ಕೋವಿಡ್-19: ತುರ್ತು ಸ್ಥಿತಿಯಲ್ಲಿ ಲಸಿಕೆ ಬಳಕೆಗೆ ಅನುಮತಿ ಕೋರಿದ ಫಿಜರ್ ಸಂಸ್ಥೆ!

ಕೊವಿಡ್ ಸೋಂಕಿತರಿಗೆ ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಫಿಜರ್ ಲಸಿಕೆಗೆ ಅನುಮತಿ ನೀಡಬೇಕು ಎಂದು ಲಸಿಕೆ ತಯಾರಿಕಾ ಸಂಸ್ಥೆ ಸರ್ಕಾರದ ಅನುಮತಿ ಕೋರಿದೆ.
ಕೋವಿಡ್-19 ಲಸಿಕೆ (ಸಾಂಕೇತಿಕ ಚಿತ್ರ)
ಕೋವಿಡ್-19 ಲಸಿಕೆ (ಸಾಂಕೇತಿಕ ಚಿತ್ರ)

ವಾಷಿಂಗ್ಟನ್: ಕೊವಿಡ್ ಸೋಂಕಿತರಿಗೆ ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಫಿಜರ್ ಲಸಿಕೆಗೆ ಅನುಮತಿ ನೀಡಬೇಕು ಎಂದು ಲಸಿಕೆ ತಯಾರಿಕಾ ಸಂಸ್ಥೆ ಸರ್ಕಾರದ ಅನುಮತಿ ಕೋರಿದೆ.

ಅಮೆರಿಕ ಮೂಲದ ಲಸಿಕೆ ತಯಾರಿಕಾ ಸಂಸ್ಥೆ ಫಿಜರ್ ಮತ್ತು ತನ್ನ ಜರ್ಮನಿ ಮೂಲದ ಪಾರ್ಟ್ನರ್ ಬಯೋನ್ ಟೆಕ್ ಸಂಸ್ಥೆ ಜಂಟಿಯಾಗಿ ಸಂಶೋಧಿಸಿರುವ ಕೋವಿಡ್ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಕೋವಿಡ್ ರೋಗಿಗಳಿಗೆ ಬಳಕೆ ಮಾಡಲು ಅನುಮತಿ ನೀಡಬೇಕು ಎಂದು ಕೋರಿದೆ.  ಫಿಜರ್ ಸಂಸ್ಥೆಯ ಲಸಿಕೆ ಶೇ.95ರಷ್ಟು ಪರಿಣಾಮಕಾರಿಯಾಗಿದ್ದು, ಇದೇ ಕಾರಣಕ್ಕೆ ಸರ್ಕಾರದ ತುರ್ತು ಅನುಮೋದನೆ ಅಗತ್ಯ ಎಂದು ಸಂಸ್ಥೆ ಹೇಳಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಫಿಜರ್ ಸಂಸ್ಥೆ ತನ್ನ ಲಸಿಕಾ ಪ್ರಯೋಗದ 2ನೇ ಮಧ್ಯಂತರ ವರದಿ ಬಂದಿದ್ದು, ವರದಿಯಲ್ಲಿ ಲಸಿಕೆ ಶೇ.95ರಷ್ಟು ಪರಿಣಾಮಕಾರಿಯಾಗಿದೆ. ಅಂತೆಯೇ ಸೋಂಕಿಗೆ ತುತ್ತಾದ ಹಿರಿಯ ವಯಸ್ಕರು ಸಾವಿನ ದವಡೆಗೆ ನೂಕುವುದನ್ನು ತಡೆಯುತ್ತದೆ.   ಲಸಿಕೆಯನ್ನು ಕೋವಿಡ್ ಸೋಂಕು ದೃಢಪಟ್ಟ 170 ಸೋಂಕಿತರ ಮೇಲೆ ಪ್ರಯೋಗ ಮಾಡಲಾಗಿದ್ದು, ಲಸಿಕೆಯ ಪ್ರಾಥಮಿಕ ಪರಿಣಾಮಕಾರಿತ್ವದ ವಿಶ್ಲೇಷಣೆಯು ಮೊದಲ ಡೋಸ್ ನೀಡಿದ 28 ದಿನಗಳ ನಂತರ ಕೋವಿಡ್ -19 ವಿರುದ್ಧ ಬಿಎನ್‌ಟಿ 162 ಬಿ 2 ಲಸಿಕೆ ಶೇಕಡಾ 95   ರಷ್ಟು ಪರಿಣಾಮಕಾರಿ ಎಂದು ತೋರಿಸುತ್ತಿದೆ. ಪ್ಲೇಸಿಬೊ ಗುಂಪಿನಲ್ಲಿ 162 ಮಂದಿಯ ಮೇಲೆ ಲಸಿಕೆ ಪ್ರಯೋಗ ನಡೆಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸರ್ಕಾರ ಅನುಮತಿ ನೀಡಿದರೆ ಮುಂದಿನ ತಿಂಗಳಿನಿಂದಲೇ ಲಸಿಕೆಯ ಲಭ್ಯತೆಯನ್ನು ಖಚಿತ ಪಡಿಸುತ್ತೇವೆ ಎಂದು ಫಿಜರ್ ಸಂಸ್ಥೆ ಹೇಳಿಕೊಂಡಿದೆ. ತುರ್ತು ಬಳಕೆಗಾಗಿ ತನ್ನ ಲಸಿಕೆಗೆ ಸರ್ಕಾರದ ಅನುಮತಿ ಅತ್ಯಗತ್ಯ. ಲಸಿಕೆಯು ಎಲ್ಲ ಹಂತಗಳಲ್ಲಿಯೂ ಶೇ.94ರಷ್ಟು  ಪರಿಣಾಮಕಾರಿಯಾಗಿರುವುದನ್ನು ನಾವು ಖಚಿತ ಪಡಿಸಿಕೊಂಡಿದ್ದೇವೆ. ಹೀಗಾಗಿ ತುರ್ತು ಸಂದರ್ಭದಲ್ಲಿ ಲಸಿಕೆ ಬಳಕೆಗೆ ಅನುಮತಿ ನೀಡಿ ಎಂದು ಸಂಸ್ಥೆ ಕೇಳಿದೆ.

ಇನ್ನು ತುರ್ತು ವ್ಯಾಕ್ಸಿನೇಷನ್‌ಗಳನ್ನು ಅನುಮತಿಸಲು ಸಾಕಷ್ಟು ಫಿಜರ್ ಸಂಸ್ಥೆಯ ಲಸಿಕೆ ಸಿದ್ಧವಾಗಿದೆಯೇ ಎಂಬುದನ್ನು ಯು.ಎಸ್. ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್‌ ಪರಿಶೀಲನೆ ನಡೆಸಲಿದೆ. ಈ ಬಗ್ಗ ೆಪ್ರತಿಕ್ರಿಯೆ ನೀಡಿರುವ ಇಲಾಖೆಯ ಅಧಿಕಾರಿಯೊಬ್ಬರು ಲಸಿಕೆ ಅನುಮತಿಗೆ ಸಾಕಷ್ಚು ನಿಯಮಗಳಿದ್ದು, ಅವುಗಳ ಪರಿಶೀಲನೆ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com