ಕೋವಿಡ್ ಲಸಿಕೆ ಯೋಜನೆ ವಿಳಂಬದ ಬಗ್ಗೆ ಬೈಡನ್ ಎಚ್ಚರಿಕೆ!

ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ಅಧಿಕಾರ ಹಸ್ತಾಂತರಿಸುವಲ್ಲಿ ವಿಳಂಬ ಮಾಡಿದರೆ ಕೋವಿಡ್ ಲಸಿಕೆ ಯೋಜನೆಯನ್ನು ಹಿಂದಿಕ್ಕಲಿದೆ ಎಂದು ಅಮೆರಿಕದ ನಿಯೋಜಿತ ನೂತನ ಅಧ್ಯಕ್ಷ ಜೋ ಬೈಡನ್ ಎಚ್ಚರಿಸಿದ್ದಾರೆ. 
ಕೋವಿಡ್ ಲಸಿಕೆ ಯೋಜನೆ ವಿಳಂಬದ ಬಗ್ಗೆ ಎಚ್ಚರಿಸಿದ ಬೈಡನ್!
ಕೋವಿಡ್ ಲಸಿಕೆ ಯೋಜನೆ ವಿಳಂಬದ ಬಗ್ಗೆ ಎಚ್ಚರಿಸಿದ ಬೈಡನ್!

ವಾಷಿಂಗ್ ಟನ್: ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ಅಧಿಕಾರ ಹಸ್ತಾಂತರಿಸುವಲ್ಲಿ ವಿಳಂಬ ಮಾಡಿದರೆ ಕೋವಿಡ್ ಲಸಿಕೆ ಯೋಜನೆಯನ್ನು ಹಿಂದಿಕ್ಕಲಿದೆ ಎಂದು ಅಮೆರಿಕದ ನಿಯೋಜಿತ ನೂತನ ಅಧ್ಯಕ್ಷ ಜೋ ಬೈಡನ್ ಎಚ್ಚರಿಸಿದ್ದಾರೆ. 

ಅಧಿಕಾರ ಹಸ್ತಾಂತರ ವಿಳಂಬವಾದಷ್ಟೂ ಕೆಲವು ವಾರ ಅಥವಾ ತಿಂಗಳು ಕೋವಿಡ್-19 ಲಸಿಕೆ ಯೋಜನೆ ಹಿಂದಕ್ಕೆ ಬೀಳಲಿದೆ ಎಂದು ಬೈಡನ್ ಎಚ್ಚರಿಸಿದ್ದಾರೆ. 

ಕೋವಿಡ್-19 ಆರೋಗ್ಯ ಸೇವೆಗಳಲ್ಲಿ ನಿರತರಾಗಿರುವವರೊಂದಿಗೆ ವರ್ಚ್ಯುಯಲ್ ಸಭೆ ನಡೆಸಿರುವ ಬೈಡನ್, ಅಧಿಕಾರ ಹಸ್ತಾಂತರದೆಡೆಗೆ ಕೆಲಸ ಮಾಡುತ್ತಿರುವ ತಮ್ಮ ತಂಡಕ್ಕೆ ನಿರ್ಗಮಿಸುತ್ತಿರುವ ಅಧ್ಯಕ್ಷರ ತಂಡದಿಂದ ಸಕಾರಾತ್ಮಕ ಸ್ಪಂದನೆ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. 

ನ.03  ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಒಪ್ಪಿಕೊಳ್ಳುವುದಕ್ಕೆ ಡೊನಾಲ್ಡ್ ಟ್ರಂಪ್ ಸಿದ್ಧರಿಲ್ಲ ಹಾಗೂ ಹಲವು ರಾಜ್ಯಗಳಲ್ಲಿ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ. 

"ಆಡಳಿತ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯನ್ನು ಒಪ್ಪಿಕೊಂಡು ಸರ್ಕಾರದ ಅಂಕಿ-ಅಂಶಗಳು, ಮಾಹಿತಿಗಳು ಸಂಪೂರ್ಣವಾಗಿ ಆತನಿಗೆ ಲಭ್ಯವಾಗುವಂತೆ ಮಾಡಬೇಕು, ಆದರೆ ಈ ವರೆಗೂ ನಮಗೆ ಯಾವೆಲ್ಲಾ ಮಾಹಿತಿ ಬೇಕೋ ಅದನ್ನು ಪಡೆದುಕೊಳ್ಳುವುದಕ್ಕೆ ನಮ್ಮ ತಂಡಕ್ಕೆ ಸಾಧ್ಯವಾಗಿಲ್ಲ, ಲಸಿಕೆ ಯಾವಾಗ ಬರಲಿದೆ, ಅದನ್ನು ವಿತರಣೆ ಮಾಡುವುದಕ್ಕೆ ಸಿದ್ಧವಾಗಿರುವ ಯೋಜನೆಗಳೇನು ಎಂಬ ಬಗ್ಗೆ ಮಾಹಿತಿ ಇಲ್ಲದಂತಾಗಿದೆ ಎಂದು ಬೈಡನ್ ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com