ಅಮೆರಿಕಾದಲ್ಲಿ 10 ಲಕ್ಷ ಮಕ್ಕಳಿಗೆ ಕೊರೊನಾ ಸೋಂಕು

ಪ್ರಪಂಚದಾದ್ಯಂತ ವ್ಯಾಪಿಸಿರುವ ಕೊರೊನಾ ವೈರಸ್ ಅಮೆರಿಕಾ ದೇಶದಲ್ಲಿ 10 ಲಕ್ಷ ಮಂದಿಗೂ ಹೆಚ್ಚು ಮಕ್ಕಳಿಗೆ ತಗುಲಿದೆ ಎಂದು ಅಮೆರಿಕಾ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ತನ್ನ ಹೊಸ ವರದಿಯಲ್ಲಿ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ಪ್ರಪಂಚದಾದ್ಯಂತ ವ್ಯಾಪಿಸಿರುವ ಕೊರೊನಾ ವೈರಸ್ ಅಮೆರಿಕಾ ದೇಶದಲ್ಲಿ 10 ಲಕ್ಷ ಮಂದಿಗೂ ಹೆಚ್ಚು ಮಕ್ಕಳಿಗೆ ತಗುಲಿದೆ ಎಂದು ಅಮೆರಿಕಾ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ತನ್ನ ಹೊಸ ವರದಿಯಲ್ಲಿ ತಿಳಿಸಿದೆ.

ಕರೋನಾ ವೈರಸ್ ಆರಂಭಗೊಂಡಾಗಿನಿಂದ ನವೆಂಬರ್ 12 ರವರೆಗೆ ಅಮೆರಿಕಾದಲ್ಲಿ 10,39,464 ಮಕ್ಕಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ. ಕಳೆದ ವಾರ ಅಮೆರಿಕಾದಲ್ಲಿ 1,11,946 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ ಎಂದು ಮಕ್ಕಳ ವೈದ್ಯರು ಹೇಳಿದ್ದಾರೆ.

ದಡಾರ, ಪೋಲಿಯೊ ಲಸಿಕೆ ಹಾಕಿಸಲಾದ ಮಕ್ಕಳು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿಲ್ಲ ಎಂದು ಮಕ್ಕಳ ವೈದ್ಯರ ಸಂಘದ ಅಧ್ಯಕ್ಷ ಡಾ. ಸಾಲಿಗೋಜಾ ಹೇಳಿದ್ದಾರೆ. ಪುಟ್ಟ ಮಕ್ಕಳಗೆ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಅಮೆರಿಕಾ ಸರ್ಕಾರ ರಾಷ್ಟ್ರೀಯ ಕಾರ್ಯತಂತ್ರವನ್ನು ತಕ್ಷಣ ಜಾರಿಗೆ ತರಬೇಕೆಂದು ಡಾ. ಗೋಜಾ ಒತ್ತಾಯಿಸಿದ್ದಾರೆ. ಅಮೆರಿಕಾದಲ್ಲಿ ಶೇ 14ರಷ್ಟು ಸೋಂಕು ಪ್ರಕರಣಗಳು ತಂದೆ ತಾಯಿಯಿಂದಲೇ ಮಕ್ಕಳಿಗೆ ಹರಡಿವೆ ಎಂದು ಡಾ. ಗೋಜಾ ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com