ಜೋ ಬೈಡನ್ ಗೆಲುವು ಮಾನ್ಯ ಮಾಡಲು ಸಿದ್ಧವಿಲ್ಲ: ವ್ಲಾಡಿಮಿರ್ ಪುಟಿನ್

ಅಮೆರಿಕಾದ ಯಾವ ನಾಯಕನೊಂದಿಗಾದರೂ ತಾವು ಕಾರ್ಯನಿರ್ವಹಿಸಲು ಸಿದ್ದ ಎಂದಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದರೆ, ಅಮೆರಿಕಾ ಹೊಸ ಅಧ್ಯಕ್ಷರಾಗಿ ಜೋ ಬೈಡನ್ ಅವರ ಗೆಲುವನ್ನು ಮಾನ್ಯ ಮಾಡಲು ತಾವು ಸಿದ್ಧರಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 
ವ್ಲಾಡಿಮಿರ್ ಪುಟಿನ್
ವ್ಲಾಡಿಮಿರ್ ಪುಟಿನ್

ಮಾಸ್ಕೋ: ಅಮೆರಿಕಾದ ಯಾವ ನಾಯಕನೊಂದಿಗಾದರೂ ತಾವು ಕಾರ್ಯನಿರ್ವಹಿಸಲು ಸಿದ್ದ ಎಂದಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದರೆ, ಅಮೆರಿಕಾ ಹೊಸ ಅಧ್ಯಕ್ಷರಾಗಿ ಜೋ ಬೈಡನ್ ಅವರ ಗೆಲುವನ್ನು ಮಾನ್ಯ ಮಾಡಲು ತಾವು ಸಿದ್ಧರಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

ಜನರ ವಿಶ್ವಾಸ ಹೊಂದಿರುವ ನಾಯಕ ಚುನಾವಣೆಯಲ್ಲಿ ಗೆಲ್ಲುತ್ತಾನೆ ಎಂದು ಪುಟಿನ್ ಹೇಳಿದ್ದಾರೆ. ಆ ಗೆಲುವನ್ನು ಪ್ರತಿಪಕ್ಷಗಳು ಸಹ ಒಪ್ಪಬೇಕು. ಫಲಿತಾಂಶನ್ನು ಕಾನೂನುಬದ್ಧವಾಗಿ ಪ್ರಕಟಿಸಿದರೆ ಅದನ್ನು ನಾವು ಮಾನ್ಯ ಮಾಡುವುದಾಗಿ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್  ಹಾಗೂ ಪುಟಿನ್ ಆಪ್ತರು ಎಂಬ  ಪ್ರಚಾರ ನಡೆಯುತ್ತಿದೆ. ಜೋ ಬಿಡೆನ್ ಅಮೆರಿಕಾ ಅಧ್ಯಕ್ಷರಾದರೆ, ರಷ್ಯಾ ವಿರುದ್ಧ ಮತ್ತಷ್ಟು ದಿಗ್ಬಂಧನಗಳನ್ನು ವಿಧಿಸಬಹುದು ಎಂದು ಪುಟಿನ್ ಅನುಮಾನಿಸುತ್ತಿದ್ದಾರೆ ಎಂಬುದು ವರದಿ.

ನವೆಂಬರ್ 8ರಂದು ನಡೆದ ಮತ ಏಣಿಕೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ 306 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು ಹಾಲಿ ಅಧ್ಯಕ್ಷ, ಡೊನಾಲ್ಡ್ ಟ್ರಂಪ್ ಅವರು 232 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. 

ಜೋ ಬೈಡನ್ ಒಟ್ಟಾರೆ 51ರಷ್ಟು ಮತ ಪಡೆದಿದ್ದರೆ, ಡೊನಾಲ್ಡ್ ಟ್ರಂಪ್ 47.2ರಷ್ಟು ಮತ ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com