುನಾವಣೆಯಲ್ಲಿ ಆಂಗ್ ಸಾನ್ ಸೂಕಿ ಆಡಳಿತ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ ಎಂದು ಅಧಿಕೃತ ಫಲಿತಾಂಶಗಳಿಂದ ಹೊರಬಿದ್ದಿವೆ. 

ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ(ಎನ್‌ಎಲ್‌ಡಿ) ಈಗಾಗಲೇ ವಿಜಯವನ್ನು ಘೋಷಿಸಿದೆ. ಇದರೊಂದಿಗೆ ಬೆಂಬಲಿಗರು ಬೀದಿಗಿಳಿದು ಸಂಭ್ರಮಿಸಿದ್ದಾರೆ.

ಆದರೆ ಕಳೆದ ಐದು ದಿನಗಳಿಂದ ಫಲಿತಾಂಶ ಹೊರಬರುತ್ತಿದ್ದು ಇಂದು ಸಂಜೆ ಅಧಿಕೃತ ಫಲಿತಾಂಶ ಘೋಷಣೆಯಾಗಿದೆ. 2011ರಲ್ಲಿ ರಾಷ್ಟ್ರವು ಸಂಪೂರ್ಣ ಮಿಲಿಟರಿ ಆಡಳಿತದಿಂದ ಹೊರಹೊಮ್ಮಿದ ನಂತರದ ಇದು ಎರಡನೆಯ ಮತದಾನವಾಗಿದೆ. 

ಶುಕ್ರವಾರ ಸಂಜೆ ಚುನಾವಣಾ ಆಯೋಗವು ಪ್ರಕಟಿಸಿದ ಫಲಿತಾಂಶಗಳು ಎನ್‌ಎಲ್‌ಡಿ 396 ಸ್ಥಾನಗಳನ್ನು ಗೆದ್ದಿದೆ. ಸಂಸತ್ತಿನ 60 ಪ್ರತಿಶತಕ್ಕಿಂತಲೂ ಹೆಚ್ಚು ಸ್ಥಾನಗಳು, ಸಂವಿಧಾನದಡಿಯಲ್ಲಿ ಮಿಲಿಟರಿಗೆ ಮೀಸಲಾಗಿರುವ ಕಾಲು ಭಾಗಗಳನ್ನೂ ಸಹ ಗಣನೆಗೆ ತೆಗೆದುಕೊಂಡಿದೆ.

ಕಳೆದ ಕೆಲವು ವರ್ಷಗಳಿಂದ ಜನಾಂಗೀಯ ಸಂಘರ್ಷಕ್ಕೆ ಸೂಕಿ ಸರ್ಕಾರ ಬ್ರೇಕ್ ಹಾಕಿತ್ತು. ಇದರಿಂದ ಅವರ ಜನಪ್ರಿಯತೆ ಹೆಚ್ಚಿತ್ತು. ಇದು ಈ ಚುನಾವಣೆಯಲ್ಲಿ ಅವರ ಗೆಲುವಿಗೆ ನೆರವಾಯಿತು ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com