ಭೂತಾನ್ ನಲ್ಲಿ ಚೀನಾದಿಂದ ಗ್ರಾಮ ನಿರ್ಮಾಣ: ಡೊಕ್ಲಾಮ್ ಸಂಘರ್ಷದಿಂದ 9 ಕಿ.ಮೀ ವ್ಯಾಪ್ತಿಯಲ್ಲಿ ರಚನೆ

ಕಂಡಕಂಡಲ್ಲೆಲ್ಲಾ ಗಡಿ ಕ್ಯಾತೆ ತೆಗೆಯುವ ಚೀನಾ ಚಾಳಿ ಮುಂದುವರೆದಿದ್ದು, ಭೂತಾನ್ ಗೆ ಸೇರಿದ ಪ್ರದೇಶದಲ್ಲಿ 2 ಕಿ.ಮೀ ನಷ್ಟು ಒಳಗೆ ಪ್ರವೇಶಿಸಿರುವ ಚೀನಾ ಅಲ್ಲಿಯೇ ಗ್ರಾಮವೊಂದನ್ನು ನಿರ್ಮಾಣ ಮಾಡಿದೆ.
ಭೂತಾನ್ ನಲ್ಲಿ ಚೀನಾದಿಂದ ಗ್ರಾಮ ನಿರ್ಮಾಣ: ಡೊಕ್ಲಾಮ್ ಸಂಘರ್ಷದಿಂದ 9 ಕಿ.ಮೀ ವ್ಯಾಪ್ತಿಯಲ್ಲಿ ಸ್ಥಾಪನೆ
ಭೂತಾನ್ ನಲ್ಲಿ ಚೀನಾದಿಂದ ಗ್ರಾಮ ನಿರ್ಮಾಣ: ಡೊಕ್ಲಾಮ್ ಸಂಘರ್ಷದಿಂದ 9 ಕಿ.ಮೀ ವ್ಯಾಪ್ತಿಯಲ್ಲಿ ಸ್ಥಾಪನೆ

ನವದೆಹಲಿ: ಕಂಡಕಂಡಲ್ಲೆಲ್ಲಾ ಗಡಿ ಕ್ಯಾತೆ ತೆಗೆಯುವ ಚೀನಾ ಚಾಳಿ ಮುಂದುವರೆದಿದ್ದು, ಭೂತಾನ್ ಗೆ ಸೇರಿದ ಪ್ರದೇಶದಲ್ಲಿ 2 ಕಿ.ಮೀ ನಷ್ಟು ಒಳಗೆ ಪ್ರವೇಶಿಸಿರುವ ಚೀನಾ ಅಲ್ಲಿಯೇ ಗ್ರಾಮವೊಂದನ್ನು ನಿರ್ಮಾಣ ಮಾಡಿದೆ.

2017 ರಲ್ಲಿ ಚೀನಾದ ಸೈನಿಕರಿ ಹಾಗೂ ಭಾರತೀಯ ಸೈನಿಕರ ನಡುವಿನ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಡೊಕ್ಲಾಮ್ ನಿಂದ 9 ಕಿ.ಮೀ ದೂರದಲ್ಲಿ ಈ ಘಟನೆ ವರದಿಯಾಗಿದೆ. 

ಚೀನಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಯ ಪತ್ರಕರ್ತರೊಬ್ಬರು ಪೋಸ್ಟ್ ಮಾಡಿದ್ದ ಚಿತ್ರಗಳಿಂದ ಈ ಮಾಹಿತಿ ಲಭ್ಯವಾಗಿದೆ. ಈ ಚಿತ್ರಗಳು ವೈರಲ್ ಆಗುತ್ತಿದ್ದಂತೆಯೇ ಚೀನಾದ ಪತ್ರಕರ್ತರು ಇದನ್ನು ಡಿಲೀಟ್ ಕೂಡ ಮಾಡಿದ್ದಾರೆ.

ಭೂತಾನ್ ನ 2 ಕಿ.ಮೀ ಒಳಗೆ ಚೀನಾದ ಗ್ರಾಮ ಪಾಂಗ್ಡಾ ನಿರ್ಮಾಣಗೊಂಡಿದೆ ಎಂದು ಎನ್ ಡಿಟಿವಿ ವರದಿ ಪ್ರಕಟಿಸಿದೆ.

ಭೂತಾನ್ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿರುವುದು ಭಾರತಕ್ಕೂ ಆತಂಕಕಾರಿ ಅಂಶವೇ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com