ಕೋವಿಡ್-19: ಮಾಡರ್ನ ಲಸಿಕೆಯ ದರ ಬಿಡುಗಡೆ; ಪ್ರತೀ ಡೋಸ್ ನ ಬೆಲೆ ಎಷ್ಟು ಗೊತ್ತಾ?

ಅಮೆರಿಕ ಮೂಲದ ಬಯೋಟೆಕ್ ಸಂಸ್ಥೆ ಮಾಡರ್ನ ತನ್ನ ಕೋವಿಡ್-19 ಲಸಿಕೆಯ ದರ ಬಿಡುಗಡೆ ಮಾಡಿದ್ದು, ಪ್ರತೀ ಡೋಸ್ ಗೆ 25 ರಿಂದ 37 ಡಾಲರ್ ಹಣ ನಿಗದಿಪಡಿಸಿದೆ.
ಕೋವಿಡ್-19 ಲಸಿಕೆ
ಕೋವಿಡ್-19 ಲಸಿಕೆ

ಫ್ರಾಂಕ್ ಫರ್ಟ್:  ಅಮೆರಿಕ ಮೂಲದ ಬಯೋಟೆಕ್ ಸಂಸ್ಥೆ ಮಾಡರ್ನ ತನ್ನ ಕೋವಿಡ್-19 ಲಸಿಕೆಯ ದರ ಬಿಡುಗಡೆ ಮಾಡಿದ್ದು, ಪ್ರತೀ ಡೋಸ್ ಗೆ 25 ರಿಂದ 37 ಡಾಲರ್ ಹಣ ನಿಗದಿಪಡಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಸ್ಟೀಫನ್ ಬಾನ್ಸೆಲ್ ಜರ್ಮನ್ ಸಾಪ್ತಾಹಿಕ ವೆಲ್ಟ್ ಆಮ್ ಸೊಂಟಾಗ್ (ವಾಮ್ಸ್) ಗೆ ಮಾಹಿತಿ ನೀಡಿದ್ದು, ನಮ್ಮ ಕೋವಿಡ್ ಲಸಿಕೆ ಅಗ್ಗದ ದರದಿಂದ ಕೂಡಿದ್ದು, ಜ್ವರದ ಲಸಿಕೆಗೆ ಎಷ್ಟು ವೆಚ್ಚವಾಗುತ್ತದೆಯೇ ಅಷ್ಟೇ  ಖರ್ಚಾಗುತ್ತದೆ. ಪ್ರತೀ ಡೋಸ್ ಗೆ 10 ರಿಂದ ಸುಮಾರು 50 ಡಾಲರ್ ವೆಚ್ಚ ತಗುಲುತ್ತದೆ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಯೂರೋಪಿಯನ್ ಕಮಿಷನ್ 25 ಡಾಲರ್ ಗಿಂತ ಕಡಿಮೆ ದರಕ್ಕೆ ಕೋಟ್ಯಂತರ ಡೋಸ್ ಲಸಿಕೆ ಬೇಕು ಎಂದು ಪ್ರಸ್ತಾಪ ಕೂಡ ಸಲ್ಲಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮಾಡರ್ನಾ ಸಂಸ್ಥೆಯ ವಕ್ತಾರರು ಲಸಿಕೆ ಮಾರಾಟ ಸಂಬಂಧ ದಾಖಲೆಗಳು ಸಿದ್ದವಾಗುತ್ತಿದ್ದು,  ಶೀಘ್ರದಲ್ಲೇ ಒಪ್ಪಂದ ಅಂತಿಮಗೊಳಿಸುತ್ತೇವೆ ಎಂದು ಹೇಳಿದ್ದಾರೆ.  

ಈ ಹಿಂದೆ ತಮ್ಮ ಲಸಿಕೆಯ ಕೊನೆಯ ಹಂತದ ಕ್ಲಿನಿಕಲ್ ಪ್ರಯೋಗಗಳ ಮಧ್ಯಂತರ ಫಲಿತಾಂಶಗಳ ಅನ್ವಯ ಕೋವಿಡ್ 19 ಸೋಂಕಿತರ ಮೇಲೆ ಲಸಿಕೆ ಶೇ.94.5ರಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಿತ್ತು.  ಈ ಬಗ್ಗೆ ಮಾಹಿತಿ ನೀಡಿರುವ ಮಾಡರ್ನಾದ ಮುಖ್ಯ ಕಾರ್ಯನಿರ್ವಾಹಕ  ಸ್ಟೀಫನ್ ಬಾನ್ಸೆಲ್, ಸಂಸ್ಥೆಯು ಕಳೆದ ಜನವರಿಯಿಂದಲೂ ಲಸಿಕೆ ಮೇಲೆ ಕೆಲಸ ಮಾಡುತ್ತಿದ್ದು, ಇಂದು ಈ ಶ್ರಮದ ಫಲ ಲಭಿಸಿದೆ. ಲಸಿಕೆಯ ಮೂರನೇ ಹಂತದ ಪ್ರಯೋಗದ ಮದ್ಯಂತರ ವರದಿ ಶೇ.94.5ರಷ್ಟು ಪರಿಣಾಮಕಾರಿಯಾಗಿದೆ. ಅಂತೆಯೇ ಮಾಡರ್ನಾ ಸಂಸ್ಥೆ ತಮ್ಮ  ಲಸಿಕೆಯನ್ನು 2 ರಿಂದ 8 ಡಿಗ್ರಿ ತಾಪಮಾನದಲ್ಲಿ 30 ದಿನಗಳವರೆಗೂ ಶೇಖರಣೆ ಮಾಡಿ ಇಡಬಹುದು ಎಂದು ಹೇಳಿದೆ. 

ಸಂಸ್ಥೆಯ ಮೂಲಗಳ ಪ್ರಕಾರ ಈ ಲಸಿಕೆಯ ಮುಂದಿನ ಹಂತದ ಪ್ರಯೋಗ ಅಥವಾ ಸಂಶೋಧನೆಗಾಗಿ 30 ಸಾವಿರ ಮಂದಿ ಸ್ವಯಂ ಸೇವಕರನ್ನು ನೊಂದಾಯಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com