ಚೀನಾ ಸೇನೆ ಯುದ್ಧಗಳನ್ನು ಗೆಲ್ಲುವ ಬಗ್ಗೆ ಗಮನಹರಿಸಬೇಕು; 2027ರ ವೇಳೆಗೆ ಅಮೆರಿಕಾ ಪಡೆಗಳಿಗೆ ಸಮನಾಗಬೇಕು: ಕ್ಸಿ ಜಿನ್‌ಪಿಂಗ್
2027 ರ ವೇಳೆಗೆ ಪಿಎಲ್‌ಎ ಯನ್ನು ಅಮೆರಿಕಾ ಸೇನೆಗೆ ಸಮನಾಗಿ ತಯಾರು ಮಾಡುವ ಯೋಜನೆಯನ್ನು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ರೂಪಿಸಿದ್ದು ಇದಕ್ಕಾಗಿ ನೈಜ ಯುದ್ಧ ಪರಿಸ್ಥಿತಿಗಳಲ್ಲಿ ತರಬೇತಿಯ ಹೆಚ್ಚಳ ಹಾಗೂ ಯುದ್ಧಗಳನ್ನು ಗೆಲ್ಲುವ ಸಾಮರ್ಥ್ಯ ಹೆಚ್ಚಳಕ್ಕೆ ಸಶಸ್ತ್ರ ಪಡೆಗಳಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆದೇಶಿಸಿದ್ದಾರೆ.
Published: 26th November 2020 03:20 PM | Last Updated: 26th November 2020 07:10 PM | A+A A-

ಕ್ಸಿ ಜಿನ್‌ಪಿಂಗ್
ಬೀಜಿಂಗ್: 2027 ರ ವೇಳೆಗೆ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯನ್ನು ಅಮೆರಿಕಾ ಸೇನೆಗೆ ಸಮನಾಗಿ ತಯಾರು ಮಾಡುವ ಯೋಜನೆಯನ್ನು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ರೂಪಿಸಿದ್ದು ಇದಕ್ಕಾಗಿ ನೈಜ ಯುದ್ಧ ಪರಿಸ್ಥಿತಿಗಳಲ್ಲಿ ತರಬೇತಿಯ ಹೆಚ್ಚಳ ಹಾಗೂ ಯುದ್ಧಗಳನ್ನು ಗೆಲ್ಲುವ ಸಾಮರ್ಥ್ಯ ಹೆಚ್ಚಳಕ್ಕೆ ಸಶಸ್ತ್ರ ಪಡೆಗಳಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆದೇಶಿಸಿದ್ದಾರೆ.
ಇತರ ಪ್ರಮುಖ ಶಕ್ತಿಗಳೊಂದಿಗೆ ಸಮನಾಗಿ ಆಧುನಿಕ ಹೋರಾಟದ ಶಕ್ತಿಯಾಗಿ ತನ್ನನ್ನು ತಾನು ಬದಲಿಸಿಕೊಳ್ಳಲು ಲು ಬಯಸಿದರೆ ಪಿಎಲ್‌ಎ ಕೃತಕ ಬುದ್ಧಿಮತ್ತೆಯಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಲಬೇಕು ಎಂದು ಇತ್ತೀಚೆಗೆ ಅವರು ಹೇಳಿದ್ದರು. ಇದೀಗ ಕ್ಸಿ ಮಿಲಿಟರಿ ಯುದ್ಧಗಳನ್ನು ಗೆಲ್ಲಲು ತರಬೇತಿಯತ್ತ ಗಮನ ಹರಿಸಬೇಕು ಎಂದಿದ್ದಾರೆ.
