ಪಾಕಿಸ್ತಾನಕ್ಕೆ ಅರಬ್ ನಿಂದ ಶಾಕ್; ಕಾರ್ಮಿಕರಿಗೆ ನೋ ಎಂಟ್ರಿ ಬೋರ್ಡ್!

ಪಾಕಿಸ್ತಾನಕ್ಕೆ ಯುಎಇ ಶಾಕ್ ನೀಡಿದ್ದು, ಪಾಕ್ ನ ಕಾರ್ಮಿಕರನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ. 
ಪಾಕಿಸ್ತಾನ
ಪಾಕಿಸ್ತಾನ

ನವದೆಹಲಿ: ಪಾಕಿಸ್ತಾನಕ್ಕೆ ಯುಎಇ ಶಾಕ್ ನೀಡಿದ್ದು, ಪಾಕ್ ನ ಕಾರ್ಮಿಕರನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ. 13 ರಾಷ್ಟ್ರಗಳ ಉದ್ಯೋಗಿಗಳಿಗೆ ನಿರ್ಬಂಧ ವಿಧಿಸಿರುವ ಯುಎಇ ಈ ಪಟ್ಟಿಯಲ್ಲಿ ಪಾಕಿಸ್ತಾನವನ್ನೂ ಸೇರಿಸಿದೆ. 

ಯುಎಇ ಈ ರೀತಿ 13 ರಾಷ್ಟ್ರಗಳಿಂದ ಕಾರ್ಮಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದಕ್ಕೆ ಕೋವಿಡ್-19 ಕಾರಣವನ್ನು ನೀಡಿದ್ದು, ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದೆ. 

ಭದ್ರತಾ ದೃಷ್ಟಿಯಿಂದ ಅಫ್ಘನ್ನರು, ಪಾಕಿಸ್ತಾನಿಗಳಿಗೆ ಹೊಸದಾಗಿ ವೀಸಾ ನೀಡಲು ನಿರಾಕರಿಸಲಾಗುತ್ತಿರುವುದು ಅಲ್ ಜಜೀರಾ ಸುದ್ದಿ ಮೂಲಕ ತಿಳಿದುಬಂದಿದೆ. ನಿಷೇಧದ ಪಟ್ಟಿಯಲ್ಲಿ ಸಿರಿಯಾ, ಸೊಮಾಲಿಯಾ, ಇರಾಕ್, ಯೆಮೆನ್ ಸೇರಿದಂತೆ ಸೌದಿ ವಿರೋಧಿ ರಾಷ್ಟ್ರಯಾದ ಟರ್ಕಿಯೂ ಸೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com