ವಿಶ್ವದಾದ್ಯಂತದ ಕೊರೋನಾ ಮಹಾಮಾರಿಗೆ 1.30 ಕೋಟಿ ಜನರು ಬಲಿ

ಮಹಾಮಾರಿ ಕೊರೋನಾ ವೈರಸ್'ಗೆ ವಿಶ್ವದಾದ್ಯಂತ 1,309,713, ಮಂದಿ ಬಲಿಯಾಗಿದ್ದಾರೆಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ವರದಿ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ಮಹಾಮಾರಿ ಕೊರೋನಾ ವೈರಸ್'ಗೆ ವಿಶ್ವದಾದ್ಯಂತ 1,309,713, ಮಂದಿ ಬಲಿಯಾಗಿದ್ದಾರೆಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ವರದಿ ಹೇಳಿದೆ.

ಕಳೆದ 24 ಗಂಟೆಗಳಲ್ಲಿ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಒಟ್ಟಾರೆ 657,312 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂಡಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 54,318,841ಕ್ಕೆ ಏರಿಕೆಯಾಗಿದೆ. 

ವಿಶ್ವ ಆರೋಗ್ಯ ಸಂಸ್ಥೆ ಮಾರ್ಚ್ 11 ರಂದು ಕೋವಿಡ್-19 ಅನ್ನು ವಿಶ್ವವ್ಯಾಪಿ ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು. ಇದುವರೆಗೆ ಅಮೆರಿಕ, ಭಾರತ ಮತ್ತು ಬ್ರೆಜಿಲ್‍ ನಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಕಳೆದ ಕೆಲ ದಿನಗಳಿಂದ ಐರೋಪ್ಯ ಒಕ್ಕೂಟದ ಕೆಲ ದೇಶಗಳು, ಬ್ರೆಜಿಲ್‍ ಇನ್ನಿತರ ರಾಷ್ಟ್ರಗಳಲ್ಲಿ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರುತ್ತಿದೆ. ಇದರಿಂದ ಕೆಲ ದೇಶಗಳ ಲಾಕ್‍ ಡೌನ್‍ ಮತ್ತಿತರ ನಿರ್ಬಂಧಗಳನ್ನು ಮತ್ತೆ ಜಾರಿಗೊಳಿಸಿವೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com