ಕ್ಸಿ ಆಡಳಿತಾರೂಢ ಕಮಿನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಮತ್ತು ಪ್ರೆಸಿಡೆನ್ಸಿಗೆ ಜೀವಿತಾವಧಿಯ ಅಧಿಕಾರ ಹೊಂದಿದ್ದು, ಕೇಂದ್ರ ಮಿಲಿಟರಿ ಆಯೋಗದ (ಸಿಎಮ್ಸಿ) ಅಧ್ಯಕ್ಷರೂ ಆಗಿದ್ದಾರೆ,
ಸಿಎಮ್‌ಸಿ ಸಭೆಯಲ್ಲಿ ಮಾತನಾಡಿದ ಕ್ಸಿ, ಹೊಸ ಯುಗಕ್ಕೆ ಮಿಲಿಟರಿಯನ್ನು ಬಲಪಡಿಸುವ ಬಗ್ಗೆ ಮತ್ತು ಮಿಲಿಟರಿ ಕಾರ್ಯತಂತ್ರದ ಬಗ್ಗೆ ಪಕ್ಷದ ಚಿಂತನೆಯ ಅನುಷ್ಠಾನಕ್ಕೆ ಒತ್ತು ನೀಡಿದರು ಎಂದು ಸರ್ಕಾರಿ ಸುದ್ದಿ ಸಂಸ್ಥೆ Xinhua ವರದಿ ಮಾಡಿದೆ.
ಹೊಸ ಮಾದರಿಯ ಮಿಲಿಟರಿ ತರಬೇತಿ ವ್ಯವಸ್ಥೆಯನ್ನು ವೇಗವಾಗಿ ಸ್ಥಾಪಿಸಬೇಕು ಮತ್ತು ಹೊಸ ಯುಗಕ್ಕೆ ಬಲವಾದ ಸಶಸ್ತ್ರ ಪಡೆಗಳನ್ನು ನಿರ್ಮಿಸುವ ಮತ್ತುವಿಶ್ವ ದರ್ಜೆಯ ಮಿಲಿಟರಿಯಾಗಿ ಅಭಿವೃದ್ಧಿಪಡಿಸುವ ಪಕ್ಷದ ಗುರಿಯನ್ನು ಸಾಧಿಸಲು ತಮಗೆ ಅಗತ್ಯ ಬೆಂಬಲವು ಬೇಕೆಂದು ಅವರು ಹೇಳಿದ್ದಾರೆ. ಆರು ತಿಂಗಳ ಕಾಲ ಪೂರ್ವ ಲಡಾಖ್‌ನಲ್ಲಿ ನಡೆದ ಭಾರತ-ಚೀನಾ ಗಡಿ ಗುದ್ದಾಟದ ಹಿನ್ನೆಲೆಯಲ್ಲಿ ಅವರ ಅಭಿಪ್ರಾಯಗಳು ಮುಖ್ಯವಾಗಿದೆ.
ಚೀನಾದ ಮಿಲಿಟರಿ ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರದ ಮೇಲೆ ಹೆಚ್ಚಿನ ಪ್ರಾಬಲ್ಯ ಸಾಧಿಸಲು ಬಯಸುತ್ತದೆ.
ಮಿಲಿಟರಿ ತರಬೇತಿಯು ಮಿಲಿಟರಿಯ ನಿಯಮಿತ ಕೆಲಸದ ಭಾಗವಾಗಿದೆ. ಅದು ತನ್ನ ಯುದ್ಧ ಸಾಮರ್ಥ್ಯವನ್ನು ಸೃಷ್ಟಿಸುವ, ಸುಧಾರಿಸುವ ಶಕ್ತಿಗಳ ಸಾಧನವಾಗಿದೆ ಅಲ್ಲದೆ ಮಿಲಿಟರಿ ಸನ್ನದ್ಧತೆಯ ಅತ್ಯಂತ ನೇರ ರೂಪವಾಗಿದೆ ಎಂದು ಕ್ಸಿ ಹೇಳಿದರು
ಚೀನಾ ಈ ವರ್ಷ ಸುಮಾರು 179 ಶತಕೋಟಿ ಡಾಲರ್ ಗಳ ರಕ್ಷಣಾ ಬಜೆಟ್ಅನ್ನು ಅನುಮೋದಿಸಿದೆ, ಇದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ರಕ್ಷಣಾ ವೆಚ್ಚ 732 ಬಿಲಿಯನ್ ಡಾಲರ್ ಗಳ ನಂತರ ಎರಡನೇ ಅತಿ ಹೆಚ್ಚಿನ ಮೊತ್ತವಾಗಿದೆ.