ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ಕರೆ ನೀಡಿದ ಭಾರತ, ಯುಎನ್ ಎಸ್ ಸಿ ಕ್ರಮಕ್ಕೆ ಒತ್ತಾಯ

ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ಕರೆ ನೀಡಿರುವ ಭಾರತ, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆಯ ಭದ್ರತಾ ಪರಿಷತ್ ( ಯುಎನ್ ಎಸ್ ಸಿ) ಗೆ ಮನವಿ ಮಾಡಿದೆ.

Published: 21st November 2020 08:47 PM  |   Last Updated: 21st November 2020 08:48 PM   |  A+A-


tirumurti1

ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ

Posted By : Nagaraja AB
Source : UNI

ನ್ಯೂಯಾರ್ಕ್:  ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ಕರೆ ನೀಡಿರುವ ಭಾರತ, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆಯ ಭದ್ರತಾ ಪರಿಷತ್ ( ಯುಎನ್ ಎಸ್ ಸಿ) ಗೆ ಮನವಿ ಮಾಡಿದೆ.

ಅಪ್ಘಾನಿಸ್ತಾನದ ಶಾಂತಿ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ, ಯುದ್ಧ ಪೀಡಿತ ದೇಶದಲ್ಲಿ ತಕ್ಷಣ ಹಿಂಸಾಚಾರಕ್ಕೆ ಕಡಿವಾಣ ಹಾಕಲು ಕರೆ ನೀಡಿದರು.

ಅಪ್ಘಾನಿಸ್ತಾನ ಇಂದು ಪ್ರಮುಖ ತಿರುವಿನಲ್ಲಿದ್ದು ಅಂತಾರಾಷ್ಟ್ರೀಯ ಸಮುದಾಯ ಅದರಲ್ಲೂ ಭದ್ರತಾ ಪರಿಷತ್ ಸಂಬಂಧಪಟ್ಟವರಿಗೆ ಸರಿಯಾದ ಸಂದೇಶ ರವಾನಿಸುವ ಅಗತ್ಯವಿದೆ. ಭದ್ರತಾ ಪರಿಷತ್  ಹಿಂಸಾಚಾರ ಮತ್ತು ಭದ್ರತಾ ಪಡೆಗಳ ದುರ್ಬಳಕೆ ವಿರುದ್ಧ ಧ್ವನಿ ಎತ್ತಬೇಕು ಎಂದು ಸಲಹೆ ನೀಡಿದರು.

Stay up to date on all the latest ಅಂತಾರಾಷ್ಟ್ರೀಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp